Horoscope Today : ದಿನಭವಿಷ್ಯ : ಜುಲೈ 01-07-2023

ಮೇಷರಾಶಿ
(Horoscope Today) ಆಶಾವಾದಿಗಳಾಗಿರಿ. ನಿಮ್ಮ ಆತ್ಮವಿಶ್ವಾದ ನಿರೀಕ್ಷೆಗಳು ನಿಮ್ಮ ಆಸೆಗಳನ್ನು ಈಡೇರಿಕೆ ಮಾಡುತ್ತವೆ. ಹಣಕಾಸಿನ ವಿಚಾರದಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಳ್ಳುವಿರಿ. ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ದೊರೆಯಲಿದೆ. ಸಂಗಾತಿಯೊಂದಿಗೆ ಉತ್ತಮ ದಿನವನ್ನು ಕಳೆಯುವಿರಿ.

ವೃಷಭರಾಶಿ
ಆತ್ಮವಿಶ್ವಾಸ ಸುತ್ತಮುತ್ತಲಿನ ಜನರನ್ನು ಮೆಚ್ಚಿಸಲು ಸಹಕಾರಿಯಾಗಲಿದೆ. ಆರ್ಥಿಕವಾಗಿ ಉತ್ತಮವಾದ ದಿನ. ಬಿಡುವಿನ ವೇಳೆಯಲ್ಲಿ ಬಾಕಿ ಉಳಿದ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ವೈವಾಹಿಕ ಜೀವನದ ತೊಡಕುಗಳು ಬಗೆಹರಿಯಲಿವೆ. ಬುದ್ದಿವಂತಿಕೆಯಿಂದ ಕೆಲಸ ಕಾರ್ಯಗಳಲ್ಲಿ ಗೆಲುವು ದೊರೆಯಲಿದೆ.

ಮಿಥುನರಾಶಿ
ಆರೋಗ್ಯವು ಇಂದು ಪರಿಪೂರ್ಣವಾಗಿ ಇರುತ್ತದೆ. ಹಣಕಾಸು ಖರ್ಚು ಮಾಡುವ ವೇಳೆಯಲ್ಲಿ ಎಚ್ಚರಿಕೆ ಅಗತ್ಯ. ಎಚ್ಚರಿಕೆ ತಪ್ಪಿದ್ರೆ ಮುಂದಿನ ದಿನಗಳಲ್ಲಿ ಭಾರೀ ಸಮಸ್ಯೆ ಎದುರಿಸಬೇಕಾಗುತ್ತದೆ. ಬಿಡುವಿನ ವೇಳೆಯಲ್ಲಿ ಹೊಸದನ್ನು ಕರೆಯಲು ಯತ್ನಿಸಿ. ಸಂಗಾತಿಯ ಜೊತೆಗೆ ಉತ್ತಮ ಸಮಯವನ್ನು ಕಳೆಯುವಿರಿ.

ಕರ್ಕಾಟಕರಾಶಿ
ಗಣನೀಯ ಪ್ರಮಾಣದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ನಿಮ್ಮ ಸಹಾಯಕ್ಕೆ ನಿಲ್ಲಲಿದ್ದಾರೆ. ಜೀವನ ಸಂಗಾತಿ ಆಂತರಿಕ ಸೌಂದರ್ಯ ಇಂದು ಹೊರಹೊಮ್ಮುತ್ತದೆ. ಯೋಗ ಮತ್ತು ಧ್ಯಾನದಿಂದ ಮಾನಸಿಕ ಸೌಂದರ್ಯ ವೃದ್ದಿಯಲಾಗಿದೆ.

ಸಿಂಹರಾಶಿ
ಪ್ರವಾಸದ ವೇಳೆಯಲ್ಲಿ ಅಪರಿಚಿತರು ನಿಮಗೆ ಕಿರಿಕಿರಿ ಮಾಡಲಿದ್ದಾರೆ. ಮಾನಸಿಕವಾಗಿ ನೆಮ್ಮದಿಯ ದಿನ. ಹೂಡಿಕೆಯಿಂದ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಬಿಡುವಿನ ವೇಳೆಯಲ್ಲಿ ಮಕ್ಕಳ ಜೊತೆಗೆ ಸಂಭ್ರಮದ ಕ್ಷಣವನ್ನು ಆಸ್ವಾಧಿಸುವಿರಿ.

ಕನ್ಯಾರಾಶಿ
ಬಿಡುವಿಲ್ಲದ ಕಾರ್ಯದ ಒತ್ತಡದ ನಡುವೆಯೂ ನೀವಿಂದು ವಿಶ್ರಾಂತಿಯನ್ನು ಪಡೆಯುವಿರಿ. ಕಾರಣವಿಲ್ಲದೇ ನೀವು ಸಂಗಾತಿಯ ಜೊತೆಗೆ ಇಂದು ಜಗಳವಾಡುವ ಸಾಧ್ಯತೆಯಿದೆ. ತಾತ್ಕಾಲಿಕವಾಗಿ ಸಾಲ ನೀಡುವವರನ್ನು ನಿರ್ಲಕ್ಷ್ಯಿಸಿ. ಮಕ್ಕಳಿಗೆ ವಿದ್ಯಾಭ್ಯಾಸವನ್ನು ಉತ್ತಮ.

ತುಲಾರಾಶಿ
ಭೂಮಿ ಖರೀದಿ ಮತ್ತು ಮಾರಾಟ ಮಾಡುವವರಿಗೆ ಉತ್ತಮ ದಿನ. ಇಡೀ ದಿನ ನೀವು ಸಂತೋಷವಾಗಿ ಇರುತ್ತೀರಿ. ಸಂಗಾತಿಯಿಂದ ಸಂತೋಷ ಅನುಭವಿಸುವಿರಿ. ಮನೆಯಲ್ಲಿನ ವಾತಾವರಣ ಬೇಸರ ಮೂಡಿಸಲಿದೆ. ಸಮಯವನ್ನು ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬೇಡಿ.

ವೃಶ್ಚಿಕರಾಶಿ
ಹಳೆಯ ಸಮಸ್ಯೆಗಳು ಇಂದು ಪರಿಹಾರವಾಗಲಿದೆ. ನೀವು ಆರ್ಥಿಕವಾಗಿ ಸಾಕಷ್ಟು ಪ್ರಯೋಜನವನ್ನು ಪಡೆಯಲಿದ್ದೀರಿ. ಸಂಗಾತಿಯು ನಿಮಗೆ ಸ್ವರ್ಗ ಭೂಮಿಯ ಮೇಲಿದೆ ಎಂದು ತಿಳಿಯಪಡಿಸುತ್ತಾರೆ. ಸಾಮಾಜಿಕ ಕಾರ್ಯಗಳಿಂದಾಗಿ ನಿಮಗೆ ನೆಮ್ಮದಿ ದೊರೆಯಲಿದೆ. ಕುಟುಂಬ ಸದಸ್ಯರಿಗೆ ಪ್ರಾಮುಖ್ಯತೆಯನ್ನು ನೀಡಿ.

ಧನಸ್ಸುರಾಶಿ
ಹೆಚ್ಚು ಆಶಾವಾದಿಯಾಗಿರಿ. ಆತ್ಮವಿಶ್ವಾಸ ಹೆಚ್ಚಲಿದೆ. ಆಭರಣದ ಮೇಲಿನ ಹೂಡಿಕೆ ನಿಮಗೆ ಹೆಚ್ಚು ಲಾಭದಾಯಕವಾಗಿ ಪರಿಣಮಿಸಲಿದೆ. ಹೆತ್ತವರನ್ನು ಮೆಚ್ಚಿಸಲು ನಾನಾ ಕಸರತ್ತು ನಡೆಸಬೇಕಾಗುತ್ತದೆ. ಸಂಗಾತಿಯು ಇಂದು ಕಷ್ಟಕರವಾದ ಪರಿಸ್ಥಿತಿಯಲ್ಲಿ ನಿಮ್ಮ ಬೆಂಬಲಕ್ಕೆ ಬರಲಿದ್ದಾರೆ. ಪರಿಣಿತರ ಸಲಹೆಯ ಮೇರೆಗೆ ಹೂಡಿಕೆ ಮಾಡುವುದು ಉತ್ತಮ.

ಮಕರರಾಶಿ
ನೀವಿಂದು ಆರೋಗ್ಯಕರವಾಗಿ ಇರಲಿದ್ದೀರಿ. ಸ್ನೇಹಿತರೊಂದಿಗೆ ಕಾಲ ಕಳೆಯುವಿರಿ. ಆಪ್ತ ಸ್ನೇಹಿತರ ಸಹಕಾರದಿಂದ ಹಣಕಾಸಿನ ಲಾಭ ದೊರೆಯಲಿದೆ. ವೈಯಕ್ತಿಕ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಿ. ವೈವಾಹಿಕ ಜೀವನದಲ್ಲಿನ ತೊಡಕುಗಳು ನಿವಾರಣೆಯಾಗಲಿದೆ. ಇದನ್ನೂ ಓದಿ : Amaranth fasting Satyagraha : ಮಂಗಳೂರು : ಹಿಂದೂ ವಿರೋಧಿ ನಡೆ ಕೈಬಿಡಲಿ, ಇಲ್ಲವಾದ್ರೆ ಉಪವಾಸ ಸತ್ಯಾಗ್ರಹ ಧರ್ಮಸಭೆಯಲ್ಲಿ ಸ್ವಾಮೀಜಿಗಳ ಎಚ್ಚರಿಕೆ

ಕುಂಭರಾಶಿ
ಅನಿರೀಕ್ಷಿತ ಬಿಲ್‌ಗಳು ನಿಮ್ಮ ಹಣಕಾಸಿನ ಹೊರೆಯನ್ನು ಹೆಚ್ಚುಸುತ್ತದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬ ಸದಸ್ಯರ ನಡುವೆ ಜಗಳವಾಗುವ ಸಾಧ್ಯತೆಯಿದೆ. ದೂರದ ಸಂಬಂಧಿಯೋರ್ವರು ಪೂರ್ವ ಸೂಚನೆಯನ್ನೇ ನೀಡದೇ ನಿಮ್ಮನ್ನು ಇಂದು ಭೇಟಿ ಮಾಡುವ ಸಾಧ್ಯತೆಯಿದೆ. ನಿಮ್ಮ ಗುಣದ ಬಗ್ಗೆ ಇತರರು ಮೆಚ್ಚುಗೆಯ ಮಾತನ್ನಾಡುತ್ತಾರೆ. ಇದನ್ನೂ ಓದಿ : Ajit Agarkar : ಬಿಸಿಸಿಐ ಆಯ್ಕೆ ಸಮಿತಿಗೆ ಅಜಿತ್ ಅಗರ್ಕರ್ ಚೇರ್ಮನ್ ? ರೇಸ್’ನಲ್ಲಿದ್ದಾರೆ ವೆಂಗ್ಸರ್ಕರ್, ಶಾಸ್ತ್ರಿ

ಮೀನರಾಶಿ
ಸ್ನೇಹಿತರೊಂದಿಗೆ ಸಂಜೆ ಆಹ್ಲಾದಕರವಾಗಿ ಇರುತ್ತದೆ. ಅಹಿತರಕ ಆಹಾರ ಹಾಗೂ ಪಾನೀಯಗಳ ಬಗ್ಗೆ ಎಚ್ಚರಿಕೆಯನ್ನು ವಹಿಸಿ. ಅನಿರೀಕ್ಷಿತ ಸಂದೇಶ ಕುಟುಂಬಕ್ಕೆ ಉತ್ಸಾಹವನ್ನು ತರುತ್ತದೆ. ಉದ್ಯೋಗ ಸ್ಥಳದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಸಂಗಾತಿಯಿಂದ ಸಹಕಾರ ದೊರೆಯಲಿದೆ.

Comments are closed.