Boat Tragedy : ಮೀನುಗಾರಿಕಾ ಬೋಟ್‌ ಬಂಡೆಗೆ ಢಿಕ್ಕಿ : 6 ಮಂದಿ ಮೀನುಗಾರರ ರಕ್ಷಣೆ

ಮಲ್ಪೆ : ಮೀನುಗಾರಿಕೆ ಮುಗಿಸಿ ಬಂದರಿಗೆ ವಾಪಾಸಾಗುತ್ತಿದ್ದ ವೇಳೆಯಲ್ಲಿ ಮಲ್ಪೆಯ ಸಮೀಪದಲ್ಲಿ ಬೋಟ್‌ ಬಂಡೆಗೆ ಢಿಕ್ಕಿ ಹೊಡೆದು ಮುಳುಗಡೆಯಾಗಿದೆ. ಕಲ್ಯಾಣಪುರದ ಭಾರತಿ ತಿಂಗಳಾಯ ಅವರಿಗೆ ಸೇರಿದ ಶ್ರೀನವಶಕ್ತಿ ಬೋಟ್‌ನಲ್ಲಿದ್ದ ಆರು ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ಅಕ್ಟೋಬರ್‌ ೨೫ರಂದು ಬೋಟ್‌ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ಮುಗಿಸಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಬೋಟ್‌ ಕಲ್ಲಿಗೆ ಬಡಿದಿದೆ. ಘಟನೆಯಿಂದಾಗಿ ಬೋಟ್‌ನ ಅಡಿಭಾಗಕ್ಕೆ ಹಾನಿಯುಂಟಾಗಿದೆ. ಬೋಟ್‌ ಒಳಗಡೆ ನೀರು ತುಂಬಿ ಮುಳುಗಡೆಯಾಗಿತ್ತು. ನಂತರದಲ್ಲಿ ಸಮೀಪದಲ್ಲಿದ್ದ ಯಶ್ವಿನ್‌, ಕಾವೇರಿ, ಚಿರಾಗ್‌, ಮಹಾಕಾಳಿ, ನಿಶಾನ್ ಬೋಟಿನವರು ಅಪಘಾತಕ್ಕೀಡಾದ ಬೋಟಿನಲ್ಲಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ.

ಬೋಟ್‌ ಮುಳುಗಡೆಯಾಗುತ್ತಿದ್ದಂತೆಯೇ ಮೀನು, ಬಲೆ ಹಾಗೂ ಇನ್ನಿತರ ಸಲಕರಣೆಗೆ ಸಮುದ್ರ ಪಾಲಾಗಿದ್ದು, ಸುಮಾರು 20 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನೆಯ ಕುರಿತು ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಕೊರೊನಾ 3ನೇ ಅಲೆ ಅಬ್ಬರ : ಶಾಲೆ ಸ್ಥಗಿತದ ಬಗ್ಗೆ ಶಿಕ್ಷಣ ಸಚಿವರ ಮಹತ್ವದ ಮಾಹಿತಿ

ಇದನ್ನೂ ಓದಿ : ಉಪ್ಪುಂದ ಮೂಲದ ಗುತ್ತಿಗೆದಾರ ಯು.ಬಿ. ಶೆಟ್ಟಿಗೆ ಐಟಿ ಶಾಕ್‌

( 6 fishermen saved, fishing Boat crashed to Rock )

Comments are closed.