RBI ಗವರ್ನರ್‌ ಆಗಿ ಶಕ್ತಿಕಾಂತ ದಾಸ್ ಮರು ನೇಮಕ

ನವದೆಹಲಿ : ಭಾರತೀಯ ರಿಸರ್ವ್‌ ಬ್ಯಾಂಕಿನ (Reserve Bank of India) ಗವರ್ನರ್‌ ಆಗಿ ಶಕ್ತಿಕಾಂತ್‌ ದಾಸ್‌ ಅವರು ಮತ್ತೆ ಮೂರು ವರ್ಷಗಳ ಅವಧಿಗೆ ಮರು ನೇಮಕ ಗೊಂಡಿದ್ದಾರೆ. ಈ ಮೂಲಕ RBI ನ 25 ನೇ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಶಕ್ತಿಕಾಂತ ದಾಸ್ ಅವರು ಡಿಸೆಂಬರ್ 11, 2018 ರಂದು ಮೂರು ವರ್ಷಗಳ ಅವಧಿಗೆ ನೇಮಕವಾಗಿದ್ದರು. ಇದೀಗ ಶಕ್ತಿಕಾಂತ್‌ ದಾಸ್‌ ಅವರನ್ನೇ ಮರು ನೇಮಕ ಮಾಡಲಾಗಿದೆ.

ಡಿಸೆಂಬರ್‌ 10ರ ನಂತರ ಮೂರು ವರ್ಷಗಳ ಅವಧಿಗೆ ಶಕ್ತಿಕಾಂತ್‌ ದಾಸ್‌ ಅವರನ್ನು ನೇಮಕ ಮಾಡುವ ಕುರಿತು ಸಂಪುಟ ನೇಮಕಾತಿ ಸಮಿತಿ ಅನುಮೋದನೆಯನ್ನು ನೀಡಿದೆ. ಗುರುವಾರ ತಡರಾತ್ರಿ ನಡೆದ ಸಂಪುಟದ ನೇಮಕಾತಿ ಸಮಿತಿ ಈ ನಿರ್ಧಾರಕ್ಕೆ ಅನುಮೋದನೆ ನೀಡಿದೆ. ದಾಸ್ ಅವರು ಈ ಹಿಂದೆ ಹಣಕಾಸು ಸಚಿವಾಲಯದಲ್ಲಿ ಆರ್ಥಿಕ ವ್ಯವಹಾರ ಗಳ ಇಲಾಖೆಯ ಕಾರ್ಯದರ್ಶಿಯಾಗಿದ್ದರು ಮತ್ತು ಡಿಸೆಂಬರ್ 11, 2018 ರಂದು ಮೂರು ವರ್ಷಗಳ ಅವಧಿಗೆ ಕೇಂದ್ರೀಯ ಬ್ಯಾಂಕ್‌ನ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.

ಶಕ್ತಿಕಾಂತ ದಾಸ್ ಅವರು ಆಡಳಿತದ ವಿವಿಧ ಕ್ಷೇತ್ರಗಳಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ ಮತ್ತು ಹಣಕಾಸು, ತೆರಿಗೆ, ಕೈಗಾರಿಕೆಗಳು, ಮೂಲಸೌಕರ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರು ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವೀಧರ ರಾಗಿದ್ದಾರೆ.

ಭಾರತ ಸರ್ಕಾರದ ಹಣಕಾಸು ಸಚಿವಾಲಯದಲ್ಲಿ ಅವರ ಸುದೀರ್ಘ ಅಧಿಕಾರಾವಧಿಯಲ್ಲಿ, ಅವರು 8 ಕೇಂದ್ರ ಬಜೆಟ್‌ಗಳ ತಯಾರಿಕೆಯಲ್ಲಿ ನೇರವಾಗಿ ಸಂಬಂಧ ಹೊಂದಿದ್ದರು. ದಾಸ್ ಅವರು ವಿಶ್ವ ಬ್ಯಾಂಕ್, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ), ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ (ಎನ್‌ಡಿಬಿ) ಮತ್ತು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ (ಎಐಐಬಿ) ಗಳಲ್ಲಿ ಭಾರತದ ಪರ್ಯಾಯ ಗವರ್ನರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು IMF, G20, BRICS, SAARC ಮುಂತಾದ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಇದನ್ನೂ ಓದಿ : 10 ನಿಮಿಷದಲ್ಲಿ ಉಚಿತವಾಗಿ ಸಿಗುತ್ತೆ ಪಾನ್‌ಕಾರ್ಡ್‌ : ದಾಖಲೆ ಇಲ್ಲದೇ ಪಾನ್‌ ಪಡೆಯೋದು ಹೇಗೆ ಗೊತ್ತಾ ?

ಇದನ್ನೂ ಓದಿ : ಪಿಂಚಣಿದಾರರಿಗೆ ಗುಡ್‌ನ್ಯೂಸ್‌ : ಎಸ್‌ಬಿಐ ಆರಂಭಿಸಿಗೆ ವಿಶೇಷ ವೆಬ್‌ಸೈಟ್‌

(Shaktikanta Das reappointed as RBI Governor for three more years)

Comments are closed.