ಬ್ರಹ್ಮಾವರ: ಮೀನು ಹಿಡಿಯಲು ತೆರಳಿದ್ದ ವೇಳೆ ದುರಂತ, ದೋಣಿ ಮಗುಚಿ ನಾಲ್ವರು ಸಾವು

ಬ್ರಹ್ಮಾವರ (Brahmavar) : ಮೀನು ಹಿಡಿಯಲು ತೆರಳಿದ್ದ ವೇಳೆಯಲ್ಲಿ ದೋಣಿ ಮಗುಚಿ (four people drowned river) ನಾಲ್ವರು ಸಾವನ್ನಪ್ಪಿ, ಮೂವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಕುಕ್ಕಡೆ ಕುದ್ರು ಎಂಬಲ್ಲಿ ನಡೆದಿದೆ.

ಬ್ರಹ್ಮಾವರ (Brahmavar) ಸಮೀಪದ ಹೂಡೆಯ ನಿವಾಸಿ ಫೈಝಾನ್‌, ಇಬಾದ್‌, ಸುಫಾನ್‌ ಮತ್ತು ಫರಾನ್‌ ಎಂಬವರೇ ಮೃತ ದುರ್ದೈವಿಗಳು. ಒಟ್ಟು ಏಳು ಮಂದಿ ಮೀನು ಹಿಡಿಯುವ ಸಲುವಾಗಿ ದೋಣಿಯಲ್ಲಿ ತೆರಳಿದ್ದರು. ಈ ವೇಳೆಯಲ್ಲಿ ದೋಣಿ ಮಗುಚಿ ಓರ್ವ ನದಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಮೂವರು ನದಿಗೆ ಹಾರಿದ್ದು, ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದಂತೆಯೇ ನಾಲ್ವರು ಕೂಡ ನೀರುಪಾಲಾಗಿದ್ದಾರೆ. ಮೂವರು ಈಜಿಕೊಂಡು ದಡ ಸೇರಿದ್ದಾರೆ.

ರಂಝಾನ್‌ ರಜೆಯ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ಯುವಕರು ಹೂಡೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ಸಂಜೆಯ ಹೊತ್ತಲ್ಲಿ ನದಿಗೆ ತೆರಳಿದ್ದ ವೇಳೆಯಲ್ಲಿ ಈ ದುರಂತ (four people drowned river) ಸಂಭವಿಸಿದೆ. ಸ್ಥಳೀಯರ ಸಹಕಾರದೊಂದಿಗೆ ಶವಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಆರಂಭದಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿದ್ದರೂ ಕೂಡ ಓರ್ವನ ಶವ ಪತ್ತೆಯಾಗಿರಲಿಲ್ಲ. ಹೀಗಾಗಿ ಸಾಕಷ್ಟು ಹುಡುಕಾಟವನ್ನು ನಡೆಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಪ್ಯಾನ್ ಕಾರ್ಡ್ ವಂಚನೆ : ಆನ್‌ಲೈನ್‌ನಲ್ಲಿ ದೂರು ಸಲ್ಲಿಸಬಹುದು, ಹೇಗೆ ಗೊತ್ತಾ ?

ಇದನ್ನೂ ಓದಿ : ವಿಷ ಅನಿಲ ಸೇವಿಸಿ ಒಂದೇ ಕುಟುಂಬದ ಮೂವರು ಸಾವು

15 ವರ್ಷದ ಬಾಲಕಿಯ ಅಪಹರಿಸಿ 6 ತಿಂಗಳ ಕಾಲ ಅತ್ಯಾಚಾರ

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಆರು ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿರುವ ನೀಚ ಕೃತ್ಯ ಉತ್ತರಪ್ರದೇಶದ ಬಲ್ಲಿಯಾ ಎಂಬಲ್ಲಿ ನಡೆದಿದೆ. ಬಾಲಕಿಯನ್ನು ರಕ್ಷಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆಶಿಶ್ ಕುಮಾರ್‌ (24 ವರ್ಷ ) ಎಂಬಾತನೇ ಬಂಧಿತ ಆರೋಪಿ. 2023ರ ಸೆಪ್ಟೆಂಬರ್‌ ತಿಂಗಳನಲ್ಲಿ ಬಾಲಕಿ ನಾಪತ್ತೆಯಾಗಿದ್ದಳು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಬರೋಬ್ಬರಿ ಆರು ತಿಂಗಳ ನಂತರ ಬಾಲಕಿಯನ್ನು ಪತ್ತೆ ಹಚ್ಚಿ ರಕ್ಷಣೆ ಮಾಡುವಲ್ಲಿ ಸಫಲರಾಗಿದ್ದಾರೆ.

ಸಾರ್ವಜನಿಕರು ನೀಡಿದ ಸುಳಿವಿನ ಮೇರೆಗೆ ಶನಿವಾರ ಬಾಲಕಿಯನ್ನು ಗದ್ವಾರ್ ಪ್ರದೇಶದಿಂದ ರಕ್ಷಿಸಲಾಗಿದ್ದು, ಆಶಿಶ್ ಕುಮಾರ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಾಲಕಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಕಳೆದ ಆರು ತಿಂಗಳಿನಿಂದ ಆರೋಪಿಯು ತನ್ನ ಮೇಲೆ ಪದೇ ಪದೇ ಅತ್ಯಾಚಾರವೆಸಗಿರುವುದಾಗಿ ತಿಳಿಸಿದ್ದಾಳೆ. ಈ ಕುರಿತು ಆರೋಪಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಷ ಅನಿಲ ಸೇವಿಸಿ ಒಂದೇ ಕುಟುಂಬದ ಮೂವರು ಸಾವು

ಬಾವಿಯೊಳಗಿನ ವಿಷಾನಿಲ ಸೇವಿಸಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮೋಟರ್‌ ಪಂಪ್‌ ಸರಿಪಡಿಸಲು ಬಾವಿ ಕೆಳಗೆ ಇಳಿದವರು ವಿಷಾನಿಲದಿಂದ ಮೃತಪಟ್ಟಿದ್ದಾರೆ ಎಂದು ವರದಿ ಆಗಿದೆ. ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಬಾವಿಯೊಳಗೆ ವಿಷಾನಿಲ ಸೇವಿಸಿ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮೃತರು 58 ವರ್ಷದ ವೀರೇಂದ್ರ ಕುಮಾರ್ ಮತ್ತು ಅವರ ಇಬ್ಬರು ಮಕ್ಕಳಾದ ದೇವೇಂದ್ರ ಮತ್ತು ಚಂದ್ರ ಪ್ರಕಾಶ್ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ ವೀರೇಂದ್ರ ಕುಮಾರ್ ಶನಿವಾರ (ಏಪ್ರಿಲ್ 22) ಮೋಟಾರ್ ಪಂಪ್ ಸರಿಪಡಿಸಲು ಬಾವಿಗೆ ಇಳಿದಿದ್ದಾರೆ. ಎಷ್ಟು ಹೊತ್ತಾದರೂ ಮೇಲಕ್ಕೆ ಬರದಿದ್ದಾಗ ದೇವೇಂದ್ರ ಮತ್ತು ಚಂದ್ರಪ್ರಕಾಶ್ ಬಾವಿಯಲ್ಲಿ ಇಳಿದ್ದು, ಇಬ್ಬರೂ ಕೂಡ ಬಾವಿಯಿಂದ ಮೇಲಕ್ಕೆ ಬರಲಿಲ್ಲ.

ತುಂಬಾ ಸಮಯದಿಂದ ಬಾವಿಯಿಂದ ಮೇಲೆ ಬಾರದ ಗಂಡ, ಮಕ್ಕಳನ್ನು ಕಂಡು, ಮೇಲೆ ಕುಳಿತಿದ್ದ ವೀರೇಂದ್ರ ಕುಮಾರ್ ಅವರ ಪತ್ನಿ ಸಹಾಯಕ್ಕಾಗಿ ಅಳಲು ತೋಡಿಕೊಂಡಿದ್ದಾರೆ. ಮೃತ ದುರ್ದೈವಿಯ ಹೆಂಡತಿ ಚೀರಾಟವನ್ನು ಕೇಳಿಸಿಕೊಂಡ ಸಮೀಪದ ಗ್ರಾಮಸ್ಥರು ಸ್ಥಳಕ್ಕೆ ತಲುಪಿದ್ದಾರೆ. ಅವರು ಬಾವಿಗೆ ಇಳಿದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಂದೆ ಮತ್ತು ಮಕ್ಕಳನ್ನು ಹೊರಗೆ ತಂದಿದ್ದಾರೆ. ಎಲ್ಲರನ್ನೂ ನೆರೆಯ ಹಮೀರ್‌ಪುರ ಜಿಲ್ಲೆಯ ಮೌದಾಹ ಸಿಎಚ್‌ಸಿಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಅಲ್ಲಿಯ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಜಿಲ್ಲಾ ಮ್ಯಾಜಿಸ್ಟ್ರೇಟ್ ಮಹೋಬ ಮನೋಜ್ ಕುಮಾರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅಪರ್ಣಾ ಗುಪ್ತಾ ಗ್ರಾಮಕ್ಕೆ ಆಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರು.

Comments are closed.