ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿಕೊಟ್ಟ ನಟಿ ಶಿಲ್ಪಾ ಶೆಟ್ಟಿ ದಂಪತಿ

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತರಾಗಿ ಕರಾವಳಿಗೆ ಆಗಮಿಸಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ತವರೂರು ಕೂಡ ಕರಾವಳಿ ಆಗಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ (Shilpa Shetty visits Kateelu) ಆಗಮಿಸಿದ್ದಾರೆ. ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಹಾಗೂ ಕುಟುಂಬದವರನ್ನು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ವತಿಯಿಂದ ಗೌರವಿಸಲಾಗಿದೆ. ನಟಿ ಶಿಲ್ಪಾ ಶೆಟ್ಟಿ ಹರಕೆ ತಿರಿಸುವ ಸಲುವಾಗಿ ದೇವಸ್ಥಾನಕ್ಕೆ ಆಗಮಿಸಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರ, ಮಕ್ಕಳಾದ ವಿಯಾನ್‌ ಮತ್ತು ಸಮಿಷಾ, ಸಹೋದರಿ ಶಮಿತಾ ಶೆಟ್ಟಿ ಜೊತೆ ದೇವರ ದರ್ಶನ ಪಡೆದಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ದೇವರ ಶೇಷ ವಸ್ತ್ರ ಪ್ರಸಾದ ನಟಿ ಶಿಲ್ಪಾ ಶೆಟ್ಟಿಗೆ ನೀಡಲಾಗಿದೆ. ಶಿಲ್ಪಾ ಶೆಟ್ಟಿ ಮಗ ಹುಟ್ಟಿದ ಬಳಿಕ ಹೆಣ್ಣು ಮಗುವಿಗಾಗಿ ಕಾಯುತ್ತಿದ್ದರು. ಹೀಗಾಗಿ ಹೆಣ್ಣು ಮಗುವಿಗಾಗಿ ಹರಕೆ ಕಟ್ಟಿಕೊಂಡಿದ್ದಾರೆ. ಹೆಣ್ಣು ಮಗು ಜನಿಸಿದರೆ ಕಟೀಲು ದುರ್ಗಾ ಪರಮೇಶ್ವರಿಗೆ ಸೀರೆಯನ್ನು ಕಾಣಿಕೆ ರೂಪದಲ್ಲಿ ನೀಡುವುದಾಗಿ ಶಿಲ್ಪಾ ಶೆಟ್ಟಿ ಹರಕೆ ಹೊತ್ತಿದ್ದಾರಂತೆ.

ಹಾಗಾಗಿ ಇದೀಗ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ತಮ್ಮ ಹರಕೆಯನ್ನು ತೀರಿಸಿದ್ದಾರೆ. ಈ ಸಂದರ್ಭದಲ್ಲಿ ಮೊಕ್ತೇಸರ ವಾಸುದೇವ ಆಸ್ರಣ್ಣ ಪ್ರಸಾದ ನೀಡಿದರು. ಅರ್ಚಕರಾದ ಅನಂತ ಆಸ್ರಣ್ಣ, ಶ್ರೀಹರಿ ಆಸ್ರಣ್ಣ ,ವಕೀಲ ರವಿ ಪೂಜಾರಿ. ಉಪಸ್ಥಿತರಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೇಗುಲದ ನಾಗಸ್ವರ ವಾದಕರಾದ ಲಿಂಗಪ್ಪ ಸೇರಿಗಾರರ ವಾದ್ಯವಾದನವನ್ನು ಆಲಿಸಿದ ಶಿಲ್ಪಾ ಶೆಟ್ಟಿ ಹಾಗೂ ಶಮಿತಾ ಶೆಟ್ಟಿ ಕಟೀಲು ರಥಬೀದಿಯಲ್ಲಿ ನಡೆಯುತ್ತಿದ್ದ ಯಕ್ಷಗಾನವನ್ನು ಕೆಲಹೊತ್ತು ವೀಕ್ಷಿಸಿದರು. ವೇಷಗಳ ಫೋಟೋ ತೆಗೆದು ಕೂಡ ಸಂಭ್ರಮಿಸಿದರು.

ಇದನ್ನೂ ಓದಿ : ಟ್ವಿಟರ್‌ ಬ್ಲೂ ಟಿಕ್‌ ಕಳೆದು ಕೊಳ್ತಾರಾ ಕೆಜಿಎಫ್‌ ಸ್ಟಾರ್‌ ಯಶ್‌ ?

ಇದನ್ನೂ ಓದಿ : ಅಗ್ನಿಸಾಕ್ಷಿ ಸೀರಿಯಲ್‌ ಖ್ಯಾತಿಯ ಸಂಪತ್‌ ಜಯರಾಮ್‌ ಇನ್ನಿಲ್ಲ

ಕಳೆದ ಹಲವು ವರ್ಷಗಳಿಂದ ಸ್ಯಾಂಡಲ್‌ವುಡ್‌ನಿಂದ ದೂರವೇ ಉಳಿದರು. ಇತ್ತೀಚೆಗೆಷ್ಟೇ ನಟ ಧ್ರುವ ಸರ್ಜಾ ಅಭಿನಯದ ಹೊಸ ಸಿನಿಮಾಕ್ಕಾಗಿ ಕನ್ನಡ ಸಿನಿರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಅದು ಬೇರೆ ಯಾವ ಸಿನಿಮಾವೆಂದರೆ ಪ್ರೇಮ್‌ ನಿರ್ದೇಶನದ ಬಿಗ್ ಬಜೆಟ್‌ನ ‘ಕೆಡಿ’ ಸಿನಿಮಾದಲ್ಲಿ ಸತ್ಯವತಿ ಎಂಬ ಪಾತ್ರವನ್ನು ಶಿಲ್ಪಾ ಶೆಟ್ಟಿ ಮಾಡುತ್ತಿದ್ದಾರೆ. ವಿಶೇಷವೆಂದರೆ, ಈ ಸಿನಿಮಾದಲ್ಲೂ ರವಿಚಂದ್ರನ್‌ ನಟಿಸುತ್ತಿದ್ದಾರೆ.

Shilpa Shetty visits Kateelu : Actress Shilpa Shetty couple visited Kateelu Durgaparameshwari temple.

Comments are closed.