Karnataka Weather : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆ ವಿರಳ : ಇಂದು ಸಾಧಾರಣ ಮಳೆ ಸಾಧ್ಯತೆ

ಬೆಂಗಳೂರು : ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ (Karnataka Weather) ಬಿಸಿಲು ಕಂಡು ಬಂದಿರುತ್ತದೆ. ಅಲ್ಲಲ್ಲಿ ಹನಿ ಹನಿ ಮಳೆಯಾಗಿದ್ದು ಬಿಟ್ಟರೆ ಜೋರಾದ ಮಳೆಯಾಗಿಲ್ಲ. ಆಗಸ್ಟ್‌ ತಿಂಗಳ ಆರಂಭದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗದ ಕಾರಣ ತಾಪಮಾನ ಏರಿಕೆಯಾಗಿದೆ. ಹಾಗಾಗಿ ಭಾನುವಾರದಂದು ಕರಾವಳಿ ಜನರು ಬೆವರೊರೆಸಿಕೊಳ್ಳುವಷ್ಟು ಬಿಸಿಲು ವಾತಾವರಣವಿತ್ತು. ಇಡೀ ರಾಜ್ಯದಲ್ಲೇ ಉತ್ತರ ಕನ್ನಡ 28.74 ಡಿಗ್ರಿ,ದಕ್ಷಿಣ ಕನ್ನಡದಲ್ಲಿ 29.91, ಉಡುಪಿಯಲ್ಲಿ 29.88 ಡಿಗ್ರಿ ಸೆಲ್ಸಿಯಸ್‌ ಬಿಸಿಲಿನ ತಾಪಮಾನವಿತ್ತು.

ಇಂದು ಕರಾವಳಿ ಭಾಗಗಳಲ್ಲಿ ಬೆಳಗ್ಗಿನಿಂದ ಮೋಡ ಕವಿದ ವಾತಾವರಣದಿಂದ ಕೂಡಿದ್ದು, ಹನಿ ಹನಿ ಮಳೆಯಾಗಲಿದೆ. ಮತ್ತುಳಿದಂತೆ ಸೂರ್ಯ ಬಿಸಿಲು ಕಾಣಬಹುದಾಗಿದೆ. ಆದರೆ ಕಳೆದ ಎರಡು ವಾರಗಳಿಂದ ಸುರಿಯುತ್ತಿದ್ದ ಮಳೆ ಕರಾವಳಿ ಭಾಗದಲ್ಲಿ ಕೊಂಚ ಕಡಿಮೆಯಾಗಿದೆ. ಮಳೆ ಪ್ರಮಾಣ ಕಡಿಮೆಯಾದರೂ ಕಡಲ ಅಬ್ಬರ ಜೋರಾಗಿರುವುದರಿಂದ, ಸ್ಥಳೀಯರು, ಪ್ರವಾಸಿಗರು ಹಾಗೂ ಮೀನುಗಾರರು ಸಮುದ್ರತೀರಕ್ಕೆ ಹೋಗದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ : CM Siddaramaiah : ಕರಾವಳಿಯಲ್ಲಿ ಭಾರೀ ಮಳೆ : ಅಗಸ್ಟ್‌ 1ಕ್ಕೆ ದ.ಕ, ಉಡುಪಿ ಜಿಲ್ಲೆಯ ಮಳೆಹಾನಿ ಪ್ರದೇಶಕ್ಕೆ ಸಿಎಂ ಭೇಟಿ

ಇದನ್ನೂ ಓದಿ : Udupi College Toilet Video Case : ಕಾಲೇಜು ಶೌಚಾಲಯದಲ್ಲಿ ವಿಡಿಯೋ ಪ್ರಕರಣ : ಅಗಸ್ಟ್‌ 1ಕ್ಕೆ ಉಡುಪಿಗೆ ಸಿಎಂ ಸಿದ್ದರಾಮಯ್ಯ

ಇನ್ನು ಸಮುದ್ರ ತೀರದಲ್ಲಿ ಯಾರು ಹೋಗದಂತೆ ಅಡ್ಡಲಾಗಿ ಹಗ್ಗ ಕಟ್ಟಿದ್ದರೂ ಸಹ ಪ್ರವಾಸಿಗರು, ಸ್ಥಳೀಯರು ಅದನ್ನು ದಾಟಿ ಹೋಗುತ್ತಿದ್ದಾರೆ. ಹೀಗಾಗಿ ಲೈಫ್‌ ಗಾರ್ಡ್‌ ಸಿಬ್ಬಂದಿ ಸೈರನ್‌ ಹಾಕಿ ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಇನ್ನೊಂದಡೆ ಪೊಲೀಸರು ಬಂದ ಪ್ರವಾಸಿಗರನ್ನು ವಾಪಸು ಹೋಗುವಂತೆ ಚದುರಿಸುತ್ತಿದ್ದಾರೆ. ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್‌ ಹಾಗೂ ಸೆಲ್ಪಿ ತೆಗೆಯದಂತೆಯೂ ನಿರ್ಬಂಧಿಸಲಾಗಿದೆ.

Karnataka Weather : Sparse rain in coastal districts of the state : Moderate rain likely today

Comments are closed.