BJP State President : ಬಿಎಸ್‌ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರಗೆ ಶಾಕ್: ಬಿಜೆಪಿ ಪಕ್ಷದ ಹೊಣೆ ಸಿ.ಟಿ.ರವಿ ಹೆಗಲಿಗೆ

ಬೆಂಗಳೂರು : BJP State President : ರಾಜ್ಯ ಬಿಜೆಪಿಗೆ ಕಾಂಗ್ರೆಸ್ ವಿರುದ್ಧ ಹೋರಾಡುವುದಕ್ಕಿಂತ ಪಕ್ಷದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಇದರ ಬೆನ್ನಲ್ಲೇ ಅಳೆದು ಸುರಿದು ತೂಗಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿಯುವ ನಾಯಕನ ಹೆಸರನ್ನು ಅಂತಿಮಗೊಳಿಸಿದೆ. ನೀರಿಕ್ಷೆಯಂತೆ ಬಿ.ವೈ.ವಿಜಯೇಂದ್ರ್ ಹೆಸರು ಈ ಸ್ಥಾನದ ರೇಸ್ ನಿಂದ ಹೊರಬಿದ್ದಿದೆ. ಮರಿ ರಾಜಾಹುಲಿಯ ಹೆಸರು ಕೈಬಿಟ್ಟಿರೋದು ಯಾಕೆ ಅನ್ನೋದರ ಇಂಟ್ರಸ್ಟಿಂಗ್ ಫ್ಯಾಕ್ಟ್ ಇಲ್ಲಿದೆ.

ಬಿಜೆಪಿ ಅಂದ್ರೇ ಬಿಎಸ್ವೈ, ಬಿಎಸ್ವೈ ಅಂದ್ರೇ ಬಿಜೆಪಿ ಅನ್ನೋ ಮಾತಿತ್ತು. ಆದರೆ ಕೆಲ ವರ್ಷಗಳಿಂದ ಬಿಎಸ್‌ ಯಡಿಯೂರಪ್ಪ ಪ್ರಭಾವ ಬಿಜೆಪಿ ಮೇಲೆ ಸೊರಗಿದೆ ಅನ್ನೋದು ಸುಳ್ಳಲ್ಲ.ಆದರೆ ಕೆಲ ದಿನಗಳಿಂದ ಅಂದ್ರೇ ವಿಧಾನಸಭಾ ಚುನಾವಣೆಯ ಬಳಿಕ ಮತ್ತೆ ಬಿಎಸ್‌ ಯಡಿಯೂರಪ್ಪ ಹಾಗೂ ಅವರ ಬಿಜೆಪಿ ಕೊಡುಗೆಯ ವಿಚಾರಗಳು ಚರ್ಚೆಗೆ ಗ್ರಾಸವಾಗಿದ್ದವು. ಮಾತ್ರವಲ್ಲ ಸೋಲಿನಿಂದ ಕಂಗೆಟ್ಟ ಬಿಜೆಪಿಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಬಿಎಸ್‌ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಿಸಬೇಕೆಂಬ ಒತ್ತಡವೂ ಕೇಳಿಬಂದಿತ್ತು. ಆದರೆ ಈ ವಾದಕ್ಕೆ ನೀರಿಕ್ಷಿಯ ಬಲ ಬಂದಿರಲಿಲ್ಲ. ಹೀಗಾಗಿ ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಸುನಿಲ್ ಕುಮಾರ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಹೆಸರು ಕೂಡ ಕೇಳಿಬಂದಿತ್ತು.

ಚುನಾವಣೆ ಸೋಲಿನ ಬಳಿಕ ಬದಲಾಗಬೇಕಿದ್ದ ಬಿಜೆಪಿ ರಾಜ್ಯಾಧ್ಯಕ್ಷರು, ಚುನಾವಣೆ ಮುಗಿದು ಆರು ತಿಂಗಳು ಕಳೆದರೂ ಇನ್ನೂ ಬದಲಾಗಿರಲಿಲ್ಲ. ಕಾಂಗ್ರೆಸ್ ನ ನೊರೆಂಟು ಟೀಕೆಗಳ ಬಳಿಕ ಈಗ ಬಿಜೆಪಿ ರಾಜ್ಯಾಧ್ಯಕ್ಷರ ಪಟ್ಟಕ್ಕೆ ಸಿ.ಟಿ.ರವಿ ಹೆಸರನ್ನು ಬಹುತೇಕ ಅಂತಿಮಗೊಳಿಸಿದೆ ಎನ್ನಲಾಗಿದೆ. ಮಾತ್ರವಲ್ಲ ಸಿ.ಟಿ.ರವಿಗೆ ಈಗಾಗಲೇ ದೆಹಲಿಗೆ ಬುಲಾವ್ ಬಂದಿದೆ. ಹೀಗಾಗಿ ಬಿಜೆಪಿ ಕೊನೆಗೂ ಮರಿ‌ ರಾಜಾಹುಲಿಗೆ ರಾಜ್ಯ ಬಿಜೆಪಿ ಚುಕ್ಕಾಣಿ ನೀಡದಿರಲು ನಿರ್ಧರಿಸಿದೆ ಅನ್ನೋದು ಖಚಿತವಾಗಿದೆ. ಹಾಗಿದ್ದರೇ ಬಿಜೆಪಿ ನಾಯಕರು ಹಾಗೂ ಹೈಕಮಾಂಡ್ ನ ಈ ತೀರ್ಮಾನಕ್ಕೆ ಕಾರಣವೇನು ಎಂಬುದನ್ನು ಗಮನಿಸೋದಾದ್ರೆ.

ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಪುತ್ರ ಎಂಬ ಕಾರಣಕ್ಕೆ ಬಿ.ವೈ.ವಿಜಯೇಂದ್ರ ಅವರಿಗೆ ಹಿನ್ನಡೆಯಾಗಿದೆ. ಬಿಎಸ್ವೈ ಪಕ್ಷವನ್ನು ಸಂಘಟಿಸಿ ಮುನ್ನಡೆಸಿದ್ದರು ಅನ್ನೋದು ಸತ್ಯವಾದರೂ ಅದರ ಜೊತೆ ಜೊತೆಗೆ ಬಿಜೆಪಿಯಲ್ಲಿ ಸಂಪೂರ್ಣ ಹಿಡಿತ ಸಾಧಿಸಿ ತಮ್ಮದೇ ಸಾಮ್ರಾಜ್ಯ ಕಟ್ಟಿಕೊಂಡು ಪಕ್ಷವನ್ನು ಹಿಡಿತಕ್ಕೆ ಪಡೆದಿದ್ದರು ಅನ್ನೋದು ಅಷ್ಟೇ ನಿಜ.

ಇದೇ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರ ಪಟ್ಟಕ್ಕೇರಿಸಲು ಹಿಂದೇಟು ಹಾಕಿದೆ. ಅಲ್ಲದೇ ಬಿಎಸ್‌ ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಜಯೇಂದ್ರ ಸೂಪರ್ ಸಿಎಂ ಆಗಿದ್ದರು ಅನ್ನೋ ಆರೋಪವಿತ್ತು. ಈಗ ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸುವ ಅವಕಾಶ ನೀಡಿದ್ರೇ ಮತ್ತೆ ಪಕ್ಷ ಬಿಎಸ್‌ ಯಡಿಯೂರಪ್ಪ ಬಳಗದ ಕೈವಶವಾಗ ಆಗಬಹುದೆಂಬ ಕಾರಣಕ್ಕೆ ಖೋಕ್ ನೀಡಲಾಗಿದೆ ಎನ್ನಲಾಗಿದೆ. ಜೊತೆಗೆ ಲಿಂಗಾಯಿತರಿಗೆ ಮಾತ್ರ ಪ್ರಾಧಾನ್ಯತೆ ಸಿಗುವ ಆರೋಪವನ್ನು ಹುಸಿಗೊಳಿಸಲು ಬಿಜೆಪಿ ಪ್ಲ್ಯಾನ್ ಮಾಡಿದೆ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬಂದಿದೆ.

ಇದನ್ನೂ ಓದಿ : ಜೆಡಿಎಸ್‌ – ಬಿಜೆಪಿ ಮೈತ್ರಿಗೆ ರಾಜ್ಯ ಬಿಜೆಪಿ ನಾಯಕರ ವಿರೋಧ

ಇದನ್ನೂ ಓದಿ : Udupi College Toilet Video Case : ಉಡುಪಿ ಕಾಲೇಜು ಶೌಚಾಲಯದಲ್ಲಿ ಕ್ಯಾಮೆರಾ ಪ್ರಕರಣ : ಖುಷ್ಬು ಸುಂದರ್ ಮಹತ್ವದ ಮಾಹಿತಿ

Comments are closed.