ಕೆದೂರಿನಲ್ಲಿ ಕೊರಗಜ್ಜನ ಪವಾಡ ! ನಿದ್ದೆ ಕಣ್ಣಲ್ಲಿ 3 ಕಿ.ಮೀ ನಡೆದು ಬಂದ ಮಗುವನ್ನು ರಕ್ಷಿಸಿದ ಯುವಕರು : Video

ಕುಂದಾಪುರ : Koragajja Pavada : ಕರಾವಳಿ ಭಾಗದ ಆರಾಧ್ಯ ದೈವ ಕೊರಗಜ್ಜ ಪವಾಡಗಳನ್ನು ಸೃಷ್ಟಿಸುತ್ತಲೇ ಇದ್ದಾರೆ. ಇದೀಗ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆದೂರು ಸಮೀಪದ ದಬ್ಬೆಕಟ್ಟೆಯಲ್ಲಿ ಕೊರಗಜ್ಜ ಪವಾಡ ಮೆರೆದಿದ್ದಾರೆ. ನಿದ್ದೆಕಣ್ಣಲ್ಲಿ ಮೂರು ಕಿ.ಮೀ. ದೂರದ ವರೆಗೆ ನಡೆದುಕೊಂಡು ಬಂದಿದ್ದ ಮಗು ಕೊರಗಜ್ಜನ ದೇವಸ್ಥಾನಕ್ಕೆ ತೆರಳುವ ನಾಮಫಲಕದ ಕೆಳಗೆ ನಿಂತಿದ್ದು, ದಾರಿಯಲ್ಲಿ ಸಾಗುತ್ತಿದ್ದ ಯುವಕರು ಮಗುವನ್ನು ರಕ್ಷಿಸಿದ್ದಾರೆ.

ರಾತ್ರಿ 2.30 ರ ಸುಮಾರಿಗೆ ಕೋಟೇಶ್ವರ ಹಾಲಾಡಿ ರಸ್ತೆಯ ದಬ್ಬೆಕಟ್ಟೆಯ ಸಮೀಪದ ರಸ್ತೆ ಪಕ್ಕದಲ್ಲಿ ಮಗುವೊಂದು ನಿಂತಿತ್ತು. ಕೆದೂರಿನ ಕೊರಗಜ್ಜನ ದೇವಸ್ಥಾನಕ್ಕೆ ಮಾರ್ಗ ಸೂಚಿಸುವ ನಾಮಫಲಕದ ಕಂಬದ ಬಳಿಯಲ್ಲಿ ಮಗುವೊಂದು ನಿಂತಿತ್ತು. ಇದೇ ಮಾರ್ಗದಲ್ಲಿ ಕಾರಿನಲ್ಲಿ ಬರುತ್ತಿದ್ದ ಯುವಕರು ಮಗುವನ್ನು ಕಂಡು ಅರೆಕ್ಷಣ ಬೆಚ್ಚಿಬಿದ್ದಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಧೈರ್ಯ ಮಾಡಿ ಮಗುವಿನ ಬಳಿಗೆ ತೆರಳಿ ಮಗುವನ್ನು ವಿಚಾರಿಸಿದ್ದಾರೆ. ಈ ವೇಳೆಯಲ್ಲಿ ಮಗು ನಿದ್ದೆ ಕಣ್ಣಿನಲ್ಲಿ ನಡೆದುಕೊಂಡು ಬಂದಿರುವ ವಿಚಾರ ಯುವಕರಿಗೆ ತಿಳಿದು ಮಗುವಿನ ಮನೆಯವರಿಗಾಗಿ ಹುಡುಕಾಟ ನಡೆಸಿದ್ದಾರೆ.

ಆದರೆ ಮಗು ನಿದ್ದೆ ಕಣ್ಣಿನಲ್ಲಿಯೇ ಸುಮಾರು 3 ಕಿ.ಮೀ. ದೂರದ ವರೆಗೆ ನಡೆದುಕೊಂಡು ಬಂದಿತ್ತು. ಕೊರಗಜ್ಜನ ದೇವಸ್ಥಾನಕ್ಕೆ ತೆರಳುವ ನಾಮಫಲಕದ ಬಳಿಗೆ ಬಂದಾಗ ಮುಂದೆ ಸಾಗಲು ಸಾಧ್ಯವಾಗಿರಲಿಲ್ಲ. ನಂತರದಲ್ಲಿ ಸ್ಥಳೀಯರ ಸಹಕಾರದೊಂದಿಗೆ ರಾತ್ರಿ ಮಗುವಿನ ಪೋಷಕರನ್ನು ಪತ್ತೆ ಹೆಚ್ಚಿ, ಮಗುವನ್ನು ಹೆತ್ತವರ ಒಡಲು ಸೇರಿದ್ದಾರೆ. ಸದ್ಯ ಈ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಬಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸುದ್ದಿ ಇದೀಗ ಎಲ್ಲೆಡೆಯಲ್ಲಿಯೂ ವೈರಲ್‌ ಆಗಿದೆ. ದಾರಿತಪ್ಪಿ ಬಂದಿದ್ದ ಮಗು ಕೊರಗಜ್ಜನ ನಾಮಫಲಕದ ಕೆಳಗೆ ಬಂದು ನಿಂತಿರುವುದು ಕೊರಗಜ್ಜನ ಪವಾಡ ಎಂದೇ ಹೇಳಲಾಗುತ್ತಿದೆ. ಅಷ್ಟು ಚಿಕ್ಕ ಮಗು ಮೂರು ಕಿಲೋ ಮೀಟರ್‌ ವರೆಗೂ ನಡೆದುಕೊಂಡು ಬರಲು ಹೇಗೆ ಸಾಧ್ಯ ಅನ್ನೋ ಪ್ರಶ್ನೆಯೂ ಉದ್ಬವವಾಗಿದೆ.

ಇದನ್ನೂ ಓದಿ : Road Accident :‌ ರಸ್ತೆ ಅಪಘಾತ : ಇಬ್ಬರು ಪೊಲೀಸ್ ಸೇರಿ 9 ಮಂದಿ ಸಾವು

ಇದನ್ನೂ ಓದಿ : Gruha Lakshmi Scheme : ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ಪ್ರಾರಂಭ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

.

Comments are closed.