Kundapur Assembly Constitution: ಕುಂದಾಪುರ ವಿಧಾನಸಭಾ ಕ್ಷೇತ್ರ : ಇಂದು ಬಿಜೆಪಿ ಕಾರ್ಯಕರ್ತರ ಬೃಹತ್ ಸಭೆ

ಕುಂದಾಪುರ : (Kundapur Assembly Constitution) ರಾಜ್ಯದಲ್ಲಿ ಚುನಾವಣೆ ರಂಗೇರಿದೆ. ಪ್ರತಿ ಪಕ್ಷಗಳ ನಡುವೆ ಚುನಾವಣೆ ಕಾವೆದ್ದಿದೆ. ವಿಧಾನಸಭಾ ಚುನಾವಣೆಗೆ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ಉಡುಪಿ ಜಿಲ್ಲೆಯ ತಲಾ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಜಿಲ್ಲೆಯಲ್ಲಿ ಪ್ರಚಾರ ಕಣ ರಂಗೇರಿದೆ. ಇದೀಗ ಟಿಕೆಟ್‌ ಘೋಷಣೆ ಬೆನ್ನಲ್ಲೇ ಅಭ್ಯರ್ಥಿಗಳು ಮತಬೇಟೆಗೆ ಕಸರತ್ತು ಆರಂಭಿಸಿದ್ದಾರೆ.

ಕುಂದಾಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಿರುಣ್‌ ಕುಮಾರ್‌ ಕೊಡ್ಗಿ ಕ್ಷೇತ್ರದಾದ್ಯಂತ ಮತದಾರರು, ಕಾರ್ಯಕರ್ತರು ಹಾಗೂ ಪಕ್ಷದ ನಾಯಕರನ್ನು ಸಂಪರ್ಕಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಪ್ರಚಾರ ನಡೆಸುತ್ತಿದ್ದಾರೆ. ಇದೀಗ ಕುಂದಾಪುರ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಯಾಗಿ ಆಯ್ಕೆಗೊಂಡ ಕಿರಣ್‌ ಕುಮಾರ್‌ ಕೊಡ್ಗಿ ಅವರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ನಿನ್ನೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಗೊಂಡ ಕಿರಣ್‌ ಕೊಡ್ಗಿ ಸಹಾಯಕ ಕಮಿಷನರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದು, ಇಂದು ಸಂಜೆ 4 ಗಂಟೆಗೆ ಕೋಟೇಶ್ವರದ ಸರಸ್ವತಿ ಸಭಾಂಗಣದಲ್ಲಿ ಕಾರ್ಯಕರ್ತರ ಬೃಹತ್ ಸಭೆ ಆಯೋಜಿಸಲಾಗಿದೆ.

ಸದ್ರಿ ಸಭೆಯಲ್ಲಿ ಮಾನ್ಯ ಜನಪ್ರಿಯ ಕುಂದಾಪುರದ ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರು, ವಿಧಾನ ಪರಿಷತ್ ಸದಸ್ಯರಾದ ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯ ಆಹಾರ ನಾಗರಿಕ ಸರಬರಾಜು ನಿಗಮ ಮಂಡಳಿಯ ಉಪಾಧ್ಯಕ್ಷರು, ಈ ಬಾರಿಯ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಕಿರಣ್ ಕುಮಾರ್ ಕೊಡ್ಗಿಯವರು ಹಾಗೂ ಕುಂದಾಪುರ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಶಂಕರ ಅಂಕದಕಟ್ಟೆಯವರ ಉಪಸ್ಥಿತಿಯಲ್ಲಿ ನೆರವೇರಲಿದೆ.

ಇದೇ ಬರುವ ಮೇ 10ಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲ್ಲಿದ್ದು, ದೇಶ, ರಾಜ್ಯದಾದ್ಯಂತ ಪ್ರತಿ ಪಕ್ಷದಲ್ಲೂ ಚುನಾವಣೆ ಬಿಸಿ ಏರಿದೆ. ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದು, ಈಗಾಗಲೇ ಹೆಚ್ಚಿನ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸದ್ಯ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಎರಡು ಹಂತದ ಪಟ್ಟಿ ಒಂದರ ಮೇಲೊಂದರಂತೆ ಬಿಡುಗಡೆಗೊಂಡಿದ್ದು, ಇನ್ನೊಂದು ಪಟ್ಟಿ ಬಾಕಿ ಇದೆ. ಈ ಮಧ್ಯೆ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಯಾರಾಗಬಹುದು ಎಂಬ ಕುತೂಹಲದ ನಡುವೆ ಕುಂದಾಪುರ ಕ್ಷೇತ್ರದಲ್ಲಿ ಕಿರಣ್‌ ಕೊಡ್ಗಿ ಅಭ್ಯರ್ಥಿ ಆಗುವ ಭರವಸೆ ಪಟ್ಟಿ ಬಿಡುಗಡೆ ಮೊದಲ ಹಂತದಲ್ಲೇ ನಿಜವಾಗಿದೆ.

ಇದನ್ನೂ ಓದಿ : Kapu Assembly Constituency : ಕಾಪು ವಿಧಾನಸಭಾ ಕ್ಷೇತ್ರ : ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ

ಇದನ್ನೂ ಓದಿ : ಬಿಜೆಪಿಯಲ್ಲಿ ಹಾರಿದ ಬಂಡಾಯದ ಬಾವುಟ : ಹೆಚ್ಚುತ್ತಿದೆ ಕರ್ನಾಟಕ ಕುರುಕ್ಷೇತ್ರದ ಕೌತುಕತೆ

ಕುಂದಾಪುರ ಕ್ಷೇತ್ರದ ವಾಜಪೇಯಿ ಅಂತಲೇ ಕರೆಸಿಕೊಳ್ಳುತ್ತಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಪ್ರತಿ ಬಾರಿ ಕುಂದಾಪುರದಲ್ಲಿ ಹಾಲಾಡಿಯವರೇ ನಿಂತು ಜಯಭೇರಿ ಬಾರಿಸಿದ್ದರು. ಸತತ ಐದು ಬಾರಿ ಕುಂದಾಪುರದಲ್ಲಿ ಶಾಸಕರಾಗಿ ಆಯ್ಕೆಯಾದ ಇವರು ಈ ಬಾರಿ ಚುನಾವಣೆಯಿಂದ ಹಿಂದೆ ಸರಿದಿದ್ದು, ಕಿರಣ್‌ ಕೊಡ್ಗಿ ಯವರಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದರು. ಬೆಂಬಲ ನೀಡುವುದಲ್ಲದೇ ಈ ಬಾರಿ ಅವರಿಗೆ ಅವಕಾಶ ನೀಡುವ ಸಲುವಾಗಿಯೇ ಚುನಾವಣೆಯಿಂದ ಹಿಂದೆ ಸರಿಯುತ್ತಿರುವುದಾಗಿಯೂ ತಿಳಿಸಿದ್ದರು. ಅಂತೆಯೇ ಈ ಬಾರಿ ಕಿರಣ್‌ ಕುಮಾರ್‌ ಕೊಡ್ಗಿ ಅವರಿಗೆ ಟಿಕೆಟ್‌ ಸಿಕ್ಕಿದ್ದು, ಚುನಾವಣೆಯಲ್ಲಿ ಗೆದ್ದು ಬರುವಂತೆ ಮತದಾರರು ಹಾರೈಸಿದ್ದಾರೆ.

ಇದನ್ನೂ ಓದಿ : ಹಾಲಾಡಿ ಶ್ರೀನಿವಾಸ್‌ ಶೆಟ್ಟಿ + ಕಿರಣ್‌ ಕೊಡ್ಗಿ : ಗೆಲುವು ಕಾಣುವರೇ ಮೊಳಹಳ್ಳಿ

Kundapur Assembly Constitution: Big meeting of BJP workers today

Comments are closed.