Kapu Assembly Constituency : ಕಾಪು ವಿಧಾನಸಭಾ ಕ್ಷೇತ್ರ : ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ

ಕಾಪು : (Kapu Assembly Constituency) ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದು, ಎಲ್ಲೆಡೆ ಪ್ರಚಾರ ಕಾರ್ಯಗಳು ಬಿರುಸಾಗಿಯೇ ನಡೆಯುತ್ತಿದೆ. ಈ ಮಧ್ಯೆ ಕರಾವಳಿಯಲ್ಲಿ ಬಿಜೆಪಿ ಪಕ್ಷಗಳು ಭರ್ಜರಿಯಾಗಿಯೇ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಇದೀಗ ಕಾಪು ಕ್ಷೇತ್ರದಲ್ಲಿ ಇಂದು ಬಿಜೆಪಿ ಕ್ಷೇತ್ರದ ಚುನಾವಣೆ ಕಚೇರಿಯನ್ನು ಉದ್ಘಾಟನೆಗೊಳಿಸಿದ್ದು, ಕಚೇರಿಯಲ್ಲಿ ಗಣಹೋಮ ನಡೆಸಲಾಯಿತು.

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಹೆಚ್ಚು ಚರ್ಚೆಯಲ್ಲಿರುವ ಹಾಗೂ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರ ಕಾಪು. ನೆರೆಯ ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿರುವ ಸುಂದರ ಕಡಲ ತೀರಗಳನ್ನು ಹೊಂದಿರುವ ಕ್ಷೇತ್ರ ಕೂಡ ಹೌದು. ಮಸೀದಿ, ಮಂದಿರ, ಚರ್ಚ್‌ ಗಳನ್ನು ಹೊಂದಿರುವ ಸರ್ವ ಧರ್ಮಗಳ ಜನರು ನೆಲೆಸಿರುವ ಸೌಹಾರ್ದದ ನೆಲವಾಗಿಯೂ ಕಾಪು ಗುರುತಿಸಿಕೊಂಡಿದೆ. ಇದೀಗ ಅಂತಹ ಕುತೂಹಲ ಕೆರಳಿಸಿದ ಕ್ಷೇತ್ರದಲ್ಲಿ ಬಿಜೆಪಿ ಚುನಾವಣೆ ಕಚೇರಿ ಉದ್ಘಾಟನೆಗೊಂಡಿದೆ. ಉದ್ಘಾಟನೆ ಬಳಿಕ ಕಚೇರಿಯಲ್ಲಿ ಕಾರ್ಯಕರ್ತರು ಹಾಗೂ ಶಾಸಕರ ಉಪಸ್ಥಿತಿಯಲ್ಲಿ ಗಣಹೋಮ ಕೂಡ ನೆರೆವೇರಿಸಿ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ದೆಹಲಿ ವಿಧಾನಸಭಾ ಶಾಸಕರು ಹಾಗೂ ಚುನಾವಣಾ ಪ್ರವಾಸಿ ಪ್ರಭಾರಿ ಶ್ರೀ ವಿಜೇಂದರ್ ಗುಪ್ತ, ಶಾಸಕರಾದ ಶ್ರೀ ಲಾಲಾಜಿ ಮೆಂಡನ್, ನಮ್ಮ ಪಕ್ಷದ ಅಭ್ಯರ್ಥಿ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧ್ಯಕ್ಷರಾದ ಶ್ರೀ ಕುಯಿಲಾಡಿ ಸುರೇಶ್ ನಾಯಕ್, ಕ್ಷೇತ್ರದ ಅಧ್ಯಕ್ಷರಾದ ಶ್ರೀ ಶ್ರೀಕಾಂತ ನಾಯಕ್, ಜಿಲ್ಲಾ ಉಪಾಧ್ಯಕ್ಷರುಗಳಾದ ಶ್ರೀ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶ್ರೀ ಶ್ರೀಶ ನಾಯಕ್, ಜಿಲ್ಲಾ ಕಾರ್ಯದರ್ಶಿ ಶ್ರೀ ಗುರುಪ್ರಸಾದ್ ಶೆಟ್ಟಿ, ಮಂಗಳೂರು ವಿಭಾಗದ ಪ್ರಭಾರೀಗಳಾದ ಶ್ರೀ ಉದಯ್ ಕುಮಾರ್ ಶೆಟ್ಟಿ, ವಿಭಾಗ ಸಂಘಟನಾ ಕಾರ್ಯದರ್ಶಿ ಶ್ರೀ ಪ್ರಸಾದ್ ಕುಮಾರ್, ಕ್ಷೇತ್ರ ಚುನಾವಣಾ ಉಸ್ತುವಾರಿ ಶ್ರೀಮತಿ ಸುಲೋಚನಾ ಭಟ್, ಹಿರಿಯರಾದ ಕೊಲ್ಲಬೆಟ್ಟು ಶ್ರೀ ರವೀಂದ್ರ ಶೆಟ್ಟಿ, ಶ್ರೀ ಗಂಗಾಧರ್ ಸುವರ್ಣ, ಶ್ರೀಮತಿ ವೀಣಾ ಶೆಟ್ಟಿ, ಶ್ರೀಮತಿ ಶ್ಯಾಮಲ ಕುಂದರ್, ಶ್ರೀಮತಿ ಗೀತಾಂಜಲಿ ಸುವರ್ಣ, ಶ್ರೀಮತಿ ಶಿಲ್ಪಾ ಜಿ ಸುವರ್ಣ, ಶ್ರೀಮತಿ ಶೀಲಾ ಶೆಟ್ಟಿ, ಶ್ರೀಮತಿ ನೀತಾ ಗುರುರಾಜ್, ಶ್ರೀಮತಿ ಶಶಿಪ್ರಭ ಶೆಟ್ಟಿ, ಶ್ರೀಮತಿ ಮಾಲಿನಿ ಶೆಟ್ಟಿ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ : ಹಾಲಾಡಿ ಶ್ರೀನಿವಾಸ್‌ ಶೆಟ್ಟಿ + ಕಿರಣ್‌ ಕೊಡ್ಗಿ : ಗೆಲುವು ಕಾಣುವರೇ ಮೊಳಹಳ್ಳಿ

ಇದನ್ನೂ ಓದಿ : ಬಿಜೆಪಿಯಲ್ಲಿ ಹಾರಿದ ಬಂಡಾಯದ ಬಾವುಟ : ಹೆಚ್ಚುತ್ತಿದೆ ಕರ್ನಾಟಕ ಕುರುಕ್ಷೇತ್ರದ ಕೌತುಕತೆ

ಇದನ್ನೂ ಓದಿ : Ambedkar Jayanti 2023 : ನನ್ನ ರಾಜಕೀಯ ಬದುಕು ಬಾಬಾ ಸಾಹೇಬರ ಋಣ: ಸಿದ್ದರಾಮಯ್ಯ

Kapu Assembly Constituency: Inauguration of BJP Election Office

Comments are closed.