ಭಾನುವಾರ, ಏಪ್ರಿಲ್ 27, 2025
HomeCoastal Newsಕುಂದಾಪುರ : 24 ಗಂಟೆಯಲ್ಲಿ ಕಾಲೇಜು ವಿದ್ಯಾರ್ಥಿಯ ಅಪಹರಣ ಪ್ರಕರಣ ಬೇಧಿಸಿದ ಪೊಲೀಸರು

ಕುಂದಾಪುರ : 24 ಗಂಟೆಯಲ್ಲಿ ಕಾಲೇಜು ವಿದ್ಯಾರ್ಥಿಯ ಅಪಹರಣ ಪ್ರಕರಣ ಬೇಧಿಸಿದ ಪೊಲೀಸರು

- Advertisement -

ಕುಂದಾಪುರ : Kundapura College Student Kidnap: ಕಾಲೇಜು ವಿದ್ಯಾರ್ಥಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಕುಂದಾಪುರ ಪೊಲೀಸರು 24 ಅವಧಿಯಲ್ಲಿ ಬೇಧಿಸಿದ್ದಾರೆ. ಅಪಹರಣ ಪ್ರಕರಣದಲ್ಲಿ ಹುಬ್ಬಳಿ ಮೂಲದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರದ ಜನ್ಸಾಲೆಯ ನಿವಾಸಿ ಗೋವಿಂದ ಶೆಟ್ಟಿ ಎಂಬವರ ಮಗ ಶಶಾಂಕ ( 21 ವರ್ಷ) ಅಪಹರಣಕ್ಕೆ ಒಳಗಾದ ಯುವಕ. ಕುಂದಾಪುರ ಭಂಡಾಕಾರ್ಸ್‌ ಕಾಲೇಜಿನ ವಿದ್ಯಾಭ್ಯಾಸ ಮಾಡುತ್ತಿದ್ದ ಶಶಾಂಕ್‌, ಅಕ್ಟೋಬರ್‌ 31 ರಂದು ಬೆಳಗ್ಗೆ 8.30ಕ್ಕೆ ಕಾಲೇಜಿಗೆ ತೆರಳಿದ್ದ. ಬೆಳಗ್ಗೆ 9.30ರ ಸುಮಾರಿಗೆ ಶಶಾಂಕ್‌ ತನ್ನ ಮೊಬೈಲ್ ನಿಂದ ತಂದೆ ಗೋವಿಂದ ಶೆಟ್ಟಿ ಅವರಿಗೆ ಕರೆ ಮಾಡಿ ತನ್ನನ್ನು ಕೋಟೇಶ್ವರದ ಕೋಸ್ಟಲ್‌ ಕ್ರೌನ್‌ ಮಾಲ್ ಬಳಿಯಿಂದ ಅಪಹರಣ ಮಾಡಿದ್ದಾರೆ. ಅಲ್ಲದೇ 30 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಹಣವನು ನೀಡಿ ತನ್ನನ್ನು ಕರೆದುಕೊಂಡು ಹೋಗುವಂತೆ ತಿಳಿಸಿದ್ದಾನೆ.

ಎರಡು ದಿನಗಳ ಕಾಲ ಮಗ ಮನೆಗೆ ಬಾರದ ಹಿನ್ನೆಲೆಯಲ್ಲಿ ಗಾಬರಿಗೊಂಡ ಶಶಾಂಕ್‌ ತಾಯಿ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ೨೪ಗಂಟೆಗಳ ಅವಧಿಯಲ್ಲಿ ಶಶಾಂಕ್‌ ಹಾಗೂ ಅಪರಣ ಮಾಡಿರುವ ಕಿರಣ್‌ ಕುಷ್ಟಗಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಹುಬ್ಬಳ್ಳಿ ಮೂಲದ ಕಿರಣ್‌ ಕುಷ್ಟಗಿ ಎಂಬಾತನ ಜೊತೆಗೆ ಶಶಾಂಕ್‌ ಹಣಕಾಸಿನ ವ್ಯವಹಾರವನ್ನು ಹೊಂದಿದ್ದರು. ಈ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರ.ೆ ತನಿಖೆಯ ನಂತಷ್ಟೇ ಸತ್ಯಾಸತ್ಯತೆ ಹೊರಬರಬೇಕಾಗಿದೆ.

ಕ್ಲಾಸ್ ಬಂಕ್ ಮಾಡಿ ವಿಷ ಕುಡಿದ ಮೂವರು ಬಾಲಕಿಯರು: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

ಮಧ್ಯಪ್ರದೇಶ: ಶಾಲೆಗೆ ಚಕ್ಕರ್ ಹೊಡೆದ 16 ವರ್ಷದ ಮೂವರು ಬಾಲಕಿಯರು ದುಡುಕಿನ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಶಾಲೆಗೆ ರಜೆ ಹಾಕಿ ತೆರಳಿದ್ದ ಮೂವರು ಬಾಲಕಿಯರು ಒಟ್ಟಿಗೆ ವಿಷ ಸೇವಿಸಿದ್ದಾರೆ. ಈ ಪೈಕಿ ಇಬ್ಬರು ಸಾವನ್ನಪ್ಪಿದ್ದು, ಒಬ್ಬಳ ಸ್ಥಿತಿ ಗಂಭೀರವಾಗಿದೆ. ಮಧ್ಯಪ್ರದೇಶದ ಇಂದೋರ್ ನಲ್ಲಿ ನಿನ್ನೆ(ಅ.28) ಈ ಘಟನೆ ನಡೆದಿದೆ. ಸೆಹೋರ್ ಜಿಲ್ಲೆಯ ಅಷ್ಟಾ ಪಟ್ಟಣದಲ್ಲಿ ಒಂದೇ ಶಾಲೆಯಲ್ಲಿ ಓದುತ್ತಿದ್ದ 16 ವರ್ಷದ ಈ ಮೂವರು ಬಾಲಕಿಯರು ನಿನ್ನೆ ಶಾಲೆಗೆ ರಜೆ ಹಾಕಿ 120 ಕಿ.ಮೀ ದೂರದಲ್ಲಿರುವ ಇಂದೋರ್ ಗೆ ಬಸ್ ನಲ್ಲಿ ಪ್ರಯಾಣಿಸಿದ್ದಾರೆ. ಅಲ್ಲಿ ವಿಷದ ಬಾಟಲ್ ಖರೀದಿಸಿ ನಿರ್ಜನ ಪ್ರದೇಶಕ್ಕೆ ತೆರಳಿ ವಿಷ ಸೇವನೆ ಮಾಡಿದ್ದಾರೆ. ಈ ಪೈಕಿ ಇಬ್ಬರು ನಿನ್ನೆ ರಾತ್ರಿ ಸಾವನ್ನಪ್ಪಿದ್ದರೆ, ಮತ್ತೊಬ್ಬಳು ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾಳೆ. ಈ ಮೂವರನ್ನು ಪೂಜಾ, ಆರತಿ, ಪಾಲಕ್ ಎಂದು ಗುರುತಿಸಲಾಗಿದೆ. ಈ ಮೂವರು ಬಾಲಕಿಯರು ವಿಷ ಸೇವಿಸಿರುವ ಬಗ್ಗೆ ಆಸ್ಪತ್ರೆ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಆಸ್ಪತ್ರೆಗೆ ತೆರಳಿದ ಪೊಲೀಸರು ವಿಷ ಸೇವನೆಗೆ ಕಾರಣ ತಿಳಿದುಕೊಂಡು ಬೆಚ್ಚಿಬಿದ್ದಿದ್ದಾರೆ.

ಆ ಮೂವರು ಬಾಲಕಿಯರ ಪೈಕಿ ಒಬ್ಬಳು ಪ್ರಿಯಕರನನ್ನು ಭೇಟಿಯಾಗಲು ತನ್ನ ಇಬ್ಬರು ಗೆಳತಿಯರ ಜೊತೆ ಇಂದೋರ್ ಗೆ ಬಂದಿದ್ದಳು. ಪ್ರಿಯಕರ ಆಕೆಯ ಕಾಲ್ ರಿಸೀವ್ ಮಾಡದಿದ್ದ ಹಿನ್ನೆಲೆ ಆತನನ್ನು ನೇರವಾಗಿ ಮಾತನಾಡಿಸುವ ಸಲುವಾಗಿ ಆತ ವಾಸಿಸುತ್ತಿದ್ದ ಪ್ರದೇಶ ಇಂದೋರ್ ಗೆ ಗೆಳತಿಯರನ್ನು ಕರೆದುಕೊಂಡೇ ಬಂದಿದ್ದಾಳೆ. ಪ್ರಿಯಕರ ಭೇಟಿಯಾಗಲು ನಿರಾಕರಿಸಿದರೆ ವಿಷ ಸೇವಿಸುವ ನಿರ್ಧಾರವನ್ನು ಮೊದಲೇ ಆಕೆ ಮಾಡಿದ್ದಳು. ಇದೇ ಸಲುವಾಗಿ ಮೊದಲೇ ವಿಷದ ಬಾಟಲ್ ಖರೀದಿಸಿದ್ದಳು. ಇಂದೋರ್ ಗೆ ಬಂದ ಮೇಲೆ ಆಕೆ ಪ್ರಿಯಕರನಿಗೆ ಫೋನ್ ಮಾಡಿ ಭೇಟಿ ಮಾಡುವಂತೆ ಹೇಳಿದ್ದಾಳೆ, ಅಲ್ಲದೇ ಇಂದೋರ್ ಭವಾರ್ಕುಮ್ ಎಂಬಲ್ಲಿನ ಪಾರ್ಕ್ ನಲ್ಲಿ ಆಕೆ ತನ್ನ ಗೆಳತಿಯರ ಜೊತೆಗೆ ಆತನಿಗಾಗಿ ಬಹಳ ಹೊತ್ತು ಕಾದಿದ್ದಾರೆ. ಆದರೆ ಆತ ಅವಳನ್ನು ಭೇಟಿಯಾಗಲು ಬರಲಿಲ್ಲ ಎನ್ನಲಾಗಿದೆ.

ಇದರಿಂದ ಬೇಸತ್ತ ಪ್ರಿಯತಮೆ ನಿರ್ಜನ ಪ್ರದೇಶಕ್ಕೆ ತೆರಳಿ ವಿಷ ಸೇವಿಸಿದ್ದಾಳೆ. ಈ ವೇಳೆ ಜೊತೆಗಿದ್ದ ಮತ್ತೊಬ್ಬ ಬಾಲಕಿ ಕೂಡಾ ಕೌಟುಂಬಿಕ ಸಮಸ್ಯೆಯ ನೆಪ ನೀಡಿ ವಿಷ ಸೇವನೆ ಮಾಡಿದ್ದಾಳೆ. ಮತ್ತೊಬ್ಬ ಬಾಲಕಿ ಈಕೆಯ ಕ್ಲೋಸ್ ಫ್ರೆಂಡ್ ಆಗಿದ್ದು, ಗೆಳತಿಯ ಸಾವಿನ ಸತ್ಯ ಅರಗಿಸಲಾಗದೇ ವಿಷ ಸೇವಿಸಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸುತ್ತಮುತ್ತಲಿನ ಜನರು ಇವರನ್ನು ನೋಡಿ ಕೂಡಲೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ಪೊಲೀಸರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಪ್ರಕರಣದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Man Shoots Girlfriend:ಪ್ರೀತಿಸಿದ ಮಹಿಳೆ ಬ್ರೇಕಪ್​ ಮಾಡಿಕೊಂಡಿದ್ದಕ್ಕೆ ಗುಂಡಿಟ್ಟು ಕೊಂದ ಭೂಪ ಅಂದರ್​

ಇದನ್ನೂ ಓದಿ : 3 girls suicide: ಕ್ಲಾಸ್ ಬಂಕ್ ಮಾಡಿ ವಿಷ ಕುಡಿದ ಮೂವರು ಬಾಲಕಿಯರು: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

Kundapura College Student Kidnap Case Accused Arrest in 24 hours

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular