Pathaan Teaser: 4 ವರ್ಷಗಳ ಬಳಿಕ ಭರ್ಜರಿ ಕಮ್ ಬ್ಯಾಕ್ ಮಾಡಿದ ಬಾದ್ ಶಾ.. ‘ಪಠಾಣ್’ ಟೀಸರ್ ಹೇಗಿದೆ ನೋಡಿ..

ಮುಂಬೈ: Pathaan Teaser: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಇಂದು 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬದ ಖುಷಿ ನಡುವಲ್ಲೇ ಲಕ್ಷಾಂತರ ಅಭಿಮಾನಿಗಳಿಗೆ ಅವರು ಸರ್ಪೈಸ್ ನೀಡಿದ್ದಾರೆ. ಮುಂಬರುವ ಸಿನಿಮಾ ಪಠಾಣ್ ಸಿನಿಮಾದ ಟೀಸರ್ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರತಂಡ ಇಂದು ಕಿಂಗ್ ಖಾನ್ ಬರ್ತ್‍ಡೇ ಪ್ರಯುಕ್ತ ಅಭಿಮಾನಿಗಳಿಗೆ ಆ ಚಿತ್ರದ ಟೀಸರ್ ರಿಲೀಸ್ ಮಾಡಿ ಖುಷಿ ಕೊಟ್ಟಿದೆ. ಟೀಸರ್ ನಲ್ಲಿ ರಗಡ್ ಲುಕ್ ನಲ್ಲಿ ಶಾರುಖ್ ಕಾಣಿಸಿಕೊಂಡಿದ್ದು ಅವರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇದನ್ನೂ ಓದಿ: diaper changing facility : ಮೆಟ್ರೋ ನಿಲ್ದಾಣಗಳ ಪುರುಷರ ವಾಶ್​ರೂಮಿನಲ್ಲಿ ಇನ್ಮುಂದೆ ಇರಲಿದೆ ಡೈಪರ್​ ಚೇಂಜಿಂಗ್​ ರೂಮ್​

ಈ ಹಿಂದೆ ಶಾರುಖ್ ಖಾನ್ ಅವರು ಸಿನಿಮಾದ ಟೀಸರ್ ಹಾಗೂ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದರು. ದೀಪಿಕಾ ಲುಕ್ ಕೂಡಾ ಚಿತ್ರತಂಡ ರಿವೀಲ್ ಮಾಡಿತ್ತು. ಪೋಸ್ಟರ್ ನಲ್ಲಿ ಗನ್ ಹಿಡಿದು ಗುರಿಯಿಟ್ಟು ಹೊಡೆಯುವಂತೆ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ದೀಪಿಕಾ. ಡಿಪ್ಪಿ ಲುಕ್ ಗೆ ಅಭಿಮಾನಿಗಳು ಫುಲ್ ಮಾರ್ಕ್ ಕೊಟ್ಟರೆ, ನಿನ್ನನ್ನು ಕೊಲ್ಲಲು ಆಕೆಗೆ ಬುಲೆಟ್ ಅಗತ್ಯವಿಲ್ಲ ಎಂದು ಶಾರುಖ್ ಖಾನ್ ದೀಪಿಕಾ ಪೋಸ್ಟರ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು.

ಇದೀಗ ಟೀಸರ್ ರಿಲೀಸ್ ಆದ ಕೆಲವೇ ಗಂಟೆಯಲ್ಲಿ ಮಿಲಿಯನ್ ವೀಕ್ಷಣೆ ಕಂಡಿದೆ. ನಾಯಕ, ನಾಯಕಿ ಜೊತೆಗೆ ಜಾನ್ ಅಬ್ರಹಾಂ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದಾರೆ. ಮುಂದಿನ ವರ್ಷ ಅಂದರೆ 2023ರ ಜನವರಿ 25ರಂದು ಪಠಾಣ್ ಬಿಗ್ ಸ್ಕ್ರೀನ್ ಮೇಲೆ ಅಪ್ಪಳಿಸಲಿದೆ. ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಈ ಸಿನಿಮಾ ತೆರೆ ಕಾಣಲಿದೆ.

2018ರಲ್ಲಿ ಅನುಷ್ಕಾ ಶರ್ಮಾ ಜೊತೆ ಶಾರುಖ್ ಖಾನ್ ಝೀರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ ಚಿತ್ರ ಅಷ್ಟೊಂದು ಹಿಟ್ ಆಗಿಲ್ಲ. ಆ ಬಳಿಕ 4 ವರ್ಷಗಳ ಕಾಲ ಬಾದ್ ಶಾ ಸಿನಿರಂಗದಿಂದ ಅಂತರ ಕಾಯ್ದುಕೊಂಡು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ರು. ಆದರೆ ಇದೀಗ ಪಠಾಣ್ ಸಿನಿಮಾದ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿರುವುದು ಫ್ಯಾನ್ಸ್ ಗಳಲ್ಲಿ ಹುರುಪು ಮೂಡಿಸಿದೆ. ಅಂದ ಹಾಗೆ ಈ ಚಿತ್ರವನ್ನು ಸಿದ್ದಾರ್ಥ್ ಆನಂದ್ ನಿರ್ದೇಶಿಸಿದ್ದು, ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬರಲಿದೆ.

ಇದನ್ನೂ ಓದಿ: Hide and Seek Dies : ಲಿಫ್ಟ್‌ನಲ್ಲಿ ಕಣ್ಣಾಮುಚ್ಚಾಲೆ ಆಟ : 16 ವರ್ಷದ ಬಾಲಕಿ ಸಾವು

ಕಳೆದ 2013ರಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದಲ್ಲಿ ಶಾರುಖ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಅಂದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಇದೀಗ ಮತ್ತೆ ಪಠಾಣ್ ಚಿತ್ರದಲ್ಲಿ ಇಬ್ಬರೂ ಜೋಡಿಯಾಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಎಷ್ಟು ಮಾಕ್ರ್ಸ್ ಕೊಡ್ತಾರೆ ಅನ್ನೋದು ಮುಂದಿನ ವರ್ಷ ಗೊತ್ತಾಗಲಿದೆ.

Pathaan Teaser: Baad Shah made a big comeback after 4 years.. Check out the ‘Pathan’ teaser

Comments are closed.