Life threatening: ಬೈಂದೂರು: ದ್ವಿಚಕ್ರ ವಾಹನ ಅಡ್ಡಗಟ್ಟಿ ಜೀವ ಬೆದರಿಕೆ

ಬೈಂದೂರು: (Life threatening) ವಿನಾಕಾರಣ ವ್ಯಕ್ತಿಯೊಬ್ಬರ ವಾಹನವನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ ಘಟನೆ ಬೈಂದೂರಿನ ನೀರ್ಗದ್ದೆ ಬಳಿ ನಡೆದಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ವ್ಯಕ್ತಿಯೂ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಬೈಂದೂರಿನ ಮುಸ್ಲಿಂ ಕೇರಿ ಮುಖ್ಯ ರಸ್ತೆ ನಿವಾಸಿ ಮೊಹಮ್ಮದ್‌ ಅಕ್ರಮ್‌ ಅವರು ಭಟ್ಕಳದ ಆಸ್ಪತ್ರೆಯೊಂದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಸಂಜೆ ವೇಳೆ ಆಸ್ಪತ್ರೆಯಿಂದ ತಮ್ಮ ದ್ವಿಚಕ್ರ ವಾಹನದಲ್ಲಿ ಬೈಂದೂರಿಗೆ ಬರುತ್ತಿರುವಾಗ ಶಿರೂರು ಗೇಟ್‌ ಬಳಿ ಮೊಹಮ್ಮದ್‌ ಅಕ್ಬರ್‌ ಹಾಗೂ ಇನ್ನೋರ್ವ ವ್ಯಕ್ತಿ ದ್ವಿಚಕ್ರ ವಾಹಯದಲ್ಲಿ ಬಂದಿದ್ದು, ಐದರಿಂದ ಆರು ಬಾರಿ ಮೊಹಮ್ಮದ್‌ ಅಕ್ರಮ್‌ ಅವರ ವಾಹನಕ್ಕೆ ಅಡ್ಡ ಬಂದಿದ್ದರು. ಇದರಿಂದ ಅಕ್ರಮ್‌ ಅವರು ಹೆದರಿ ಅಲ್ಲಿಂದ ವೇಗವಾಗಿ ಹೊರಟು ಹೋಗಿದ್ದರು.

ನಂತರ ನೀರ್ಗದ್ದೆ ಬಳಿ ಬರುತ್ತಿರುವಾಗ ಮತ್ತೆ ಇಬ್ಬರು ಅಕ್ರಮ್‌ ಅವರ ವಾಹನವನ್ನು ಅಡ್ಡಗಟ್ಟಿಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದರು. ಈ ವೇಳೆ ಹಾಗೋ ಹೀಗೋ ಮಾಡಿ ವ್ಯಕ್ತಿಗಳಿಂದ ಅಕ್ರಮ್‌ ತಪ್ಪಿಸಿಕೊಂಡು ಬಂದಿದ್ದು, ಒತ್ತಿನೆಣೆಯಲ್ಲಿ ಅದೇ ಇಬ್ಬರು ವ್ಯಕ್ತಿಗಳು ಇನ್ನಿಬ್ಬರು ಅಪರಿಚಿತ ವ್ಯಕ್ತಿಗಳ ಜೊತೆಗೆ ಮಾತನಾಡುತ್ತಾ ನಿಂತಿದ್ದಾರೆ. ಇವರು ಯಾವುದೋ ದುರುದ್ದೇಶದಿಂದ ತನಗೆ ತೊಂದರೆ ನೀಡಲು ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದುಕೊಂಡು ಮೊಹಮ್ಮದ್‌ ಅಕ್ರಮ್‌ ಅವರು ಕೂಡಲೇ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಜೀವ ಬೆದರಿಕೆಯ ಬಗ್ಗೆ ದೂರು ನೀಡಿದ್ದಾರೆ. ಇದೀಗ ಅಕ್ರಮ್‌ ಅವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ : Cow hug day in udupi: ಪ್ರೇಮಿಗಳ ದಿನದಂದು ಉಡುಪಿಯಲ್ಲಿ ಗೋ ಆಲಿಂಗನ

ಇದನ್ನೂ ಓದಿ : ದಕ್ಷಿಣ ಕನ್ನಡ: ಕುಕ್ಕೆ, ಧರ್ಮಸ್ಥಳಕ್ಕೆ ರಾಜ್ಯಪಾಲರ ಭೇಟಿ

ಇದನ್ನೂ ಓದಿ : Drug consumption case: ಗಂಗೊಳ್ಳಿ: ಮಾದಕ ವಸ್ತು ಸೇವನೆ ಪ್ರಕರಣ: ಮೂವರು ಅರೆಸ್ಟ್‌

Life threatening: Byndur: Two-wheeler stalled, life threatening

Comments are closed.