ಭಾನುವಾರ, ಏಪ್ರಿಲ್ 27, 2025
HomeCoastal NewsLove Jihad Shilpa Suicide : ಲವ್ ಸೆಕ್ಸ್ ಜಿಹಾದ್ : ಶಿಲ್ಪಾ ಆತ್ಮಹತ್ಯೆ ಬೆನ್ನಲ್ಲೇ...

Love Jihad Shilpa Suicide : ಲವ್ ಸೆಕ್ಸ್ ಜಿಹಾದ್ : ಶಿಲ್ಪಾ ಆತ್ಮಹತ್ಯೆ ಬೆನ್ನಲ್ಲೇ ಕವನ ರೂಪದ ಪತ್ರ ಪತ್ತೆ

- Advertisement -

ಕುಂದಾಪುರ : ಉಪ್ಪಿನಕುದ್ರು ಶಿಲ್ಪಾ ದೇವಾಡಿಗ (Love Jihad Shilpa Suicide ) ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಶಿಲ್ಪಾ ಸಾವಿನ ಬೆನ್ನಲ್ಲೇ ಲವ್‌ ಜಿಹಾದ್‌ ಆರೋಪ ಕೇಳಿಬಂದಿತ್ತು. ಇದೀಗ ಶಿಲ್ಪ ಕವನ ರೂಪದಲ್ಲಿ ಬರೆದಿರುವ ಪತ್ರ ಪತ್ತೆಯಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಉಪ್ಪಿನಕುದ್ರು ನಿವಾಸಿ ಶಿಲ್ಪಾ ಎ ದೇವಾಡಿಗ ಕಳೆದ ಎರಡು ದಿನಗಳ ಹಿಂದೆ ಬಾರದ ಲೋಕಕ್ಕೆ ಪಯಣಿಸಿದ್ದಾಳೆ. ಶಿಲ್ಪಾ ಸಾವಿನ ಬೆನ್ನಲ್ಲೇ ಲವ್‌ ಜಿಹಾದ್‌ ಆರೋಪ ಕೇಳಿಬಂದಿತ್ತು. ಇದೀಗ ಶಿಲ್ಪಾ ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಕವನದ ರೂಪದಲ್ಲಿ ಪತ್ರ ಬರೆದಿದ್ದಾಳೆ. ಕೇವಲ ಬಾಹ್ಯ ಸೌಂದರ್ಯ ಕ್ಕಾಗಿ ನಿಮ್ಮನ್ನು ಪ್ರೀತಿಸುತ್ತಾರೆ. ಟೈಮ್ ಪಾಸ್ ಮಾಡಲು ಮಾತ್ರ ನಿಮ್ಮನ್ನು ಪ್ರೀತಿಸುವ ನಾಟಕವಾಡುತ್ತಾರೆ. ಎಲ್ಲವನ್ನೂ ಮಾಡುತ್ತಾರೆ ಆದರೆ ನಿಮಗೆ ಐ ಹೇಟ್ ಯು ಅನ್ನುತ್ತಾರೆ ಎಂದು ಅಜೀಜ್‌ ಹಾಗೂ ತನ್ನ ನಡುವೆ ನಡೆದಿರುವ ಘಟನೆಗಳನ್ನು ಕವನ ರೂಪದಲ್ಲಿ ಬರೆದಿರುವು ಪತ್ತೆಯಾಗಿದೆ.

Love Jihad Shilpa Suicide : ಶಿಲ್ಪಾ ಸಾವಿನ ಬೆನ್ನಲ್ಲೇ ಲವ್‌ ಜಿಹಾದ್‌ ಆರೋಪ

ಕುಂದಾಪುರ ತಾಲೂಕಿನ ತಲ್ಲೂರಿನ ಜವಳಿ ಅಂಗಡಿಯಲ್ಲಿ ಶಿಲ್ಪಾ ಉದ್ಯೋಗದಲ್ಲಿದ್ದಳು. ಕಳೆದ ನಾಲ್ಕು ವರ್ಷಗಳಿಂದಲೂ ಆಕೆಯನ್ನು ಪ್ರೀತಿಸುತ್ತಿರುವುದಾಗಿ ಹೇಳಿ ತನ್ನ ಬಲೆಗೆ ಬೀಳಿಸಿಕೊಂಡಿದ್ದ. ಅಲ್ಲದೇ ಆಕೆಯನ್ನು ತನ್ನ ಕಾಮತೃಷೆಗೆ ಬಳಿಸಿಕೊಂಡು ಆಕೆಯ ಬೆತ್ತಲೆ ಪೋಟೋ ಹಾಗೂ ವಿಡಿಯೋಗಳನ್ನು ಸೆರೆ ಹಿಡಿದಿದ್ದಾನೆ. ಆರಂಭದಲ್ಲಿ ಮದುವೆಯಾಗುವುದಾಗಿ ಹೇಳಿದ್ದ ಅಜೀಜ್‌ ನಂತರದಲ್ಲಿ ಆಕೆಯನ್ನು ಮದುವೆಯಾಗುವುದಿಲ್ಲ ಎಂದು ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ಅಜೀಜ್‌ಗೆ ಐದಾರು ವರ್ಷದ ಹಿಂದೆ ಮದುವೆಯಾಗಿದ್ದು, ತನ್ನ ಪತ್ನಿಯ ಜೊತೆಗೆ ಶಿಲ್ಪಾ ಕೆಲಸ ಮಾಡುತ್ತಿದ್ದ ಅಂಗಡಿಗೆ ಬಂದು ನಿಂದಿಸಿದ್ದ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಅಜೀಜ್‌ ದಂಪತಿ ಪ್ರಚೋದನೆಯನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಜೀಜ್‌ ದಂಪತಿಯಿಂದಾಗಿ ಮನನೊಂದ ಶಿಲ್ಪಾ ಇಲಿ ಪಾಷಾಣ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ ಎಂದು ಶಿಲ್ಪಾ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಶಿಲ್ಪಾ ಆತ್ಮಹತ್ಯೆಯ ಹಿಂದೆ ಲವ್‌ ಜಿಹಾದ್‌ ಷಡ್ಯಂತ್ರವಿದೆ ಎಂದು ವಿಶ್ವ ಹಿಂದೂ ಪರಿಷತ್‌ ಆರೋಪಿಸಿದೆ. ಅಮಾಯಕ ಹೆಣ್ಣು ಮಗಳೊಬ್ಬಳ ಸಾವಿಗೆ ಕಾರಣರಾಗಿರುವ ಅಜೀಜ್‌ ಹಾಗೂ ಆತನ ಹೆಂಡತಿ ಸಲ್ಮಾ ವಿರುದ್ದ ಪೊಲೀಸರು ಕಠಿಣ ಕ್ರಮವನ್ನು ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಕಾರ್ಯದರ್ಶಿ ದಿನೇಶ್‌ ಮೆಂಡನ್‌ ಆಗ್ರಹಿಸಿದ್ದಾರೆ.

ಇದನ್ನೂ ಓದಿ : belagavi : ಮತ್ತೆ ಎಂಇಎಸ್​ ಗೂಂಡಾಗಳ ಪುಂಡಾಟ: ಕನ್ನಡ ಹಾಡು ಹಾಕಿದ್ದಕ್ಕೆ ವಧು-ವರರ ಮೇಲೆ ಹಲ್ಲೆ

ಇದನ್ನೂ ಓದಿ : Kerala dowry death: ಕೇರಳ ವಿಸ್ಮಯ ಸಾವು ಪ್ರಕರಣ: ಪತಿಗೆ 10 ವರ್ಷ ಜೈಲು, 12.55 ಲಕ್ಷ ರೂ ದಂಡ

Love Jihad Shilpa Suicide Letter Found

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular