Mangalore Bomb Blast Case: ಉಗ್ರ ಶಾರೀಖ್‌ ನನ್ನು ಬೆಂಗಳೂರಿಗೆ ಶಿಫ್ಟ್‌ ಮಾಡಿದ ಎನ್.ಐ.ಎ

ಮಂಗಳೂರು: (Mangalore Bomb Blast Case) ಮಂಗಳೂರು ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್.ಐ.ಎ ತಂಡ ತನಿಖೆಗಳನ್ನು ಚುರುಕುಗೊಳಿಸಿದ್ದು, ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿಗಳು ಹೊರ ಬಿದ್ದಿವೆ. ಇದೀಗ ಉಗ್ರ ಶಾರೀಖ್‌ ಚೇತರಿಸಿಕೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ.

ಉಗ್ರ ಶಾರೀಕ್ ಸಂಪೂರ್ಣ ಗುಣಮುಖನಾಗದ ಹಿನ್ನೆಲೆ ಉಗ್ರ ಶಾರೀಕ್ (Mangalore Bomb Blast Case) ಆಸ್ಪತ್ರೆಯಿಂದ ಸ್ಥಳಾಂತರಗೊಂಡಿದ್ದು, ಶುಕ್ರವಾರ ರಾತ್ರಿಯೇ ಆತನನ್ನು ಆಂಬ್ಯುಲೆನ್ಸ್‌ ಮೂಲಕವೇ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಎನ್.ಐ.ಎ ಅಧಿಕಾರಿಗಳ ತಂಡ ಶಾರೀಖ್‌ ನನ್ನು ಬೆಂಗಳೂರಿಗೆ ಕರೆತಂದಿದ್ದು, ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ಸೆಂಟರ್ ನಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಚಿಕಿತ್ಸೆ ಸಂಪೂರ್ಣವಾದ ನಂತರ ಬೆಂಗಳೂರಿನ ಎನ್.ಐ.ಎ ಕಚೇರಿಯಲ್ಲಿ ಶಾರೀಕ್ ನ ವಿಚಾರಣೆ ಮುಂದುವರಿಯಲಿದೆ.

ಏನಿದು ಬಾಂಬ್‌ ಸ್ಫೋಟ ಪ್ರಕರಣ..?

ಮಂಗಳೂರು ನಗರದ ನಾಗುರಿ ಎಂಬಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾ ಸ್ಫೋಟಗೊಂಡಿದ್ದು, ಆಟೋ ಚಾಲಕ ಹಾಗೂ ಉಗ್ರ ಶಾರೀಖ್ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯ ಕುರಿತು ತನಿಖೆಗೆ ಇಳಿದಿದ್ದ ಪೊಲೀಸರಿಗೆ ಶಾಕಿಂಗ್ ಮಾಹಿತಿ ಲಭ್ಯವಾಗಿತ್ತು. ಶಾರೀಖ್ ಸ್ಪೋಟಿಸಿದ್ದು ಕುಕ್ಕರ್ ಬಾಂಬ್ ಅನ್ನೋ ಮಾಹಿತಿಯ ಜಾಡು ಹಿಡಿದ ಪೊಲೀಸರು ಈಗಾಗಲೇ ಉಗ್ರರನಿಗೆ ಸಹಕಾರ ನೀಡಿದರವನ್ನು ಬಂಧಿಸಿದ್ದಾರೆ. ಸದ್ಯ ಶಾರೀಖ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಇನ್ನಷ್ಟು ವಿಚಾರಣೆಗಳು ಎನ್‌ಐಎ ತಂಡದಿಂದ ನಡೆಯಲಿದೆ.

ಇದನ್ನೂ ಓದಿ : Toxic Spinach :ಹುಷಾರ್ : ಪಾಲಕ್ ಸೊಪ್ಪು ತಿಂದು ಆಸ್ಪತ್ರೆ ಸೇರಿದ ಸಾವಿರಾರು ಜನರು

ಇದನ್ನೂ ಓದಿ : Fire disaster-6 died: ಮನೆಗೆ ಬೆಂಕಿ: ಒಂದೇ ಕುಟುಂಬದ 6 ಮಂದಿ ದುರ್ಮರಣ

ಇದನ್ನೂ ಓದಿ : Assault on student: ವಿದ್ಯಾರ್ಥಿನಿಗೆ ಕತ್ತರಿಯಿಂದ ಹಲ್ಲೆ ನಡೆಸಿ, ಶಾಲಾ ಮಹಡಿಯಿಂದ ಎಸೆದ ಶಿಕ್ಷಕಿ ಅರೆಸ್ಟ್

(Mangalore Bomb Blast Case) In connection with the Mangalore bomb blast, the NIA team has accelerated the investigations and many explosive information has come out during the investigation. Now Ugra Shareekh has recovered and he has been shifted to Victoria Hospital in Bangalore for further treatment.

Comments are closed.