Toxic Spinach :ಹುಷಾರ್ : ಪಾಲಕ್ ಸೊಪ್ಪು ತಿಂದು ಆಸ್ಪತ್ರೆ ಸೇರಿದ ಸಾವಿರಾರು ಜನರು

ಆಸ್ಟ್ರೇಲಿಯ : (Toxic Spinach)ಪಾಲಕ್ ಸೊಪ್ಪು ತಿಂದು ಆಸ್ಟ್ರೇಲಿಯಾದ ಜನರು ಅನಾರೋಗ್ಯಕ್ಕೆ ತುತ್ತಾಗಿದ್ದು, ಅಸ್ವಸ್ಥಗೊಂಡ ಜನರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಮಾಹಿತಿಯ ಪ್ರಕಾರ ವಿಷಕಾರಿ ಪಾಲಕ್ ಸೇವನೆ ಮಾಡಿರುವುದರಿಂದ ಜನ ಅನಾರೋಗ್ಯಕ್ಕೆ ತುತ್ತಾಗಲು ಕಾರಣ ಎನ್ನಲಾಗುತ್ತಿದೆ. ಈ ವಿಷಕಾರಿ ಪಾಲಕ್ ಸೇವಿಸಿದ ಜನರು ಹೆಲುಸಿನೆಶನ್ ಮತ್ತು ಡೆಲಿರಿಯಂ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಮಾಹಿತಿ ಬಂದಿದೆ.

(Toxic Spinach)ಆಸ್ಟ್ರೇಲಿಯಾದಲ್ಲಿ ಪಾಲಕ್‌ ಸೊಪ್ಪು ಸೇವನೆ ಮಾಡಿದ ಜನರ ಹೃದಯ ಬಡಿತದಲ್ಲಿ ಏರುಪೇರು, ಮಂದ ದೃಷ್ಟಿ ಮುಂತಾದ ಲಕ್ಷಣಗಳು ಕಂಡುಬಂದಿದೆ. ರಿವೇರಿಯಾ ಫಾರ್ಮ್ಸ್‌ ಬ್ರಾಂಡ್ ನ ಪಾಲಕ್‌ ತಿಂದು ಆಸ್ಟ್ರೇಲಿಯಾದ ಜನರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಹೆಲುಸಿನೆಶನ್ ಸಮಸ್ಯೆ ಕಾಣಿಸಿಕೊಂಡರೆ ಜನರು ಭ್ರಮೆಗೊಳ್ಳುತ್ತಾರೆ ಮತ್ತು ಡೆಲಿರಿಯಂ ಕಾಯಿಲೆಯಿಂದ ಜನರ ಮೆದುಳು ಸರಿಯಾಗಿ ಕೆಲಸ ಮಾಡುವುದಿಲ್ಲ.

ಇದನ್ನೂ ಓದಿ:Fire disaster-6 died: ಮನೆಗೆ ಬೆಂಕಿ: ಒಂದೇ ಕುಟುಂಬದ 6 ಮಂದಿ ದುರ್ಮರಣ

ಇದನ್ನೂ ಓದಿ:Sydney Thunders all out for 15 runs: ಟಿ20ಯಲ್ಲಿ 15 ರನ್ನಿಗೆ ಆಲೌಟ್, ಸಿಡ್ನಿ ಥಂಡರ್ಸ್ ಹೆಸರಿಗೆ ಅಂಟಿತು ಅವಮಾನಕರ ದಾಖಲೆ

ಇದನ್ನೂ ಓದಿ:Call for college bandh: ಸರಕಾರದ ವಿರುದ್ದ ಸಿಡಿದೆದ್ದ ವಿದ್ಯಾರ್ಥಿಗಳ : ರಾಜ್ಯದಾದ್ಯಂತ ಕಾಲೇಜು ಬಂದ್ ಗೆ ಕರೆ

ಹೊಲದಲ್ಲಿ ಬೆಳೆದ ಕಳೆಯಿಂದಾಗಿ ಪಾಲಕ್‌ ಸೊಪ್ಪು ವಿಷಕಾರಿ ಆಗಿದೆ ಎಂಬ ಮಾಹಿತಿ ತಿಳಿದು ಬಂದಿದ್ದು, ಸದ್ಯ ಈ ಬ್ರಾಂಡ್‌ ನ ಬೇರೆ ಉತ್ಪನ್ನಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ರಿವೇರಿಯಾ ಫಾರ್ಮ್ಸ್‌ ಬ್ರಾಂಡ್ ನ ಪಾಲಕ್‌ ತಿಂದು ದೇಹದಲ್ಲಿ ಬದಲಾವಣೆ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಆಸ್ಟ್ರೇಲಿಯಾದ ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದೆ. ಡಿಸೆಂಬರ್‌ 16 ದಿನಾಂಕ ಇರುವ ಯಾವುದೇ ಬ್ರಾಂಡ್‌ ಪ್ಯಾಕ್‌ ಮಾಡಿರುವ ಪಾಲಕ್‌ ಅನ್ನು ಸೇವನೆ ಮಾಡಬಾರದು ಎಂದು ನ್ಯೂ ಸೌತ್‌ ವೇಲ್ಸ್‌ ಹೆಲ್ತ್‌ ಮಾಹಿತಿ ನೀಡಿದೆ. ಮತ್ತು ಯಾವುದೇ ಪಾಲಕ್‌ ಸೊಪ್ಪು ತಿಂದಾಗ ಇಂತಹ ತೊಂದರೆ ಕಾಣಿಸಿಕೊಂಡರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ. ಸದ್ಯ ಇಂತಹ ಘಟನೆಯಿಂದ ಪ್ರಾಣಹಾನಿ ಸಂಭವಿಸಿಲ್ಲ.

Toxic Spinach Beware: Thousands of people admitted to hospital after eating spinach

Comments are closed.