LPG Gas Cylinder : LPG ಗ್ಯಾಸ್ ಸಿಲಿಂಡರ್ ಹೊಸ ನಿಯಮ :12ಕ್ಕಿಂತ ಅಧಿಕ ಸಿಲಿಂಡರ್ ಬಳಸಿದ್ರೆ ಸಬ್ಸಿಡಿ ಕಟ್

ನವದೆಹಲಿ : ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌(LPG Gas Cylinder )ಗಳ ಬಳಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಇನ್ಮುಂದೆ ಬೇಕಾದಷ್ಟು ಗ್ಯಾಸ್ ಸಿಲಿಂಡರ್ ಗಳನ್ನು ಗ್ರಾಹಕರು ಪಡೆದುಕೊಳ್ಳುವಂತಿಲ್ಲ. ಒಂದು ವರ್ಷದಲ್ಲಿ ಗ್ರಾಹಕರು ಪಡೆಯಬಹುದಾಗಿರುವ ಸಿಲಿಂಡರ್ ಗಳ ಮೇಲೆ ಮಿತಿ ಹೇರಲಾಗಿದೆ.

ಇನ್ನು ಮುಂದೆ ಗ್ರಾಹಕರಿಗೆ LPG ಸಿಲಿಂಡರ್ (LPG Gas Cylinder)ಗಳನ್ನು ಎಷ್ಟು ಸಂಖ್ಯೆಯಲ್ಲಿ ನೀಡಬೇಕು ಅನ್ನೋದನ್ನು ಸರಕಾರ ನಿಗದಿಪಡಿಸುತ್ತದೆ. ಇನ್ಮುಂದೆ ಯಾವುದೇ ಗ್ರಾಹಕರು ವರ್ಷಕ್ಕೆ 15 ಕ್ಕಿಂತ ಹೆಚ್ಚು ಸಿಲಿಂಡರ್‌ಗಳನ್ನು ಮಾತ್ರ ಬುಕ್ ಮಾಡುವಂತಿಲ್ಲ.ಹಾಗಾಗಿ, ಎಲ್‌ಪಿಜಿ ಸಿಲಿಂಡರ್‌ ಬಳಕೆದಾರರು ಪ್ರತಿ ತಿಂಗಳಲ್ಲಿ 2 ಸಿಲಿಂಡರ್‌ ಗಳಿಗಿಂತ ಹೆಚ್ಚಿಗೆ ತಗೆದುಕೊಳ್ಳಲು ಸಾಧ್ಯವಿರುವುದಿಲ್ಲ.ಇಲ್ಲಿಯವರೆಗೆ LPG ಸಿಲಿಂಡರ್ ಖರೀದಿಸಲು ತಿಂಗಳು ಅಥವಾ ವರ್ಷಗಳ ನಿರ್ದಿಷ್ಟ ಕೋಟಾವನ್ನು ನಿಗದಿಪಡಿಸಿರಲಿಲ್ಲ. ಈ ಕುರಿತು ಮಾಧ್ಯಮ ವರದಿಗಳ ಪ್ರಕಾರ, ಒಂದು ವರ್ಷದಲ್ಲಿ ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆ 12 ಕ್ಕೆ ಏರಿಸಲಾಗಿದ್ದು LPG ಸಿಲಿಂಡರ್ ಗ್ರಾಹಕರು 15 ಸಿಲಿಂಡರ್‌ಗಳನ್ನು ತೆಗೆದುಕೊಳ್ಳಬಹುದು, ಆದರೆ ಕೇವಲ 12 ಸಿಲಿಂಡರ್‌ಗಳಿಗೆ ಮಾತ್ರ ಸಬ್ಸಿಡಿ ಸಿಗಲಿದೆ.

ಇದನ್ನೂ ಓದಿ : Senior Citizen FD Interest Rates 2022: ಹಿರಿಯ ನಾಗರಿಕರಿಗೆ ಸ್ಥಿರ ಠೇವಣಿಗಳ ಮೇಲೆ ಯಾವ ಬ್ಯಾಂಕ್‌ ಎಷ್ಟು ಬಡ್ಡಿದರ ನೀಡುತ್ತದೆ ಗೊತ್ತಾ

ಇದನ್ನೂ ಓದಿ : CM Basavaraj Bommai : CM ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿಗೆ ಅಂತರಾಷ್ಟ್ರೀಯ ಬಿಸಿನೆಸ್‌ ಅವಾರ್ಡ್‌

ಇದನ್ನೂ ಓದಿ : Mukesh Ambani – Shiv Nadar : ಉದ್ಯಮದಲ್ಲಿ ಯಶಸ್ಸು ಕಂಡ ಮುಕೇಶ್‌ ಅಂಬಾನಿ, ಶಿವ ನಾಡರ್‌ ಪುತ್ರಿಯರು

ಇದನ್ನೂ ಓದಿ : LPG Subsidy : ಎಲ್‌ಪಿಜಿ ಸಬ್ಸಿಡಿ, ಹೊಸ ನಿಯಮ ಪ್ರಕಟಿಸಿದ ಸರಕಾರ

ಈ ನಿಯಮ ಅಕ್ಟೋಬರ್ 1 ರಿಂದ ಹೊಸ ಗ್ಯಾಸ್ ಬೆಲೆಗಳನ್ನು ಬಿಡುಗಡೆ ಮಾಡಲಾಗಿದ್ದು, ದೆಹಲಿಯಲ್ಲಿ LPG ಸಿಲಿಂಡರ್ ಬೆಲೆ 1053 ರೂ., ಮುಂಬೈನಲ್ಲಿ 1052.5 ರೂ., ಚೆನ್ನೈನಲ್ಲಿ 1068.5 ರೂ. ಮತ್ತು ಕೋಲ್ಕತ್ತಾದಲ್ಲಿ 1079 ರೂ.ನ್ನು ನಿಗದಿಪಡಿಸಲಾಗಿದೆ.

LPG Gas Cylinder New Rule : Subsidy cut if more than 12 cylinders are used

Comments are closed.