ಸೋಮವಾರ, ಏಪ್ರಿಲ್ 28, 2025
HomeBreakingಮಂಗಳೂರಿಗರೇ ಎಚ್ಚರ ! ಹಾಡುಹಗಲೇ ದರೋಡೆಕೋರರನ್ನು ಹೊಡೆದು ಓಡಿಸಿದ ಧೀರ ಮಹಿಳೆ

ಮಂಗಳೂರಿಗರೇ ಎಚ್ಚರ ! ಹಾಡುಹಗಲೇ ದರೋಡೆಕೋರರನ್ನು ಹೊಡೆದು ಓಡಿಸಿದ ಧೀರ ಮಹಿಳೆ

- Advertisement -

ಮಂಗಳೂರು : ಹಾಡುಹಗಲಲ್ಲೇ ನಗರದಲ್ಲಿಂದು ಮಹಿಳೆಯೋರ್ವ ಸರ ಕಳವಿಗೆ ಯತ್ನ ನಡೆದಿದೆ. ಕಾರಿನಲ್ಲಿ ಬಂದಿದ್ದ ನಾಲ್ವರ ಪೈಕಿ ಓರ್ವ ಮಹಿಳೆಯ ಮೇಲೆ ಅಟ್ಯಾಕ್‌ ಮಾಡುತ್ತಿದ್ದಂತೆಯೇ ಮಹಿಳೆ ಅಲರ್ಟ್‌ ಆಗಿದ್ದಾರೆ. ಎದೆಗುಂದದೆ ದರೋಡೆಕೋರರನ್ನು ಹೊಡೆದು ಓಡಿಸಿದ್ದಾರೆ.

ಮಂಗಳೂರು ನಗರದ ಸೈಂಟ್‌ ಆಗ್ನೇಸ್‌ ಕಾಲೇಜು ಮುಂಭಾಗದಲ್ಲಿ ಬೆಳಗ್ಗೆ 11 ಗಂಟೆಯ ಸುಮಾರಿಗೆ ಮಹಿಳೆಯೋರ್ವರು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆಯಲ್ಲಿ ಕಾರಿ ನಲ್ಲಿ ಬಂದಿದ್ದ ಮೂವರು ಮಹಿಳೆಯ ಸರ ಹಾಗೂ ಬ್ಯಾಗ್‌ ದರೋಡೆಗೆ ಯತ್ನಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಮಹಿಳೆ ದರೋಡೆಕೋರನ ಮೇಲೆ ಪ್ರತಿದಾಳಿ ನಡೆಸಿದ್ದಾರೆ. ದರೋಡೆಕೋರರನನ್ನು ನೆಲಕ್ಕೆ ಉರುಳಿಸಿ ಸೆರೆ ಹಿಡಿಯಲು ಯತ್ನಿಸಿದ್ದಾರೆ. ಆದರೆ ದರೋಡೆಕೋರರ ತಂಡ ಮಹಿಳೆಯ ಕೈಯಿಂದ ತಪ್ಪಿಸಿಕೊಂಡು ಎಸ್ಕೇಪ್‌ ಆಗಿದೆ.

ಮಹಿಳೆ ದರೋಡೆಕೋರನ ಮೇಲೆ ಅಟ್ಯಾಕ್‌ ಮಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಕೂಡ ಓಡಿ ಬಂದು ಕಾರನ್ನು ಹಿಡಿಯುವ ಯತ್ನ ಮಾಡಿದ್ದಾರೆ. ಆದರೆ ಕೆಲವರು ಮೂಕವಿಸ್ಮಿತರಾಗಿ ಮಹಿಳೆಯ ಸಾಹಸವನ್ನು ನೋಡುತ್ತಿದ್ದರು. ಇದೀಗ ದರೋಡೆಕೋರರ ಜೊತೆಗೆ ಮಹಿಳೆಯ ಸೆಣೆಸಾಟದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಾರಿನಲ್ಲಿ ನಂಬರ್‌ ಪ್ಲೇಟ್‌ ಅಳವಡಿಸಿಲ್ಲ. ಹೀಗಾಗಿ ದರೋಡೆಕೋರರ ಕುರುಹು ಪತ್ತೆಯಾಗಿಲ್ಲ. ಆದರೆ ಹಲವರು ಮೊಬೈಲ್‌ ನಲ್ಲಿ ಸೆರೆ ಹಿಡಿದಿರುವ ವಿಡಿಯೋದಲ್ಲಿ ದರೋಡೆ ಕೋರರ ಮುಖ ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸರು ದರೋಡೆಕೋರರಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.

ಮಂಗಳೂರು ನಗರದಲ್ಲಿ ಹಾಡುಹಗಲಲ್ಲೇ ದರೋಡೆಗೆ ಯತ್ನ ನಡೆದಿರೋದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣ ಹೆಚ್ಚುತ್ತಿದ್ದು, ಕಳೆದ ಕಲವು ದಿನಗಳ ಹಿಂದೆಯಷ್ಟೇ ನಿಲ್ಲಿಸಿದ್ದ ಕಾರುಗಳನ್ನು ದರೋಡೆ ಮಾಡುವ ಯತ್ನ ನಡೆಸಲಾಗಿತ್ತು. ಇದೀಗ ಸರಗಳ್ಳರ ಕೃತ್ಯ ಬಯಲಾಗಿರೋದ್ರ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಕೂಡ ಅಲರ್ಟ್‌ ಆಗಿದೆ. ಅಷ್ಟಕ್ಕೂ ಇದು ನಿಜವಾದ ದರೋಡೆ ಅಲ್ಲಾ, ಬದಲಾಗಿ ಪೊಲೀಸ್‌ ಇಲಾಖೆ ಮಾಡಿದ ಅಣುಕು ಪ್ರದರ್ಶನ. ಸಾರ್ವಜನಿಕರು ದರೋಡೆ, ಕಳವು ನಡೆದಾಗ ಹೇಗೆ ಅಲರ್ಟ್‌ ಆಗಬೇಕು ಅನ್ನೋದನ್ನು ಮಾಡಿತೋರಿಸುವ ಸಲುವಾಗಿ ಪೊಲೀಸ್‌ ಇಲಾಖೆ ಈ ಅಣುಕು ಪ್ರದರ್ಶನ ಮಾಡಿದೆ ಎಂದು ನಗರ ಪೊಲೀಸ್‌ ಆಯುಕ್ತ ಎನ್.‌ ಶಶಿಕುಮಾರ್‌ ತಿಳಿಸಿದ್ದಾರೆ.

https://www.youtube.com/watch?v=twgSw9fZhwk

(a lady chase and attack robbers in mangalore )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular