ಭಾನುವಾರ, ಏಪ್ರಿಲ್ 27, 2025
HomeCoastal NewsPolice FIR : ಪೊಲೀಸಪ್ಪನ ಕಾಮಪುರಾಣ : ಅಪ್ರಾಪ್ತ ಯುವತಿಗೆ ಅಬಾರ್ಷನ್‌ ಮಾಡಿಸಿದ್ದ ಪೊಲೀಸ್‌ ಶಿವರಾಜ್‌...

Police FIR : ಪೊಲೀಸಪ್ಪನ ಕಾಮಪುರಾಣ : ಅಪ್ರಾಪ್ತ ಯುವತಿಗೆ ಅಬಾರ್ಷನ್‌ ಮಾಡಿಸಿದ್ದ ಪೊಲೀಸ್‌ ಶಿವರಾಜ್‌ ವಿರುದ್ದ ದೂರು

- Advertisement -

ಕಡಬ (ಮಂಗಳೂರು ) : ಅಪ್ರಾಪ್ತ ಯುವತಿಯೋರ್ವಳ ಜೊತೆಗೆ ಪ್ರೀತಿ ಪ್ರೇಮದ ನಾಟಕವಾಗಿ ಆಕೆಯನ್ನು ಕಾದಾಟಕ್ಕೆ ಬಳಿಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್‌ ಠಾಣೆಯ ಕಾನ್‌ಸ್ಟೇಬಲ್‌ ಶಿವರಾಜ್‌ ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ.

ಸಮಸ್ಯೆ ಹೇಳಿಕೊಂಡು ಠಾಣೆಗೆ ಬರುತ್ತಿದ್ದ ಮಹಿಳೆಯರು, ಯುವತಿಯರನ್ನೇ ಟಾರ್ಗೇಟ್‌ ಮಾಡುತ್ತಿದ್ದ ಶಿವರಾಜ್‌ ಅನ್ನೋ ಆರೋಪ ಕೇಳಿಬಂದಿದೆ. ಇನ್ನು ಸಂತ್ರಸ್ತ ಯುವತಿಯ ತಂದೆ, ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಪೊಲೀಸ್‌ ಸಿಬ್ಬಂದಿ ಶಿವರಾಜ್‌ ಎಂಬಾತ ದಾಖಲೆ, ಸಮನ್ಸ್‌ ನೀಡುವ ವಿಚಾರದಲ್ಲಿ ಮನೆಗೆ ಬರುತ್ತಿದ್ದ, ಪ್ರಕರಣ ಮುಗಿದ ನಂತರದಲ್ಲಿಯೂ ಒಂದಿಲ್ಲೊಂದು ನೆಪವೊಡ್ಡಿ ಮನೆಗೆ ಬರೋದು ಮಾಮೂಲಿ ಆಗಿತ್ತು. ಆದರೆ ನನಗೆ ಇದ್ಯಾವುದು ಗೊತ್ತೇ ಆಗಿರಲಿಲ್ಲ. ಆದರೆ ಮಗಳ ದೈಹಿಕ ಬದಲಾವಣೆಯಿಂದ ಅನುಮಾನಗೊಂಡು ವಿಚಾರಿಸಿದಾಗ ಗರ್ಭಣಿ ಅನ್ನೋದು ತಿಳಿದಿತ್ತು.

ಶಿವರಾಜ್‌ ಈ ಕೃತ್ಯವನ್ನು ಎಸಗಿದ್ದಾನೆ ಅಂತಾ ಆಕೆ ತಿಳಿಸಿದ್ದಾಳೆ. ಇದೇ ಕಾರಣಕ್ಕೆ ನಾನು ಆತನಲ್ಲಿ ಮಗಳನ್ನು ಮದುವೆ ಆಗುವಂತೆಯೂ ಕೇಳಿಕೊಂಡಿದ್ದೇನೆ. ಆದರೆ ಆತ ಅದಕ್ಕೆ ಒಪ್ಪಿಗೆಯನ್ನು ನೀಡದೇ ಅಬಾರ್ಷನ್‌ ಮಾಡಿಸುವಂತೆ ತಿಳಿಸಿದ್ದ. ಅದಕ್ಕೆ ಬೇಕಾಗುವ ಹಣವನ್ನು ತಾನೇ ನೀಡುತ್ತೇನೆ ಎಂದು ಹೇಳಿದ್ದಾನೆ. ಆದರೆ ನಾನು ಅದಕ್ಕೆ ಒಪ್ಪಿಗೆಯನ್ನು ಸೂಚಿಸಿರಲಿಲ್ಲ. ಘಟನೆಯಿಂದಾಗಿ ನಾನು ಸಾಕಷ್ಟು ಆಘಾತಕ್ಕೆ ಒಳಗಾಗಿದ್ದೇನೆ. ಕಳೆದ ಹತ್ತು ದಿನಗಳ ಹಿಂದೆ ಅಪ್ರಾಪ್ತ ಯುವತಿ ಹಾಗೂ ಆಕೆಯ ತಾಯಿ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ವಾಪಾಸ್‌ ಬಂದಿರಲಿಲ್ಲ.

ನಂತರದಲ್ಲಿ ಕರೆ ಮಾಡಿ ನಾವು ಒಂದು ಸ್ಥಳದಲ್ಲಿ ಇದ್ದೇವೆ ಅಂತಾ ಹೇಳಿದ್ದಾರೆ. ಮಗಳಿಗೆ ಅಬಾರ್ಷನ್‌ ಮಾಡಿಸಿದ್ದು, ಅದರ ವೆಚ್ಚ ಸುಮಾರು 35 ಸಾವಿರ ರೂಪಾಯಿ ಹಣವನ್ನು ಪೊಲೀಸ್‌ ಕಾನ್‌ ಸ್ಟೇಬಲ್‌ ಶಿವರಾಜ್‌ ನೀಡಿದ್ದಾನೆ. ತನ್ನ ಪತ್ನಿ ಹಾಗೂ ಮಗಳನ್ನು ಆತನೇ ಅಜ್ಞಾತ ಸ್ಥಳದಲ್ಲಿ ಇರಿಸಿದ್ದಾನೆ. ಹೀಗಾಗಿ ಅತ್ಯಾಚಾರವೆಸಗಿರುವ ಶಿವರಾಜ್‌ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು. ತನಗೆ ಹಾಗೂ ತನ್ನ ಮಗಳಿಗೆ ನ್ಯಾಯ ಒದಗಿಸಬೇಕೆಂದು ಯುವತಿಯ ತಂದೆ ಕಡಬ ಠಾಣೆಯ ದೂರು ನೀಡಿದ್ದಾರೆ.

ಇದನ್ನೂ ಓದಿ : ಮಂಗಳೂರಲ್ಲಿ ಮತ್ತೆ ನೈತಿಕ ಪೊಲೀಸ್‌ ಗಿರಿ : ಪೊಲೀಸರ ಎದುರಲ್ಲೇ ಮೆಡಿಕಲ್‌ ವಿದ್ಯಾರ್ಥಿಗಳ ಮೇಲೆ ಹಲ್ಲೆ

ಇದನ್ನೂ ಓದಿ : ಉಡುಪಿ : ವೈದ್ಯರ ನಿರ್ಲಕ್ಷ್ಯಕ್ಕೆ ಗರ್ಭಿಣಿ ಶಿಕ್ಷಕಿ ಉಷಾ ಸಾವು : ಆಸ್ಪತ್ರೆ ಮುಂಭಾಗ ಕುಟುಂಬಸ್ಥರ ಆಕ್ರೋಶ

( Kadaba Police Station lodged complaint against Police Constable Shiva raj in Mangaluru )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular