ಮದುವೆಗೂ ಮುನ್ನ ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಟೆಂಪಲ್ ರನ್

ಕಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ಮದುವೆಯ ಸಂಭ್ರಮದಲ್ಲಿದ್ದಾರೆ. ಸಂಭ್ರಮದ ನಡುವೆ ಟೆಂಪಲ್ ರನ್ ಆರಂಭಿಸಿರುವ ನಯನತಾರಾ ಭಾವಿ ಪತಿ ವಿಘ್ನೇಶ್ ಶಿವನ್ ಜೊತೆ ತಿರುಪತಿಗೆ ಭೇಟಿ ನೀಡಿದ್ದು, ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಯನತಾರಾ ಇತ್ತೀಚಿಗಷ್ಟೇ ಮಾಧ್ಯಮ ಸಂದರ್ಶನವೊಂದರಲ್ಲಿ ತಮ್ಮ ಎಂಗೇಜಮೆಂಟ್ ವಿಚಾರವನ್ನು ಬಹಿರಂಗ ಪಡಿಸಿದ್ದರು. ಮಾತ್ರವಲ್ಲ ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಶೀಘ್ರವೇ ಮದುವೆಯಾಗುವುದಾಗಿಯೂ ಹೇಳಿದ್ದರು.

ಆದರೆ ಇದುವರೆಗೂ ನಯನತಾರಾ ಮದುವೆ ಯಾವಾಗ ಎಲ್ಲಿ ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.  ಈ ಮಧ್ಯೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಪೂಜೆ ಸಲ್ಲಿಸಿದ್ದಾರೆ.

ನೀಲಿ ಚೂಡಿದಾರದಲ್ಲಿ ನಯನತಾರಾ ಮಿಂಚಿದ್ದರೇ, ವಿಘ್ನೇಶ್ ಶಿವನ್ ಬಿಳಿಯ ಕುರ್ತಾ ತೊಟ್ಟಿದ್ದಾರೆ. ಸದ್ಯದಲ್ಲೇ ನಯನತಾರಾ ಮದುವೆಯ ದಿನಾಂಕ ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ.

2015 ರಲ್ಲಿ ವಿಘ್ನೇಶ್ ನಿರ್ದೇಶಿಸಿದ್ದ ನಾನುಂ ರೌಡಿಧಾನ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ನಯನತಾರಾ ಮತ್ತು ವಿಘ್ನೇಶ್ ಶಿವನ್ ನಡುವೆ ಪ್ರೀತಿ ಬೆಳೆದಿತ್ತು. ಆದರೆ ಈ ಜೋಡಿ ಪ್ರೀತಿಯ ಸಂಗತಿಯನ್ನು ಹಂಚಿಕೊಂಡಿರಲಿಲ್ಲ.

ಇತ್ತೀಚಿಗೆ ಗುಟ್ಟಾಗಿ ನಡೆದ ಎಂಗೇಜಮೆಂಟ್ ನ್ನು ನಯನತಾರಾ ಹೇಳಿಕೊಂಡಿದ್ದರು. ಈ ತಿಂಗಳ ಆರಂಭದಲ್ಲಿ ನಡೆದ ವಿಘ್ನೇಶ್ ಹುಟ್ಟುಹಬ್ಬವನ್ನು ನಯನತಾರಾ ಗ್ರ್ಯಾಂಡ್ ಆಗಿ ಆಚರಿಸಿದ್ದರು.

(Actres Nayanatara and vigneshshivana visited tiruapthi temple)

Comments are closed.