Heart Attack : ಮಂಗಳೂರು : ಹೃದಯಾಘಾತದಿಂದ ನರ್ಸಿಂಗ್‌ ವಿದ್ಯಾರ್ಥಿನಿ ಸಾವು

ಮಂಗಳೂರು : ನರ್ಸಿಂಗ್‌ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ, ಹೃದಯಾವಿದ್ರಾವಕ ಘಟನೆ ನಡೆದಿದೆ. ಸದ್ಯ ಹದಿಹರೆಯರಲ್ಲೂ ಹೃದಯಾಘಾತ ಹೆಚ್ಚಾಗುತ್ತಿದ್ದು, ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಸುಮಾ (19) ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಮೃತ ಸುಮಾ ಮಂಗಳೂರಿನಲ್ಲಿ ಮೊದಲ ವರ್ಷದ ನರ್ಸಿಂಗ್‌ ವಿದ್ಯಾಭ್ಯಾಸ ಮಾಡುತ್ತಿದ್ದರು. ಮೃತ ಸುಮಾ ಆಗಾಗ್ಗ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಲೋ ಬಿಪಿಯಿಂದಾಗಿ ಹೃದಯಾಘಾತಗೊಂಡಿದ್ದು, ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

ಇದನ್ನೂ ಓದಿ : Karnataka Weather : ಆಗಸ್ಟ್ 19 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ : ಹವಾಮಾನ ವರದಿ

ಇದನ್ನೂ ಓದಿ : SEIKO KAI KARATE INTERNATIONAL 2023: ಕುಂದಾಪುರದ ಶ್ರೀಶ ಗುಡ್ರಿಗೆ ಚಿನ್ನದ ಪದಕ

ಆಗಾಗ್ಗ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ, ನೂರಾರು ಕನಸು ಕಟ್ಟಿಕೊಂಡು ನರ್ಸಿಂಗ್‌ ಮಾಡಲೆಂದು ಕಾಲೇಜಿಗೆ ಹೋಗಿದ್ದಾರೆ. ಆದರೆ ವಿಧಿಯಾಟ ಬೇರೆನೇ ಆಗಿದ್ದು, ಹೃದಯಾಘಾತದಿಂದ ಬಾರದ ಲೋಕಕ್ಕೆ ತೆರಳಿದ್ದಾರೆ. ಇತ್ತ ಮಗಳನ್ನು ಕಳೆದುಕೊಂಡ ತಂದೆ-ತಾಯಿ, ಕುಟುಂಬಸ್ಥರು ಹಾಗೂ ಸ್ನೇಹಿತರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

Mangalore: Nursing student dies of heart attack

Comments are closed.