ಮಂಗಳೂರು : ಟೈಲ್ಸ್ ಫ್ಯಾಕ್ಟರಿ ಕಾರ್ಮಿಕರ ಕುಟುಂಬಕ್ಕೆ ಸೇರಿದ 8 ವರ್ಷದ ಮಗುವಿನ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಉಳಾಯಿಬೆಟ್ಟು (Ulaibettu) ಸಮೀಪದ ಪರಾರಿಯ ರಾಜ್ ಟೈಲ್ಸ್ ಎಂಬ ಹೆಂಚಿನ ಕಾರ್ಖಾನೆಯಲ್ಲಿ ಲೈಂಗಿಕ ದೌರ್ಜನ್ಯವೆಸಗಿ ನಂತರ ಕತ್ತು ಹಿಸುಕಿ ಕೊಲೆ ಗೈದು ಮೋರಿಯಲ್ಲಿ ಎಸೆಯುವ ಮೂಲಕ ಪೈಶಾಚಿಕ ಕೃತ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ (4 Arrest ) ಪೊಲೀಸರು ಯಶಸ್ವಿಯಾಗಿದ್ದಾರೆ.
ಮಧ್ಯಪ್ರದೇಶದ ಮೂಲದ ಜಯ ಸಿಂಗ್ (21 ವರ್ಷ ), ಮುನೀಮ್ ಸಿಂಗ್(20 ವರ್ಷ ) , ಮನೀಶ್ ತಿರ್ಕಿ(33 ವರ್ಷ ) ಮತ್ತು ಝಾರ್ಖಂಡ್ ಮೂಲದ ಮುಖೇಶ್ ಸಿಂಗ್ (20 ವರ್ಷ ) ಎಂಬವರೇ ಬಂಧಿತ ಆರೋಪಿಗಳು. ಈ ನಾಲ್ವರು ಕೂಡ ರಾಜ್ ಟೈಲ್ಸ್ ಎಂಬ ಹೆಂಚಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯಪ್ರದೇಶ ಹಾಗೂ ಜಾರ್ಖಂಡ ಮೂಲದ ಕಾರ್ಮಿಕರು ಬಾಲಕಿಯನ್ನು ತಮ್ಮ ಕೋಣೆಗೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಾಲಕಿಗೆ ರಕ್ತಶ್ರಾವವಾಗುತ್ತಿದ್ದಂತೆಯೇ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಯಾರಿಗೂ ತಿಳಿಯದಂತೆ ಬಾಲಕಿಯ ಶವವನ್ನು ಮೋರಿಯಲ್ಲಿ ಎಸೆದು ಪರಾರಿಯಾಗಿದ್ದರು.

ನಾಲ್ವರು ಆರೋಪಿಗಳು ಘಟನೆ ನಡೆಯುತ್ತಲೇ ಪುತ್ತೂರಿಗೆ ತೆರಳಿದ್ದರು. ಈ ಪೈಕಿ ಇಬ್ಬರು ಆರೋಪಿಗಳು ಪರಾರಿಗೆ ವಾಪಾಸಾಗಿದ್ದರು. ಅಲ್ಲದೇ ತಾವೂ ಕೂಡ ಬಾಲಕಿಯನ್ನು ಹುಡುಕುವ ಕಾರ್ಯವನ್ನು ಮಾಡಿದ್ದರು. ನಂತರ ಬಾಲಕಿಯ ಶವ ಹೆಂಚಿನ ಕಾರ್ಖಾನೆಯ ಮೋರಿಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಖಾನೆಯ ಎಲ್ಲಾ ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರೋದು ಬೆಳಕಿಗೆ ಬಂದಿತ್ತು.

ಈ ಹಿನ್ನೆಲೆಯಲ್ಲಿ ತನಿಖೆಯನ್ನು ಚುರುಕುಗೊಳಿಸುತ್ತಿದ್ದಂತೆಯೇ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರು ಪೊಲೀಸರಿಗೆ ತಿಳಿಸಿದ್ದಾರೆ. ಬಾಲಕಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಕರಾವಳಿ ಭಾಗದಲ್ಲಿ ಸಂಚಲನ ಉಂಟು ಮಾಡಿತ್ತು.
ಇದನ್ನೂ ಓದಿ : ಅನ್ಯ ಜಾತಿಯ ಯುವಕನನ್ನು ವಿವಾಹವಾದ ಮಗಳು : ಮಗಳನ್ನೇ ಅತ್ಯಾಚಾರವೆಸಗಿ, ಕೊಲೆಗೈದ ಪಾಪಿ ತಂದೆ
ಇದನ್ನೂ ಓದಿ : ಸಿನಿಮಾದಲ್ಲಿ ನಟಿಸುವ ಆಮಿಷ : ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನ ಬಂಧನ
( Mangalore Ulaibettu Rape case of 8 year old girl 4 arrest )