Hamsalekha : ಮೌನ ಮುರಿದ ಹಂಸಲೇಖ : ವದಂತಿಗಳಿಗೆ ಪತ್ರ ಮುಖೇನ ಕೊಟ್ಟರು ಉತ್ತರ

ತಮ್ಮ ಮಾತಿನ ಮೂಲಕ ಕರ್ನಾಟಕದ ಪೇಜಾವರಶ್ರೀಗಳ ಅಪಾರ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದ ನಾದಬ್ರಹ್ಮ ಹಂಸಲೇಖ (Hamsalekha) ಆರೋಗ್ಯದ ಬಗ್ಗೆ ವದಂತಿಗಳು ಹರಿದಾಡಲು ಆರಂಭಿಸಿದ್ದು, ಇದಕ್ಕೆ ಸ್ವತಃ ಹಂಸಲೇಖ ಬ್ರೇಕ್ ಹಾಕಿದ್ದಾರೆ. ವದಂತಿಗಳಿಗೆ ಹಂಸಲೇಖ ಪತ್ರ ಮುಖೇನ ಉತ್ತರ ನೀಡಿದ್ದಾರೆ. ಇತ್ತೀಚಿಗೆ ಸನ್ಮಾನ ಸಮಾರಂಭವೊಂದರಲ್ಲಿ ನಾದಬ್ರಹ್ಮ ಹಂಸಲೇಖ ಆಡಿದ ಮಾತು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ ಮಾತಿನ ಭರದಲ್ಲಿ ಹಂಸಲೇಖ ಪೇಜಾವರ ಶ್ರೀಗಳನ್ನು ಅವಮಾನಿಸಿದ್ದಾರೆ ಎಂಬ ಆರೋಪ,ಆಕ್ರೋಶ ವ್ಯಕ್ತವಾಗಿತ್ತು.

ಆದರೆ ತಕ್ಷಣ ಎಚ್ಚೆತ್ತ ಹಂಸಲೇಖ ಸೋಷಿಯಲ್ ಮೀಡಿಯಾ ದಲ್ಲಿ ಕ್ಷಮೆಯಾಚಿಸಿದ್ದರು. ಆದರೆ ಈ ಪ್ರಕರಣವನ್ನು ಇಷ್ಟಕ್ಕೆ ಬಿಡಲು ಪೇಜಾವರ ಅಭಿಮಾನಿಗಳು ಸಿದ್ಧವಿರಲಿಲ್ಲ. ಹೀಗಾಗಿ ಬಸವನಗುಡಿ,ಹನುಮಂತನಗರ ಹಾಗೂ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಂಸಲೇಖ ವಿರುದ್ಧ ದೂರು ದಾಖಲಾಗಿತ್ತು. ಅಲ್ಲದೇ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಹಂಸಲೇಖಗೆ ನೊಟೀಸ್ ಕೂಡ ಜಾರಿ ಮಾಡಿದ್ದರು. ಈ ವೇಳೆ ಅನಾರೋಗ್ಯದ ಕಾರಣ ನೀಡಿದ್ದ ಹಂಸಲೇಖ ವಿಚಾರಣೆಗೆ ನವೆಂಬರ್ 25 ರಂದು ಹಾಜರಾಗುವುದಾಗಿ ಕಾಲಾವಕಾಶ ಕೋರಿದ್ದರು.

ಈ ಹಿನ್ನೆಲೆಯಲ್ಲಿ ಹಂಸಲೇಖ ಆರೋಗ್ಯದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ವದಂತಿಗಳು ಹರಡಲಾರಂಭಿಸಿದ್ದವು. ಈ ಬೆಳವಣಿಗೆಯಿಂದ ಬೇಸತ್ತ ಹಂಸಲೇಖ ಸ್ಪಷ್ಟನೆ ಯೊಂದನ್ನು ರಿಲೀಸ್ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಅಭಿಮಾನಿಗಳಿಗೆ ಪತ್ರ ಬರೆದಿರುವ ಹಂಸಲೇಖ,ಪೂಜ್ಯ ಕರ್ನಾಟಕವೇ ನಮಸ್ಕಾರ. ನಾನು ಆರೋಗ್ಯವಾಗಿದ್ದೀನಿ.ನನ್ನ ಆರೋಗ್ಯ ತಪ್ಪಿದೆ ಎಂದು ಈಡಿ ಕರ್ನಾಟಕದಾದ್ಯಂತ ಸುದ್ದಿ ಹರಡಿದೆ. ಕರ್ನಾಟಕದ ಎಲ್ಲೆಡೆಯಿಂದ ದೂರವಾಣಿ ಕರೆ ಬಂದಿದೆ.ಇದರಿಂದ ನಿಮ್ಮ ಪ್ರೀತಿ ಎಷ್ಟು ವಿಶಾಲವಾಗಿದೆ ಎಂದು ನನಗೆ ಅರಿವಾಗಿದೆ. ಈ ಪ್ರೀತಿ ಪಡೆಯಲು ನಾನು ಸಾಕಷ್ಟು ಕಾಲ ಸವೆಸಿದ್ದೀನಿ,ಸವೆದಿದ್ದಿನಿ. ಈಗ ಅದರ ಸುಖ ಅನುಭವಿಸುತ್ತಿದ್ದೀನಿ.

ನಾನು ಕೇಳದೇ ಸರ್ಕಾರ ನನಗೆ ಭದ್ರತೆ ಕೊಟ್ಟಿದೆ. ನಾನು ಕೇಳದೇ ಕರ್ನಾಟಕದ ಜನ ನನ್ನ ಪರ ಮಾತನಾಡುತ್ತಿದ್ದಾರೆ. ನನ್ನ ಇಂಡಸ್ಟ್ರಿಯವರು ನನಗೆ ಬೆಂಬಲ ಕೊಟ್ಟಿದ್ದಾರೆ.ಇಡಿ ಕರ್ನಾಟಕವೇ ನನ್ನನ್ನು ಪ್ರೀತಿ ಅಭಿಮಾನದಲ್ಲಿ ಮುಳುಗಿಸಿದೆ. ಅಲ್ಲದೇ ಅಭಿಮಾನಿಗಳಿಗೆ ಮನವಿ‌ಮಾಡಿರುವ ಹಂಸಲೇಖ, ಅಭಿಮಾನ ಆವೇಶವಾಗಬಾರದು. ಆವೇಶ ಅವಘಡಗಳಿಗೆ ಕಾರಣವಾಗಬಾರದು.ಅಭಿಮಾನ ಹಾಡಿನಂತೆ ಇರಬೇಕು. ಹಾಡು ಕೇಳಿಸುತ್ತದೇ, ಮುಟ್ಟಿಸುತ್ತದೆ ನಿಮ್ಮ ಪ್ರೀತಿಗೆ ನನಗೆ ಮುಟ್ಟಿದೆ. ಹೃದಯ ತುಂಬಿದ ಧನ್ಯವಾದ ಎಂದು ಪತ್ರದಲ್ಲಿ ಭಾವುಕ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ : ಪೇಜಾವರ ಶ್ರೀಗಳನ್ನು ಹಿಯಾಳಿಸಿದ ಹಂಸಲೇಖ : ಎರಡೆರಡು ಬಾರಿ ಕ್ಷಮೆಕೋರಿದ ನಾದಬ್ರಹ್ಮ

ಇದನ್ನೂ ಓದಿ : ಸಂಕಷ್ಟಕ್ಕೆ ಸಿಲುಕಿದ ಹಂಸಲೇಖ : ನಾದಬ್ರಹ್ಮನ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು

( Hamsalekha, music director who answered rumors of illness)

Comments are closed.