ಭಾನುವಾರ, ಜೂನ್ 15, 2025
HomeCoastal Newsಮಣಿಪಾಲದಲ್ಲಿ 4.63 ಲಕ್ಷ ಮೌಲ್ಯದ ಡ್ರಗ್ಸ್ ವಶ : ಪೆಡ್ಲರ್ ಬ್ರಹ್ಮಾವರದ ಫಝಲ್ ಅರೆಸ್ಟ್

ಮಣಿಪಾಲದಲ್ಲಿ 4.63 ಲಕ್ಷ ಮೌಲ್ಯದ ಡ್ರಗ್ಸ್ ವಶ : ಪೆಡ್ಲರ್ ಬ್ರಹ್ಮಾವರದ ಫಝಲ್ ಅರೆಸ್ಟ್

- Advertisement -

ಮಣಿಪಾಲ : ಕರಾವಳಿಯಲ್ಲಿ ಡ್ರಗ್ಸ್ ಜಾಲ ಬಯಲಾಗುತ್ತಲೇ ಇದೆ. ಇದೀಗ ಮಣಿಪಾಲದಲ್ಲಿ ಪೊಲೀಸರು ಖಚಿತ ಮಾಹಿತಿಯ ಮೇಲೆ ದಾಳಿಯನ್ನು ನಡೆಸಿ 4.63 ಲಕ್ಷ ಮೌಲ್ಯದ ಬ್ರೌನ್ ಶುಗರ್ ಸೇರಿದಂತೆ ಮಾಧಕ ವಸ್ತುವನ್ನು ವಶಕ್ಕೆ ಪಡಿಸಿಕೊಂಡಿದ್ದು, ಪೆಡ್ಲರ್ ವೋರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರ ಮೂಲದ ಫಝಲ್ ಎಂದು ಗುರುತಿಸಲಾಗಿದೆ. ಬಂಧಿತನಿಂದ 2 ಮೊಬೈಲ್, ಎಂಡಿಎಂಎ ಮಾತ್ರೆಗಳು, ಬ್ರೌನ್ ಶುಗರ್ ಸೇರಿದಂತೆ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಫಝಲ್ ವಿಚಾರಣೆಯ ವೇಳೆಯಲ್ಲಿ ಮಹತ್ವದ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ. ಫಝಲ್ ತನ್ನ ಸ್ನೇಹಿತರಾದ ಉಡುಪಿಯ ಫರ್ಹಾನ್ ಮತ್ತು ಸಫಾ ಸೇರಿಕೊಂಡು ಡ್ರಗ್ಸ್ ಮಾತ್ರೆ ಹಾಗೂ ಬ್ರೌನ್ ಶುಗರ್ ಗಳನ್ನು ಆನ್ ಲೈನ್ ಮೂಲಕ ಆರ್ಡರ್ ಮಾಡಿ ತರಿಸಿಕೊಂಡಿದ್ದರು. ಡ್ರಗ್ಸ್ ಅನ್ನು ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಸ್ಕೆಚ್ ಹಾಕಿರುವುದಾಗಿ ಫಝಲ್ ಬಾಯ್ಬಿಟ್ಟಿದ್ದಾನೆ.

ಫಝಲ್ ಬಂಧನದ ಬೆನ್ನಲ್ಲೇ ಮಣಿಪಾಲ ಪೊಲೀಸರು ವಿಚಾರಣೆಯನ್ನು ಚುರುಕುಗೊಳಿಸಿದ್ದು, ಫಝಲ್ ಸ್ನೇಹಿತರಿಗಾಗಿ ಬಲೆ ಬೀಸಿದ್ದಾರೆ. ಅಲ್ಲದೇ ಡ್ರಗ್ಸ್ ಜಾಲವನ್ನು ಬೇಧಿಸುವ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular