ಐಸಿಯುನಲ್ಲಿದ್ದ ಬಿಎಸ್ಎನ್ಎಲ್ ಗೆ ಆಕ್ಸಿಜನ್ ನೀಡಿದ ಕೇಂದ್ರ ಸರ್ಕಾರ…!

0

ನವೆದಹಲಿ: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ತನ್ನ ಕಳಪೆ ಗುಣಮಟ್ಟದಿಂದ ಬಹುತೇಕ ನೇಪಥ್ಯಕ್ಕೆ ಸರಿದಿತ್ತು. ಇನ್ನೇನು ನಷ್ಟ ತಾಳಲಾರದೇ ಬಾಗಿಲೇ ಮುಚ್ಚಬಹುದೇನೋ ಎನ್ನುವ ಸ್ಥಿತಿಗೆ ತಲುಪಿರುವಾಗಲೇ ಕೇಂದ್ರ ಸರ್ಕಾರ ಬಿಎಸ್ಎನ್ಎಲ್ ಪುನಶ್ಚೇತನಕ್ಕೆ ಮನಸ್ಸು ಮಾಡಿದ್ದು, ಇನ್ಮುಂದೆ ಸರ್ಕಾರಿ ಕಚೇರಿಯಲ್ಲಿ ಬಿಎಸ್ಎನ್ಎಲ್ ಬಳಕೆ ಕಡ್ಡಾಯಗೊಳಿಸಿದೆ.

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ಹಾಗೂ ಆಧುನೀಕರಣಗೊಳ್ಳದ ತಂತ್ರಜ್ಞಾನ ಸೇರಿದಂತೆ ಹಲವು ಕಾರಣಗಳಿಂದ ಜನರಿಂದ ಹಿಡಿಶಾಪ ಹಾಕಿಸಿಕೊಳ್ಳುತ್ತಿತ್ತು. ಅಷ್ಟೇ ಅಲ್ಲ ಗ್ರಾಮೀಣ ಭಾಗದಲ್ಲೂ ಜನರು ಬಿಎಸ್ಎನ್ಎಲ್ ಬಿಟ್ಟು ಇತರ ಟೆಲಿಕಾಂ ನೆಟ್ವರ್ಕ್ ಗಳ ಮೊರೆ ಹೋಗಲಾರಂಭಿಸಿದ್ದರು. ಹೀಗಾಗಿ ಸಹಜವಾಗಿ ನಷ್ಟದ ಸುಳಿಯಲ್ಲಿದ್ದ ಬಿಎಸ್ಎನ್ಎಲ್ ಗೆ ಈ ಕೇಂದ್ರ ಸರ್ಕಾರ ಕ್ಸಿಜನ್ ನೀಡಿದೆ.

ಸರ್ಕಾರಿ ಕಚೇರಿಗಳಲ್ಲಿ ಪೋನ್ ಹಾಗೂ ಇಂಟರ್ ನೆಟ್ ಸೌಲಭ್ಯಕ್ಕೆ ಬಿಎಸ್ಎನ್ಎಲ್ ಬಳಕೆ ಕಡ್ಡಾಯ ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಈ ಬಗ್ಗೆ ದೂರ ಸಂಪರ್ಕ ಸಚಿವಾಲಯ ಟಿಪ್ಪಣಿಯೊಂದನ್ನು ಎಲ್ಲ ಇಲಾಖೆಗಳಿಗೆ ಕಳುಹಿಸಿದೆ. ಈ ಆದೇಶದಿಂದ ಮತ್ತೆ ಬಿಎಸ್ಎನ್ಎಲ್ ಹಾಗೂ ಎಂಟಿಎನ್ಎಲ್  ಬಳಕೆದಾರರನ್ನು ಹೆಚ್ಚಿಸಿಕೊಳ್ಳಲಿದ್ದು, ಆದಾಯದಲ್ಲಿ ಏರಿಕೆಯಾಗಲಿದೆ.

2019-20 ನೇ ಇಸ್ವಿಯಲ್ಲಿ ಬಿಎಸ್ಎನ್ಎಲ್ ಒಟ್ಟು 15500 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದು, ಎಮ್ಟಿಎನ್ಎಲ್ 3649 ಕೋಟಿ ರೂಪಾಯಿ ದಂಡ  ಅನುಭವಿಸಿತ್ತು. ಒಟ್ಟು ಬಳಕೆದಾರರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದ್ದು, 2008 ರಲ್ಲಿ 2.9 ಕೋಟಿ ಬಳಕೆದಾರರನ್ನು ಹೊಂದಿದ್ದ ಬಿಎಸ್ಎನ್ಎಲ್ 2020 ರಲ್ಲಿ ಕೇವಲ 80 ಲಕ್ಷ ಬಳಕೆದಾರರನ್ನು ಉಳಿಸಿಕೊಂಡಿದೆ.

ಇದೀಗ ಬಿಎಸ್ಎನ್ಎಲ್ ಪುನಶ್ಚೇತನಕ್ಕೆ ಒಳ್ಳೆಯ ಅವಕಾಶ ಸಿಕ್ಕಂತಾಗಿದ್ದು, ಈ ಆದೇಶ ಕಡ್ಡಾಯವಾಗಿ ಜಾರಿಗೆ ಬಂದ್ರೆ ಸರ್ಕಾರಿ ಅಧಿಕಾರಿಗಳು ಹಾಗೂ ಸರ್ಕಾರಿ ಕಚೇರಿಗಳು ಖಾಸಗಿ ಸ್ವಾಮ್ಯದ ಟೆಲಿಕಾಂ ಕಂಪನಿಗಳನ್ನು ಉದ್ದಾರ ಮಾಡುವುದನ್ನು ತಪ್ಪಿಸಬಹುದಾಗಿದೆ.  

Leave A Reply

Your email address will not be published.