Maravanthe Beach : ಕಡಲ್ಕೊರೆತದ ಭೀತಿಯಲ್ಲಿ ಮರವಂತೆ ಬೀಚ್‌ : ಆತಂಕದಲ್ಲಿ ಪ್ರವಾಸಿಗರು

ಕುಂದಾಪುರ : Maravanthe Beach : ಕರಾವಳಿಯ ಪ್ರಮುಖ ಪ್ರವಾಸಿ ತಾಣ ಎನಿಸಿಕೊಂಡಿರುವ ಮರವಂತೆಯಲ್ಲೀಗ ಕಡಲ್ಕೊರೆತದ ಆತಂಕ ಶುರುವಾಗಿದೆ. ಈಗಾಗಲೇ ಮರವಂತೆ ಬೀಚ್‌ ಸಮುದ್ರ ಪಾಲಾಗಿದ್ದು, ಸಮುದ್ರದ ಅಲೆಗಳು ಇದೀಗ ತಡೆಗೋಡೆಗಳನ್ನು ದಾಟಿ ಹೆದ್ದಾರಿಗೆ ಬಂದು ಅಪ್ಪಳಿಸುತ್ತಿವೆ. ಅದ್ರಲ್ಲೂ ಈ ಬಾರಿ ಮಳೆಗಾಲದ ಆರಂಭದಲ್ಲೇ ದೈತ್ಯ ಅಲೆಗಳು ಆರ್ಭಟಿಸುತ್ತಿರುವುದು ಪ್ರವಾಸಿಗರ ಆತಂಕಕ್ಕೆ ಕಾರಣವಾಗಿದೆ.

ಒಂದು ಕಾಲದಲ್ಲಿ ಮರವಂತೆ ಕಡಲ ತೀರ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿತ್ತು. ನಿತ್ಯವೂ ಸಾವಿರಾರು ಪ್ರವಾಸಿಗರು ಇಲ್ಲಿ ಬಂದು ಬೀಚ್‌ನಲ್ಲಿ ಕುಳಿತು ಸಮುದ್ರದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾ, ಬೀಚ್‌ನಲ್ಲಿ ಮಿಂದೇಳುತ್ತಿದ್ದರು. ಆದರೆ ದಿನೇ ದಿನೇ ಹೆಚ್ಚುತ್ತಿರುವ ಕಡಲ್ಕೊರೆತದಿಂದಾಗಿ ಸುಮಾರು 300 ರಿಂದ 400 ಮೀಟರ್‌ನಷ್ಟು ಸಮುದ್ರ ಈಗಾಗಲೇ ಮುಂದಕ್ಕೆ ಬಂದದೆ. ಈ ಹಿನ್ನೆಲೆಯಲ್ಲಿ ಮರವಂತೆಯಲ್ಲಿ ಬ್ರೇಕ್‌ವಾಟರ್‌ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಸಮುದ್ರಕ್ಕೆ ಅಳವಡಿಸಿದ ಕಲ್ಲುಗಳನ್ನು ಸಮುದ್ರದ ದೈತ್ಯ ಅಲೆಗಳು ನುಂಗಿ ಹಾಕುತ್ತಿವೆ. ಕಳೆದ ಬಾರಿಯ ಮಳೆಗಾಲದಲ್ಲಿ ಕಡಲ್ಕೊರೆತ ವಿಪರೀತವಾಗಿತ್ತು. ಬ್ರೇಕ್‌ ವಾಟರ್‌ ತಡೆಗೋಡೆಗೆ ಹಾಕಿದ್ದ ಕಲ್ಲುಗಳು ಸಮುದ್ರ ಪಾಲಾಗಿದ್ದವು. ಇದೀಗ ಮತ್ತೆ ಕಡಲ್ಕೊರೆತದ ಭೀತಿ ಎದುರಾಗಿದೆ.

ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಪ್ರವಾಸಿಗರು :

ಮರವಂತೆ ಕಡಲತೀರ ಪ್ರವಾಸಿಗರಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಮಳೆಗಾಲದಲ್ಲಿಯೂ ಮರವಂತೆಗೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಬೀಚ್‌ನ ತಡೆಗೋಡೆ ಕಲ್ಲುಗಳ ಮೇಲೆ ನಿಂತು ವಿಹರಿಸುತ್ತಿದ್ದಾರೆ. ಕೆಲವರು ಬೀಚ್‌ನಲ್ಲಿ ಇಳಿದು ಸ್ನಾನ ಮಾಡುತ್ತಿರುವುದರಿಂದ ಅನಾಹುತಗಳು ಸಂಭವಿಸುವ ಸಾಧ್ಯತೆಯಿದೆ. ಇನ್ನು ಬೀಚ್‌ನಲ್ಲಿ ಅಪಾಯಕಾರಿ ಅನ್ನೋ ಮಾಹಿತಿ ನೀಡುವ ಸಲುವಾಗಿ ನಾಮಫಲಕಗಳನ್ನು ಅಳವಡಿಸಲಾಗಿದೆ. ಆದ್ರೂ ಕೂಡ ಪ್ರವಾಸಿಗರು ಸಿಬ್ಬಂದಿಗಳ ಮಾತನ್ನೂ ನಿರ್ಲಕ್ಷಿಸಿ ಅಪಾಯವನ್ನು ತಂದುಕೊಳ್ಳುತ್ತಿದ್ದಾರೆ.

ಪ್ರವಾಸಿ ತಾಣದ ಉಳಿವಿಗೆ ಮುಂದಾಗಬೇಕಿದೆ ಜಿಲ್ಲಾಡಳಿತ :

ಒಂದೆಡೆ ವಿಶಾಲವಾದ ಸಮುದ್ರ ತೀರ. ಇನ್ನೊಂದೆಡೆಯಲ್ಲಿ ಸೌಪರ್ಣಿಕಾ ನದಿ. ಇದೀಗ ಸಮುದ್ರದ ದೈತ್ಯ ಅಲೆಗಳು ಹೆದ್ದಾರಿಗೆ ಅಪ್ಪಳಿಸುವುದರಿಂದ ಕೇರಳ – ಕರ್ನಾಟಕ- ಗೋವಾ ರಾಷ್ಟ್ರೀಯ ಹೆದ್ದಾರಿ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ. ಒಂದೊಮ್ಮೆ ಹೆದ್ದಾರಿ ನಾಶವಾದ್ರೆ ಜಿಲ್ಲೆಯ ಪ್ರವಾಸಿತಾಣವೊಂದು ಮಾಯವಾಗಲಿದೆ. ಈ ಕುರಿತು ಪ್ರವಾಸಿಗರು ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : Tomato price hike‌ : ಟೊಮೆಟೋ ಬೆಲೆ ಕೆಜಿಗೆ 100ರೂ. ಸಾಧ್ಯತೆ : ಗ್ರಾಹಕರಿಗೆ ಕಾದಿದೆ ಮತ್ತೊಂದು ಶಾಕ್

ಇದನ್ನೂ ಓದಿ : Gruha Lakshmi Scheme : ನಾಳೆಯಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

Comments are closed.