Mobile Phone blocking system: ಕಾಣೆಯಾದ ಮೊಬೈಲ್‌ ಫೋನ್‌ ಗಳನ್ನು ಬ್ಲಾಕ್‌ ಮಾಡುವ ಹೊಸ ವಿಧಾನ: ಪೊಲೀಸ್‌ ಅಧೀಕ್ಷಕರಿಂದ ಆದೇಶ

ದಕ್ಷಿಣ ಕನ್ನಡ: (Mobile Phone blocking system) ಇತ್ತೀಚಿನ ದಿನಗಳಲ್ಲಿ ಕಳವಾದ/ ಕಾಣೆಯಾದ/ ಸುಲಿಗೆಯಾದ ಮೊಬೈಲ್‌ ಫೋನ್‌ ಗಳು ಸೈಬರ್‌ ಅಪರಾಧ ನಾರ್ಕೋಟಿಕ್ಸ್‌ ಅಪರಾಧ ಸೇರಿದಂತೆ ಇತರ ಗಂಭೀರ ಅಪರಾದಗಳಲ್ಲಿ ಬಳಕೆಯಾಗುತ್ತಿರುವುದು ಗಣನೀಯವಾಗಿ ಕಂಡುಬಂದಿರುತ್ತದೆ. ಇಂತಹ ಮೊಬೈಲ್‌ ಫೋನ್‌ ಗಳ ದುರ್ಬಳಕೆಯನ್ನು ತಡೆಗಟ್ಟಲು ಕೇಂದ್ರ ಟೆಲಿಕಮ್ಯೂನಿಕೇಷನ್‌ ಇಲಾಖೆಯಿಂದ ಕಳವಾದ/ ಕಾಣೆಯಾದ/ಸುಲಿಗೆಯಾದ ಮೊಬೈಲ್‌ ಫೋನ್ಗಳನ್ನು ಬ್ಲಾಕ್‌ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಪೊಲೀಸ್‌ ಇಲಾಖೆಯಿಂದ ಕೂಡಾ ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ.

ಈ ಕೆಳಕಂಡ ವಿಧಾನಗಳನ್ನು ಅನುಸರಿಸುವುದರ ಮೂಲಕ ಕಳವಾದ/ಕಾಣೆಯಾದ/ ಸುಲಿಗೆಯಾದ ಮೊಬೈಲ್‌ ಫೋನ್‌ ಗಳನ್ನು ಬ್ಲಾಕ್‌ ಮಾಡಬಹುದಾಗಿದೆ.

Mobile Phone blocking system: New method to block missing mobile phones: Order from Superintendent of Police
  1. ನಿಮ್ಮ ಮೊಬೈಲ್‌ ಫೋನ್‌ ಕಳವು/ ಕಾಣೆಯಾದರೆ/ ಸುಲಿಗೆಯಾದರೆ ತಾವು ತಕ್ಷಣವೇ KSP E-Lost (ಕೆಎಸ್‌ಪಿ ಇ-ಲೋಸ್ಟ್‌) ಅಪ್ಲಿಕೇಶನ್‌ ನಲ್ಲಿ ದೂರನ್ನು ಸಲ್ಲಿಸಿ Digital E Acknowledgement (ಡಿಜಿಟಲ್‌ ಇ ಅಕ್ನೋಲೆಡ್ಜ್‌ ಮೆಂಟ್‌) ಪಡೆದುಕೊಳ್ಳಬೇಕು ಅಥವಾ ಹತ್ತಿರದ ಪೊಲೀಸ್‌ ಠಾಣೆಗೆ ತೆರಳಿ ದೂರನ್ನು ಸಲ್ಲಿಸಿ ಸ್ವೀ ಕೃತಿಯನ್ನು ಪಡೆದುಕೊಳ್ಳಬೇಕು. ಸ್ವೀಕೃತಿಯ ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಂಡಿರಬೇಕು.
  2. ನೀವು ಕಳೆದುಕೊಂಡಿರುವ ಸಿಮ್‌ ಕಾರ್ಡ್‌ ಅನ್ನು ಸಂಬಂಧಪಟ್ಟ ಸರ್ವಿಸ್‌ ಪ್ರೊವೈಡರ್‌ ನಿಂದ ಮತ್ತೆ ಪಡೆದುಕೊಂಡು ಒಟಿಪಿ ಪಡೆಯಲು ಸದರಿ ಸಿಮ್‌ ಕಾರ್ಡನ್ನು ಚಾಲನಯಲ್ಲಿ ಇಟ್ಟುಕೊಳ್ಳುವುದು, CEIR PORTAL (ಸಿಇಐಆರ್‌ ಪೋರ್ಟಲ್‌) ನಲ್ಲಿ ಒಟಿಪಿ ಪಡೆಯಲು ಇದು ಅನುಕೂಲವಾಗುತ್ತದೆ.
  3. www.ceir.govt.in ವೆಬ್‌ ಸೈಟ್‌ ಗೆ ಹೋಗಿ ತಮ್ಮ ಕಳವಾದ/ ಕಾಣೆಯಾದ/ ಸುಲಿಗೆಯಾದ ಮೊಬೈಲ್‌ ಫೋನ್‌ ಗಳ ಮಾಹಿತಿಯನ್ನು ನಮೂದಿಸಬೇಕು. ಸದರಿ ಮಾಹಿತಿ ನಮೂದಿಸಿದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ತಮ್ಮ ಮೊಬೈಲ್‌ ಬ್ಲಾಕ್‌ ಆಗುತ್ತದೆ. ನಂತರ ಯಾರೂ ಕೂಡಾ ಆ ಮೊಬೈಲ್‌ ಅನ್ನು ದುರ್ಬಳಕೆ ಮಾಡಲು ಸಾಧ್ಯವಿರುವುದಿಲ್ಲ.
  4. ಕಳುವಾದ/ಕಾಣೆಯಾದ/ ಸುಲಿಗೆಯಾದ/ ಮೊಬೈಲ್‌ ಫೋನೆ ಪತ್ತೆಯಾದರೆ ಈಗಾಗಲೇ ತಿಳಿಸಿರುವ CEIR PORTAL (ಸಿಇಐಆರ್‌ ಪೋರ್ಟಲ್‌) ನಲ್ಲಿ ಲಾಗಿನ್‌ ಆಗಿ ಅನ್‌ ಬ್ಲಾಕ್‌ ಮಾಡಿ ಉಪಯೋಗಿಸಬಹುದು.
  5. ಹಾಗೆಯೇ ಸಾರ್ಜನಿಕರು ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿದರೆ CEIR PORTAL (ಸಿಇಐಆರ್‌ ಪೋರ್ಟಲ್‌) ಮೂಲಕ ಕಳುವಾದ/ ಕಾಣೆಯಾದ/ ಸುಲಿಗೆಯಾದ ಮೊಬೈಲ್‌ ಫೋನ್‌ ಅನ್ನು ಬ್ಲಾಕ್ ಮಾಡಲಾಗುವುದು ಹಾಗೂ ಸದರಿ ಮೊಬೈಲ್‌ ಫೋನ್‌ ಪತ್ತೆಯಾದ್ಲಲಿ ಅನ್‌ ಬ್ಲಾಕ್‌ ಮಾಡಲಾಗುತ್ತದೆ.

ಇದನ್ನೂ ಓದಿ : WhatsApp Latest Feature : ಇನ್ಮುಂದೆ ವಾಟ್ಸಪ್‌ನಲ್ಲಿ ಒರಿಜನಲ್‌ ಕ್ವಾಲಿಟಿಯಲ್ಲೇ ಫೋಟೋ ಶೇರ್‌ ಮಾಡಬಹುದು; ಹೇಗೆ ಗೊತ್ತಾ…

Mobile Phone blocking system: New method to block missing mobile phones: Order from Superintendent of Police

Comments are closed.