ದೇಗುಲದ ಪ್ರಸಾದ ಕವರ್‌ ನಲ್ಲಿ ಪತ್ತೆಯಾಯ್ತು ಕಂತೆ ಕಂತೆ ಹಣ

ಮಂಗಳೂರು : (Money in prasad cover) ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲೆಡೆ ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗಿವೆ. ದಾಖಲೆಗಳಿಲ್ಲದೇ ಸಾಗಿಸುತ್ತಿರುವ ಹಣ, ಸಾಮಾಗ್ರಿಗಳನ್ನು ಪೊಲೀಸರು ಅಲ್ಲಲ್ಲಿ ವಶಪಡಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಹೆಜಮಾಡಿ ಚೆಕ್‌ ಪೋಸ್ಟ್‌ ನಲ್ಲಿ ಕಾರೊಂದರಲ್ಲಿ ದೇಗುಲದ ಪ್ರಸಾದದ ಕವರ್‌ ಪತ್ತೆಯಾಗಿದ್ದು, ಅದರಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ, ಕೆಲವೊಂದು ಕ್ಷೇತ್ರಗಳಲ್ಲಿ ಕುಕ್ಕರ್‌, ಮಿಕ್ಸರ್‌, ಸೀರೆ ಹೀಗೆ ಮುಂತಾದ ಗೃಹೋಪಯೋಗಿ ವಸ್ತುಗಳನ್ನು, ಹಣಗಳನ್ನು ನೀಡುವುದರ ಮೂಲಕ ಆಮೀಷವೊಡ್ಡಿ ಚುನಾವಣೆಯಲ್ಲಿ ಗೆಲ್ಲುವ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಚುನಾವಣಾಧಿಕಾರಿಗಳು ಪೊಲೀಸರು ಸಹಕಾರದೊಂದಿಗೆ ಕಟ್ಟುನಿಟ್ಟಿನ ತಪಾಸಣಾ ಕಾರ್ಯ ಕೈಗೊಂಡಿದ್ದು, ದಾಖಲೆ ಇಲ್ಲದೇ ಹಣ, ಗೃಹೋಪಯೋಗಿ ವಸ್ತುಗಳನ್ನು ಸಾಗಿಸುತ್ತಿರುವವರನ್ನು ವಶಪಡಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.

ಇದೀಗ ಉಡುಪಿಯಲ್ಲಿ ಅಂತಹದೇ ಪ್ರಕರಣ ಬೆಳಕಿಗೆ ಬಂದಿದ್ದು, ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಕಾರನ್ನು ಹೆಜಮಾಡಿ ಪೊಲೀಸ್‌ ಚೆಕ್‌ ಪೋಸ್ಟ್‌ ನಲ್ಲಿ ತಡೆದು ಪರಿಶೀಲನೆ ನಡೆಸಿದ್ದು, ಈ ವೇಳೆಯಲ್ಲಿ ಚಾಲಕನ ಎಡಬದಿಯ ಟೂಲ್‌ ಬಾಕ್ಸ್‌ ಒಳಗಡೆ ಕೇಸರಿ ಬಣ್ಣದ ದೇಗುಲ ಪ್ರಸಾದ ಕವರ್‌ ಕಂಡುಬಂದಿದೆ. ಅನುಮಾನ ಬಂದೊಡನೆ ಪೊಲೀಸರು ಅದನ್ನು ತೆಗೆದು ನೋಡಿದಾಗ ೫೦೦ ಮುಖಬೆಲೆಯ ಐದು ಲಕ್ಷ ರೂಪಾಯಿ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಹಣ ಸಾಗಿಸುತ್ತಿದ್ದ ಕಾರು ಹಾಗೂ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ವಿರುದ್ದ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : Amit Shah : ಬಿಜೆಪಿಯಲ್ಲಿ ಟಿಕೇಟ್ ಫೈಟ್ ಗೆ ಅಮಿತ್‌ ಶಾ ಬ್ರೇಕ್, ಪಕ್ಷದ ಅಭ್ಯರ್ಥಿ ಗೆಲುವಿಗೆ ದುಡಿಯಿರಿ ಎಂದ ಚುನಾವಣಾ ಚಾಣಾಕ್ಯ

ಇದನ್ನೂ ಓದಿ : ಬಿಜೆಪಿಯಲ್ಲಿ ಬಿ.ವೈ.ವಿಜಯೇಂದ್ರಗೆ ಡಿಮ್ಯಾಂಡೋ ಡಿಮ್ಯಾಂಡ್: ಪ್ರಚಾರಕ್ಕೆ ಕಳುಹಿಸುವಂತೆ ಅಮಿತ್ ಶಾ ಬಳಿ ಶಾಸಕರ ಮನವಿ

ಇದನ್ನೂ ಓದಿ : ಮಾ.31ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಪರೀಕ್ಷಾ ಕೆಂದ್ರಗಳ ಸುತ್ತ ಬಿಗಿ ಬಂದೋಬಸ್ತ್‌, ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ

Money in prasad cover: Lots of money was found in the prasad cover of the temple

Comments are closed.