Rama Navami 2023: ಇದು ಮರ್ಯಾದ ಪುರುಷೋತ್ತಮ ಶ್ರೀ ರಾಮನ ಜನನದ ಕಥೆ

(Rama Navami 2023) ಉತ್ತರ ಭಾರತದಲ್ಲಿ ರಾಮ ನವಮಿಯನ್ನು ರಾಮದೇವರ ಹುಟ್ಟುಹಬ್ಬವೆಂದು ಆಚರಣೆ ಮಾಡುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ರಾಮ ಸೀತೆಯರ ವಿವಾಹದ ದಿನವಾಗಿ ರಾಮ ನವಮಿಯನ್ನು ಆಚರಣೆ ಮಾಡುತ್ತಾರೆ. ಮಹಿಮಾನ್ವಿತ ದೇವತೆಗಳ ದೈವಿಕ ಬಂಧವಾಗಿ ರಾಮನವಮಿಯನ್ನು ಅವರು ಆಚರಿಸುತ್ತಾರೆ

ಅಯೋಧ್ಯೆಯ ರಾಜನಾದ ದಶರಥನಿಗೆ ಕೌಸಲ್ಯಾ, ಕೈಕೇಯೀ ಹಾಗೂ ಸುಮಿತ್ರೆ ಮೂವರು ಪತ್ನಿಯರು. ಆದರೆ ಯಾರಿಗೂ ಪುತ್ರ ಸಂತಾನವಾಗಿರಲಿಲ್ಲ. ನಂತರ ದಶರಥನು ಗಂಡು ಮಗುವಿಗಾಗಿ ಋಷಿಮುನಿಗಳ ಸಲಹೆಯಂತೆ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸಿದ. ಈ ಯಜ್ಞದಿಂದ ಸಂತುಷ್ಟನಾದ ಪ್ರಜಾಪತಿಯು ದಶರಥನಿಗೆ ದಿವ್ಯ ಪಾಯಸವನ್ನು ನೀಡುತ್ತಾನೆ. ಈ ದಿವ್ಯ ಪಾಯಸವನ್ನು ದಶರಥನು ತನ್ನ ಮೂವರು ಪತ್ನಿಯರಿಗೂ ಹಂಚುತ್ತಾನೆ. ಇದರಂತೆ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಕೌಸಲ್ಯೆಗೆ ಶ್ರೀ ರಾಮ ಜನಿಸುತ್ತಾನೆ. ಹೀಗೆ ರಾಮನು ಜನಿಸಿದ ನವಮಿಯಂದು ರಾಮನವಮಿಯನ್ನಾಗಿ ಆಚರಿಸುತ್ತಾರೆ.

ತಂದೆ ತಾಯಿಯರ ಆಜ್ಞೆ ಮೀರದ ರಾಮನು ಸಂದರ್ಭ ಬಂದಾಗ ಹಿರಿಯರಿಗೂ ಉಪದೇಶ ಮಾಡುತ್ತಾನೆ. ಇಂದಿಗೂ ಆದರ್ಶ ಸಹೋದರರ ಪ್ರೇಮಕ್ಕೆ ರಾಮ-ಲಕ್ಷಣರನ್ನು ಉದಾಹರಣೆ ನೀಡಲಾಗುತ್ತದೆ. ಶ್ರೀರಾಮನು ಏಕಪತ್ನಿ ವ್ರತಸ್ಥನಾಗಿದ್ದನು. ಸೀತೆ ಕಾಡಿಗೆ ತೆರಳಿದ ನಂತರ ರಾಮನು ವಿರಕ್ತ ಜೀವನವನ್ನು ನಡೆಸುತ್ತಿದ್ದನು. ಮುಂದೆ ಯಜ್ಞವನ್ನು ಮಾಡುವಾಗ ಪತ್ನಿಯ ಅವಶ್ಯಕತೆ ಇದ್ದರೂ ಬೇರೆ ಪತ್ನಿಯನ್ನು ಸ್ವೀಕರಿಸದೇ ಸೀತೆಯ ಪ್ರತಿಮೆಯನ್ನು ತನ್ನ ಪಕ್ಕದಲ್ಲಿ ಇರಿಸಿಕೊಂಡಿದ್ದನು.

ಶ್ರೀರಾಮ ತನ್ನ ಹದಿನಾಲ್ಕು ವರ್ಷಗಳ ವನವಾಸವನ್ನು ಪೂರೈಸುತ್ತಾನೆ ಮತ್ತು ಈ ವೇಳೆ ಅವನು ರಾವಣನನ್ನು ಸಂಹರಿಸಿ ಧರ್ಮವನ್ನು ಪ್ರತಿಷ್ಟಾಪಿಸುತ್ತಾನೆ. ಈ ದಿನದ ಉಪವಾಸವು ಜೀವನದಲ್ಲಿ ಎಲ್ಲಾ ರೀತಿಯ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಶ್ರೀರಾಮನು ಉತ್ತರ ಭಾರತದ ಅಯೋಧ್ಯೆಯಲ್ಲಿ ಸೂರ್ಯವಂಶಿ ಇಕ್ಷವಾಕು ವಂಶಕ್ಕೆ ಸೇರಿದವರು. ಅಲ್ಲದೆ, ರಾಮ ವಿಷ್ಣು ದೇವರ ಏಳನೇ ಅವತಾರ ಎಂದೂ ಹೇಳಲಾಗುತ್ತದೆ. ದಶರಥನ ನಾಲ್ವರು ಮಕ್ಕಳ ಪೈಕಿ ಅಂದರೆ ಶ್ರೀರಾಮನೇ ಹಿರಿಯ ಪುತ್ರ. ಹಾಗೂ ತನ್ನ ಒಡಹುಟ್ಟಿದವರ ಪೈಕಿ ರಾಮ ಉಳಿದವರಿಗಿಂತ ದುರಾಸೆ, ದ್ವೇಷ ಮತ್ತು ದುಶ್ಚಟಗಳಿಲ್ಲದ ಆದರ್ಶ ಮಾನವನ ಪ್ರತಿರೂಪ ಎಂದೇ ಹೇಳಲಾಗುತ್ತದೆ.

ಇದನ್ನೂ ಓದಿ : Ram Navami 2023 : ರಾಮ ನವಮಿ ಯಾವಾಗ? ದಿನ, ಮಹೂರ್ತ, ಮತ್ತು ಮಹತ್ವ

Rama Navami 2023: This is the story of the birth of Marya Purushottama Sri Rama

Comments are closed.