ಸೋಮವಾರ, ಏಪ್ರಿಲ್ 28, 2025
HomeCoastal NewsMulki suicide : ಮೂವರು ಮಕ್ಕಳನ್ನು ಬಾವಿಗೆ ತಳ್ಳಿ, ಪತ್ನಿಯೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಪಾಪಿ ತಂದೆ

Mulki suicide : ಮೂವರು ಮಕ್ಕಳನ್ನು ಬಾವಿಗೆ ತಳ್ಳಿ, ಪತ್ನಿಯೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಪಾಪಿ ತಂದೆ

- Advertisement -

ಮಂಗಳೂರು : ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ನಂತರ ತಂದೆ ಪತ್ನಿಯೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪದ (Mulki suicide) ಕಿನ್ನಿಗೋಳಿಯ ಮೂರುಕಾವೇರಿ ಎಂಬಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ತಂದೆ, ತಾಯಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಕಿನ್ನಿಗೋಳಿ ಸಮೀಪದ ಶೆಟ್ಟಿಕಾಡು ನಿವಾಸಿ ಹಿತೇಶ್‌ ಶೆಟ್ಟಿಗಾರ್‌ ಎಂಬವರ ಮಕ್ಕಳಾದ ರಶ್ಮಿತಾ ( 13 ವರ್ಷ), ಉದಯ (11 ವರ್ಷ), ದಕ್ಷ ( 4 ವರ್ಷ) ಎಂಬವರೇ ಮೃತ ದುರ್ದೈವಿ ಗಳಾಗಿದ್ದಾರೆ. ಪತ್ನಿ ಲಕ್ಷ್ಮಿಯನ್ನು ಬಾವಿಗೆ ದೂಡಿದ ನಂತರ ಪತಿ ಹಿತೇಶ್‌ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಬಾವಿಯಲ್ಲಿ ಮಕ್ಕಳ ಕೂಗು ಕೇಳಿ ನೆರವಿಗೆ ಬಂದ ಸ್ಥಳೀಯರು ಹಿತೇಶ್‌ ಶೆಟ್ಟಿಗಾರ್‌ ಹಾಗೂ ಲಕ್ಷ್ಮೀಯನ್ನು ರಕ್ಷಣೆ ಮಾಡಿದ್ದಾರೆ. ಆದರೆ ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಕಾರದಿಂದ ಮಕ್ಕಳನ್ನು ಬಾವಿಯಿಂದ ಹೊರತೆಗೆಯಲಾಗಿದ್ದರೂ ಕೂಡ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಮಕ್ಕಳ ಪೈಕಿ ರಶ್ಮಿಕಾ ಎಂಟನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದರೆ, ಉದಯ ಆರನೇ ತರಗತಿ ಹಾಗೂ ದಕ್ಷತ್‌ ಅಂಗನಾಡಿಗೆ ಹೋಗುತ್ತಿದ್ದ. ಇಂದು ಮಕ್ಕಳು ಶಾಲೆಯಿಂದ ವಾಪಾಸದ ನಂತರದಲ್ಲಿ ಈ ಕೃತ್ಯವನ್ನು ಎಸಗಿದ್ದಾನೆ. ಎಂಆರ್‌ಪಿಎಲ್‌ನಲ್ಲಿ ಕ್ಯಾಂಟೀನ್‌ ಕೆಲಸದಲ್ಲಿದ್ದ ಹಿತೇಶ್‌ ಶೆಟ್ಟಿಗಾರ್‌ ಇತ್ತೀಚಿಗೆಷ್ಟೆ ಕೆಲಸವನ್ನು ಬಿಟ್ಟಿದ್ದು, ಸಾಲ ಮಾಡಿ ಅಂಗಡಿಯೊಂದನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮಾನಸಿಕವಾಗಿ ನೊಂದಿದ್ದರು. ಇದೇ ಕಾರಣಕ್ಕೆ ಸಾಮೂಹಿಕವಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಡಿಸಿಪಿ ಹರಿರಾಮ್‌ ಶಂಕರ್‌, ಎಸಿಪಿ ಮಹೇಶ್‌ ಕುಮಾರ್‌, ಮೂಲ್ಕಿ ಇನ್‌ಸ್ಪೆಕ್ಟರ್‌ ಕುಸುಮೋಧರ್‌ ಭೇಟಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂಲ್ಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : actor sathish vajra died : ಸ್ಯಾಂಡಲ್​ವುಡ್​ ಯುವ ನಟ ಸತೀಶ್​ ವಜ್ರ ಬರ್ಬರ ಹತ್ಯೆ

ಇದನ್ನೂ ಓದಿ : 50 ರೂಪಾಯಿಗಾಗಿ ಸ್ನೇಹಿತರ ನಡುವೆ ಕಿತ್ತಾಟ :ಆಪ್ತಮಿತ್ರನಿಂದಲೇ ಸ್ನೇಹಿತನ ಕಗ್ಗೊಲೆ

Mulki suicide : sinful father who threw three children into the well and attempted suicide with his wife

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular