India vs Leicestershire : ಟೀಮ್ ಇಂಡಿಯಾದ ವಿರುದ್ಧವೇ ಕಣಕ್ಕಿಳಿದ ಪಂತ್, ಪೂಜಾರ, ಬುಮ್ರಾ, ಪ್ರಸಿದ್ದ ಕೃಷ್ಣ

ಲೀಸೆಸ್ಟರ್: ಸೂಪರ್ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹಾಗೂ ರಿಷಬ್‌ ಪಂತ್ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ, ವಿಕೆಟ್ ಕೀಪರ್ ಬ್ಯಾಟ್ಸ್”ಮನ್ ರಿಷಬ್ ಪಂತ್ ಭಾರತ ತಂಡದ ಪ್ರಮುಖ ಆಟಗಾರರು. ಆದರೆ ಇಂಗ್ಲೆಂಡ್ ಪ್ರವಾಸದ ಮೊದಲ ಪಂದ್ಯದಲ್ಲೇ ಈ ಮೂವರು ಆಟಗಾರರು ಟೀಮ್ ಇಂಡಿಯಾ (India vs Leicestershire) ವಿರುದ್ಧವೇ ಆಡುತ್ತಿದ್ದಾರೆ (Pujara, Pant, Bumrah playing for Leicestershire).

ಇಂಗ್ಲೆಂಡ್ ಪ್ರವಾಸದಲ್ಲಿರುವ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ, ಜುಲೈ 1ರಿಂದ ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯವಾಡಲಿದೆ. ಈ ಪಂದ್ಯಕ್ಕೆ ಪೂರ್ವಭಾವಿ ಯಾಗಿ ಲೀಸೆಸ್ಟರ್ ಶೈರ್ ವಿರುದ್ಧದ 4 ದಿನಗಳ ಅಭ್ಯಾಸ ಪಂದ್ಯ ಗುರುವಾರ ಆರಂಭಗೊಂಡಿದೆ. ಟಾಸ್ ಗೆದ್ದಿರುವ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ರೋಹಿತ್ ಮತ್ತು ಶುಭಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

ವಿಶೇಷ ಏನಂದ್ರೆ ಈ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರಾದ ಚೇತೇಶ್ವರ್ ಪೂಜಾರ, ಜಸ್ಪ್ರೀತ್ ಬುಮ್ರಾ‌, ಪ್ರಸಿದ್ದ ಕೃಷ್ಣ ಮತ್ತು ರಿಷಭ್ ಪಂತ್ ಎದುರಾಳಿ ಲೀಸೆಸ್ಟರ್ ಶೈರ್ ತಂಡದ ಪರ ಆಡುತ್ತಿದ್ದಾರೆ. ಭಾರತ ತಂಡದ ಪ್ಲೇಯಿಂಗ್ XIನಲ್ಲಿ ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ, ಹನುಮ ವಿಹಾರಿ, ಕೆ.ಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಉಮೇಶ್ ಯಾದವ್ ಕಾಣಿಸಿಕೊಂಡಿದ್ದಾರೆ.

ಚೇತೇಶ್ವರ್ ಪೂಜಾರ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಹಾಗೂ ಪ್ರಸಿದ್ದ ಕೃಷ್ಣ ಅವರು ಲೀಸೆಸ್ಟರ್ ಶೈರ್ ತಂಡದ ಪರ ಆಡುತ್ತಿದ್ದಾರೆ. ಅಭ್ಯಾಸ ಪಂದ್ಯವಾಗಿರುವ ಕಾರಣ ಎದುರಾಳಿ ತಂಡದ ಪರ ಆಡುವ ಅವಕಾಶವಿದೆ.

ಇದನ್ನೂ ಓದಿ : Rohit Sharma : ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು 15 ವರ್ಷ ; ಭಾವುಕ ಶಬ್ದಗಳಲ್ಲಿ ಪತ್ರ ಬರೆದ ರೋಹಿತ್ ಶರ್ಮಾ

ಇದನ್ನೂ ಓದಿ : Sarfaraz Khan : 6 ಪಂದ್ಯಗಳಲ್ಲಿ 937 ರನ್ ; ಸಾವಿರಕ್ಕೆ 63 ಬಾಕಿ, ಆರ್‌ಸಿಬಿಯ ಸರ್ಫರಾಜ್ ಖಾನ್ ತಾಕತ್ತು ನೋಡಿದ್ರಾ?

India vs Leicestershire Pant, Pujara, Bumrah, the famous Krishna are playing against India

Comments are closed.