ಮಂಗಳೂರು : ಆಕೆ ನಿನ್ನೆಯಷ್ಟೇ ಮದುವೆಯ ಬಂಧನಕ್ಕೆ ಓಳಗಾಗಿದ್ದಳು. ಆದರೆ ಮದುವೆಯ ಮರು ದಿನವೇ ವಧು ಮಸಣ ಸೇರಿದ್ದಾಳೆ. ಈ ಸ್ಟೋರಿ ಓದಿದ್ರೆ ವಿಧಿ ನೀನೆಷ್ಟೂ ಕ್ರೂರಿ ಅನಿಸದೇ ಇರದು.
ಹೌದು, ಮಂಗಳೂರಿನ ಕರೀಂ ಹಾಜಿ ಅವರ ಪುತ್ರಿ ಲೈಲಾ ಆಫಿಯಾ (23ವರ್ಷ)ಗೆ ನಿನ್ನೆ ತಾನೆ ಮದುವೆಯಾಗಿತ್ತು. ಮಂಗಳೂರಿನ ಆಡ್ಯಾರ್ ಗಾರ್ಡನ್ ನಲ್ಲಿ ನಡೆದ ಮದುವೆಯಲ್ಲಿ ಕಣ್ಣೂರಿನ ಯುವಕ ಮುಬಾರಕ್ ಎಂಬಾತ ಲೈಲಾ ಆಫಿಯಾ ಕೈ ಹಿಡಿದಿದ್ದನು. ಅದ್ದೂರಿಯಿಂದ ನಡೆದ ಮದುವೆಯಲ್ಲಿ ಆಫಿಯಾ ಮತ್ತು ಮುಬಾರಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಆದರೆ ಇಂದು ಮುಂಜಾನೆ 3 ಗಂಟೆ ವೇಳೆಯಲ್ಲಿ ಆಫಿಯಾಗೆ ತೀವ್ರ ಹೃದಯಾಘಾತವಾಗಿ ಸಾವನ್ನಪ್ಪಿದ್ದಾಳೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಸೂತಕತ ಛಾಯೆ ಮೂಡಿದೆ. ನವ ವಧು, ವರನ ಕುಟುಂಬದಲ್ಲಿ ದುಖಃ ಮಡುಗಟ್ಟಿದೆ.
ಪತ್ನಿ ಜೊತೆ ಜೀವನ ಪೂರ್ತಿ ಸಂತಸದಲ್ಲಿ ಕಳೆಯಬೇಕೆಂದು ಆಸೆ ಇಟ್ಟುಕೊಂಡಿದ್ದ ಮುಬಾರಕ್ ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದಾನೆ.