ಹೆಬ್ರಿ : ಮಳೆಗಾಲದಲ್ಲಿ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ವಾಸಿಸುವವರು ಎಷ್ಟೇ ಜಾಗರೂಕರಾಗಿದ್ದರು ಸಾಲುವುದಿಲ್ಲ. ಅದರಲ್ಲೂ ರೈತರು, ಕೃಷಿ ಕಾರ್ಮಿಕರು, ತೋಟದ ಕೆಲಸ ಮಾಡುವವರು ಹುಷಾರಾಗಿರಬೇಕು. ಯಾಕೆಂದ್ರೆ ಇಲ್ಲೋರ್ವ ರೈತ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ ಕಬ್ಬಿನಾಲೆಯ ಮಜ್ಜುಗುಡ್ಡೆ ನಿವಾಸಿ ಲಕ್ಷ್ಮೀಶ್ ಹೆಬ್ಬಾರ್ (54 ವರ್ಷ) ಸಾವನ್ನಪ್ಪಿದ ರೈತ. ಲಕ್ಷ್ಮೀಶ್ ಹೆಬ್ಬಾ ಮಂಗಳವಾರ ಬೆಳ್ಳಿಗ್ಗೆ ಅಡಿಕೆ ತೋಟದಲ್ಲಿ ಕೀಟನಾಶಕವನ್ನುಸಿಂಪಡಿಸುತ್ತಿದ್ದರು. ಈ ಸಂದರ್ಭದಲ್ಲಿ ಲಕ್ಷ್ಮೀಶ್ ಹೆಬ್ಬಾರ್‌ರವರು ಅಲುಮೀನ್ಯಮ್ ಏಣಿಯನ್ನು ಸರಿಸುವಾಗ ಆ ಏಣಿಗೆ ತೋಟದ ಮೇಲೆ ಹಾದು ಹೋದ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ : ಮಂಗಳೂರಿಗೆ ಕೇರಳ ವೈರಸ್ ಕಂಟಕ : ದ.ಕ. ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ಸೋಂಕು
ಮೃತರಿಗೆ ಹೆಂಡತಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಘಟನಾ ಸ್ಥಳಕ್ಕೆ ಉಡುಪಿ ಹಾಗೂ ಹೆಬ್ರಿ ಮೆಸ್ಕಾಂ ಅಧಿಕಾರಿಗಳು ಮತ್ತು ಹೆಬ್ರಿ ಠಾಣಾಧಿಕಾರಿ ಮಹೇಶ್ ಟಿ.ಎಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಈ ಕುರಿತು ಹೆಬ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಸಾಮಾಜಿಕ ಜಾಲತಾಣದಲ್ಲಿ ಕೊರಗಜ್ಜನಿಗೆ ಅವಮಾನ : ಭಾವಚಿತ್ರ ಅಶ್ಲೀಲಗೊಳಿಸಿದ ವ್ಯಕ್ತಿ ವಿರುದ್ದ ದೂರು