Pramod Muthalik Net Worth : ಕಾರ್ಕಳ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಮೋದ್‌ ಮುತಾಲಿಕ್‌ ಆಸ್ತಿ ಮೌಲ್ಯ ಎಷ್ಟು ಗೊತ್ತಾ ?

ಕಾರ್ಕಳ : (Pramod Muthalik Net Worth) ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಚುನಾವಣಾ ಅಭ್ಯರ್ಥಿಗಳ ಆಸ್ತಿ ವಿವರಗಳನ್ನು ಪಡೆಯಲಾಗುತ್ತಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ಪ್ರಮೋದ್‌ ಮುತಾಲಿಕ್‌ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದು, ಚುನಾವಣಾ ನಿಯಮದಂತೆ ತಮ್ಮ ಆಸ್ತಿ ವಿವರವನ್ನು ನೀಡಿದ್ದಾರೆ. ಅವರು ನೀಡಿದ ವಿವರಗಳ ಪ್ರಕಾರ, ಕೈಯಲ್ಲಿ ಒಂದು ಸಾವಿರ ರೂಪಾಯಿ, ಅವರ ಹೆಸರಲ್ಲಿ ಎರಡೂವರೆ ಲಕ್ಷದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಬಾಂಡ್‌ ಬಿಟ್ಟರೆ ಬೇರೇನೂ ಆಸ್ತಿ ಇಲ್ಲವಂತೆ.

ಕಾರ್ಕಳ ವಿಧಾನಸಭಾ ಕೇತ್ರದ ಪಕ್ಷೇತರ ಅಭ್ಯರ್ಥಿ ಪ್ರಮೋದ್‌ ಮುತಾಲಿಕ್‌ ಅವರಿಗೆ ಪತ್ನಿ, ಮಕ್ಕಳು, ಕುಟುಂಬ ಇಲ್ಲ, ಯಾರು ಅವಲಂಬಿತರೂ ಇಲ್ಲ, ಇನ್ನೂ ಅವರ ಹೆಸರಿನಲ್ಲಿ ಯಾವುದೇ ಜಮೀನು, ನಿವೇಶನ, ಮನೆ, ವಾಹನ, ಚಿನ್ನಭರಣ, ಸಾಲ, ದುಬಾರಿ ವಸ್ತುಗಳು ಇಲ್ಲವಂತೆ. ಹಿಂದೂ ಸಂಘಟನೆ ಸಮಾಜ ಸೇವೆಯನ್ನೇ ತಮ್ಮ ಜೀವವಾಗಿಸಿಕೊಂಡಿರುವ ಪ್ರಮೋದ್‌ ಮುತಾಲಿಕ್‌ ಅವರ ಒಟ್ಟಾರೆ ಆಸ್ತಿ ಮೌಲ್ಯ 2,63,500 ರೂಪಾಯಿ ಮಾತ್ರವಂತೆ. ಈ ಪೈಕಿ 2.5 ಲಕ್ಷದ ಒಂದು ಬಾಂಡ್‌ ಇದ್ದು, 10,500 ರೂಪಾಯಿ ಕೈಯಲ್ಲಿ ನಗದು ಹಣವಿದ್ದು, ಬ್ಯಾಂಕ್‌ ಒಂದರಲ್ಲಿ ಮೂರು ಸಾವಿರ ಉಳಿತಾಯವಷ್ಟೇ ಇದೆ ಎಂಬುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ : ಬೈಂದೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೋಪಾಲ ಪೂಜಾರಿ ನಾಮಪತ್ರ ಸಲ್ಲಿಕೆ

ಇದನ್ನೂ ಓದಿ : ಸುಬ್ರಹ್ಮಣ್ಯ ಬಳಿ ಕಾರುಗಳ ನಡುವೆ ಭೀಕರ ಅಪಘಾತ : ಮಗು ಸೇರಿ ನಾಲ್ವರ ದುರ್ಮರಣ

ಅವರಿಗೆ ಬರುವ ಆದಾಯ ಮೂಲವನ್ನು ದೇಣಿಗೆ ಸಂಗ್ರಹ, ಉದ್ಯೋಗ ಸಮಾಜಸೇವೆ ಎನ್ನುವುದಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಹಿಂದುತ್ವ, ಹಿಂದೂ ಕಾರ್ಯಕರ್ತರನ್ನು ಬಿಟ್ಟು ನಾನು ಬೇರೆ ಏನು ಸಂಪಾದನೆ ಮಾಡಲಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಅವರ ಬಳಿ ಆಸ್ತಿ ಕಡಿಮೆ ಇದ್ದು, ಅಪರಾಧ ಪ್ರಕರಣಗಳೇ ಹೆಚ್ಚಿವೆ. ಯಾದಗಿರಿ, ಶೃಂಗೇರಿ, ಬೆಂಗಳೂರು, ಬಬಲೇಶ್ವರ, ಬಾಗಲಕೋಟೆ ನವನಗರ, ಜೇವರ್ಗಿ ಹಾಗೂ ಮುರುಡೇಶ್ವರ ಸೇರಿ ಏಳು ಪೊಲೀಸ್‌ ಠಾಣೆಗಳಲ್ಲಿ ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವ ಕೇಸ್‌ ಪ್ರಮೋದ್‌ ಮುತಾಲಿಕ್‌ ವಿರುದ್ಧ ದಾಖಲಾಗಿದೆ.

ಇದನ್ನೂ ಓದಿ : Vinay Kumar Sorake nomination : ಕಾಪು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಮಾರ್‌ ಸೊರಕೆ ನಾಮಪತ್ರ ಸಲ್ಲಿಕೆ

Pramod Muthalik Net Worth: Do you know the net worth of Pramod Muthalik, the non-party candidate of Karkala Assembly Constituency?

Comments are closed.