ಕೆಜಿಎಫ್‌ ಬಾಬು ಮನೆ ಮೇಲೆ ಐಟಿ ದಾಳಿ : ಹಲವು ಕಾಂಗ್ರೆಸ್‌ ನಾಯಕರಿಗೆ ಐಟಿ ಶಾಕ್‌

ಬೆಂಗಳೂರು : ಚುನಾವಣೆಯ ಹೊತ್ತಲೇ ಐಟಿ ಅಧಿಕಾರಿಗಳು ಕಾಂಗ್ರೆಸ್‌ ಮುಖಂಡರಿಗೆ ಶಾಕ್‌ ಕೊಟ್ಟಿದ್ದಾರೆ. ಬೆಂಗಳೂರಿನ ಕೆಜಿಎಫ್‌ ಬಾಬು (IT raid KGF Babu) ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ನಗರದ ಸುಮಾರು 50ಕ್ಕೂ ಅಧಿಕ ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಇಂದು ಮುಂಜಾನೆ ಬೆಂಗಳೂರು ನಗರದ ಹೈಗ್ರೌಂಡ್ಸ್‌ ಬಳಿಯಲ್ಲಿರುವ ಕೆಜಿಎಫ್‌ ಬಾಬು (IT raid KGF Babu)ಅವರ ರುಕ್ಸಾನಾ ಫ್ಯಾಲೆಸ್‌ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಕರ್ನಾಟಕದ ಹಲವು ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮಂಗಳೂರು, ಮೈಸೂರಿನಲ್ಲಿರುವ ಕಾಂಗ್ರೆಸ್‌ ಮುಖಂಡರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಚುನಾವಣೆ ಸಮೀಪಿಸುತ್ತಿದ್ದು ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಇಂತಹ ಹೊತ್ತಲ್ಲೇ ಕಾಂಗ್ರೆಸ್‌ ನಾಯಕರ ನಿವಾಸಗಳ ಮೇಲೆ ದಾಳಿ ನಡೆದಿರುವುದು ಕಾಂಗ್ರೆಸ್‌ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈಗಾಗಲೇ ಹಲವು ನಾಯಕರು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್‌ ಸಿಗದ ಹಲವು ನಾಯಕರು ಈಗಾಗಲೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷ ಸೇರಿಕೊಂಡಿದ್ದಾರೆ. ಎಪ್ರಿಲ್‌ 24 ನಾಮಪತ್ರ ವಾಪಾಸ್‌ ಪಡೆಯಲು ಕೊನೆಯ ದಿನವಾಗಿದೆ.

ಭೀಕರ ಕಾರು ಅಪಘಾತ ; ಮಾಜಿ ಶಾಸಕಿ, ಬಿಜೆಪಿ ನಾಯಕಿ ನೀರಜಾ ರೆಡ್ಡಿ ಸಾವು

ಕಾರಿನ ಟೈರ್‌ ಸ್ಪೋಟಗೊಂಡು ಕಾರು ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ಮಾಜಿ ಶಾಸಕಿಯೋರ್ವರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಗಡ್ಯಾಲ್ ಜೋಗುಲಾಂಬ ಜಿಲ್ಲೆಯ ಇಟಿಕ್ಯಾಲ ಗ್ರಾಮದ ಬಳಿ ನಡೆದಿದೆ. ಆಲೂರು ಕ್ಷೇತ್ರದ ಮಾಜಿ ಶಾಸಕಿ ಪಾಟೀಲ್ ನೀರಜಾ ರೆಡ್ಡಿ (50 ವರ್ಷ) ಭಾನುವಾರ ತೆಲಂಗಾಣದ ಗಡ್ಯಾಲ್ ಜೋಗುಲಾಂಬ ಜಿಲ್ಲೆಯ ಇಟಿಕ್ಯಾಲ ಗ್ರಾಮದ ಬಳಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಹೈದರಾಬಾದ್‌ನಿಂದ ಕರ್ನೂಲ್‌ಗೆ ತೆರಳುತ್ತಿದ್ದ ವೇಳೆ ತೆಲಂಗಾಣದ ಇಟಿಕ್ಯಾಲ ಮಂಡಲ್‌ನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 44ರಲ್ಲಿ ಟೈರ್‌ ಒಡೆದು ಕಾರು ಪಲ್ಟಿಯಾಗಿದೆ. ಪರಿಣಾಮ ಶಾಸಕಿಯ ತಲೆ ಮತ್ತು ದೇಹಕ್ಕೆ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನೀರಜಾ ರೆಡ್ಡಿ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. “ನೀರಜಾ ರೆಡ್ಡಿ ಅವರು ಹೈದರಾಬಾದ್‌ನಿಂದ ಕರ್ನೂಲ್‌ಗೆ ತಮ್ಮ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ವಾಹನದ ಹಿಂಬದಿಯ ಒಂದು ಟೈರ್ ಒಡೆದ ಪರಿಣಾಮ ಕಾರು ರಸ್ತೆಯಿಂದ ಆಚೆಗೆ ಪಲ್ಟಿಯಾಗಿದೆ ಮತ್ತು ಕ್ಯಾರೇಜ್‌ವೇ ಆಚೆಗಿನ ಕಡಿದಾದ ಗ್ರೇಡಿಯಂಟ್ ಕೆಳಗೆ ಪಲ್ಟಿಯಾಗಿದೆ. ಅಪಘಾತವು ಮಧ್ಯಾಹ್ನ 4.40 ರ ಸುಮಾರಿಗೆ ಸಂಭವಿಸಿದೆ ಎಂದು ಹೇಳಲಾಗಿದೆ.” ಎಂದು ಆಲಂಪುರ್ ಸರ್ಕಲ್ ಇನ್ಸ್‌ಪೆಕ್ಟರ್ ದಿ ಹಿಂದೂಗೆ ತಿಳಿಸಿದ್ದಾರೆ.

ಇದನ್ನೂ ಓದಿ : ಚುನಾವಣೆ ಸಮಯದಲ್ಲಿ ಜನತೆಗೆ ಬೆಲೆ ಏರಿಕೆಯ ಬರೆ: ಗಗನಕ್ಕೆ ಏರಿದ ಸಕ್ಕರೆ ಬೆಲೆ

ಇದನ್ನೂ ಓದಿ : ಹಾಲಾಡಿ ಶ್ರೀನಿವಾಸ್‌ ಶೆಟ್ಟಿ + ಕಿರಣ್‌ ಕೊಡ್ಗಿ : ಗೆಲುವು ಕಾಣುವರೇ ಮೊಳಹಳ್ಳಿ

Comments are closed.