“ಕಬ್ಜ” ಸಿನಿಮಾ ಟ್ರೈಲರ್‌ : ಡಬ್ಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡ ರಿಯಲ್‌ ಸ್ಟಾರ್

ಸ್ಯಾಂಡಲ್‌ವುಡ್‌ ಬಹುನಿರೀಕ್ಷಿತ “ಕಬ್ಜ” ಸಿನಿಮಾದ ಟ್ರೈಲರ್‌ (Kabza Movie Trailer) 5 ಭಾಷೆಗಳಲ್ಲಿ ನಿನ್ನೆ (ಮಾರ್ಚ್ 4) ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಅವರು ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯಾದ ಅಷ್ಟು ಟ್ರೈಲರ್‌ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಟ್ರೈಲರ್‌ ನೋಡಿದ ಅಭಿಮಾನಿಗಳು ಪ್ಯಾನ್‌ ಇಂಡಿಯಾ ಸಿನಿಮಾ ಪಕ್ಕಾ ಪೈಸಾ ವಸೂಲು ಎಂದಿದ್ದಾರೆ. ಈ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ನಟಿಸಿದ್ದು, ರಿಯಲ್‌ಸ್ಟಾರ್‌ ಡಬ್ಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಕುತೂಹಲವನ್ನು ಇನ್ನಷ್ಟು ಕೆರಳಿಸಿದ್ದಂತೆ ಆಗಿದೆ.

ಕಬ್ಜ ಸಿನಿಮಾದ ಟ್ರೈಲರ್ ಎಲ್ಲಾ ಭಾಷೆಯ ಸಿನಿರಸಿಕರ ಮನಗೆದ್ದಿದೆ. ಹೀಗಾಗಿ ಈ ಸಿನಿಮಾ ಪಕ್ಕಾ ಬ್ಲಾಕ್‌ಬಸ್ಟರ್ ಎನ್ನುವ ಮಾತು ಜೋರಾಗಿದೆ. ಇದಕ್ಕೆಲ್ಲಾ ಮುಖ್ಯ ಕಾರಣ ಆರ್‌. ಚಂದ್ರು ವಿಷನ್, ಮೇಕಿಂಗ್, ರಿಚ್ ವಿಷ್ಯುವಲ್ಸ್, ಹ್ಯೂಜ್ ಸೆಟಪ್ಸ್, ಉಪ್ಪಿ, ಕಿಚ್ಚನ ಆರ್ಭಟ, ರವಿ ಬಸ್ರೂರು ಹಂಟಿಂಗ್ ಬಿಜಿಎಂ ಸಖತ್ ಮಜಾ ಕೊಡುತ್ತಿದೆ. ಇಡೀ ಟ್ರೈಲರ್‌ನಲ್ಲಿ ಸುದೀಪ್ ವಾಯ್ಸ್ ಹೈಲೆಟ್ ಆಗಿದ್ದು, ಕಿಚ್ಚನ ಒಂದೊಂದು ಡೈಲಾಗ್ ಅಭಿಮಾನಿಗಳಿಗೆ ಮಜಾ ಕೊಡುತ್ತಿದೆ. ಅಲ್ಲಲ್ಲಿ ‘ಕೆಜಿಎಫ್’ ಸಿನಿಮಾ ಚಹರೆ ಕಂಡರರೂ ಸಹ ಟ್ರೈಲರ್ ಅಂತೂ ಸಿನಿಪ್ರಿಯರಿಗೆ ಹೊಸ ಫೀಲ್ ನೀಡಿದೆ. ಸಿನಿಪ್ರೇಕ್ಷಕರಲ್ಲಿ ಫಸ್ಟ್ ಡೇ ಫಸ್ಟ್ ಶೋ ನೋಡಲೇಬೇಕು ಎನ್ನುವ ಕುತೂಹಲ ಹುಟ್ಟಿಸಿದೆ.

‘ಕಬ್ಜ’ ಸಿನಿಮಾದಲ್ಲಿ ನಾಯಕ ಮೊದಲು ಏರ್‌ಪೋರ್ಸ್ ಅಕಾಡೆಮಿ ಅಧಿಕಾರಿ ಅರ್ಕೇಶ್ವರ ಅಂಡರ್‌ವರ್ಲ್ಡ್ ಡಾನ್ ಆಗುವ ಕಥೆಯನ್ನು ಒಳಗೊಂಡಿದೆ. ಆತನ ಎದುರಾಳಿ ಭಾರ್ಗವ್ ಭಕ್ಷಿ ಪಾತ್ರದಲ್ಲಿ ಕಿಚ್ಚ ಸುದೀಪ್ ಮಿಂಚಿದ್ದಾರೆ. ರಾಣಿ ಮಧುಮತಿಯಾಗಿ ಶ್ರೀಯಾ ಮೋಡಿ ಮಾಡುತ್ತಾರೆ. ಇನ್ನು ನವಾಬ್ ಶಾ, ಕೋಟ ಶ್ರೀನಿವಾಸ್ ರಾವ್, ಕಬೀರ್ ದುಹಾನ್ ಸಿಂಗ್, ದೇವ್ ಗಿಲ್, ನೀನಾಸಂ ಅಶ್ವಥ್ ಸೇರಿದಂತೆ ಹಲವರು ಡಾನ್‌ಗಳಾಗಿ ಅಬ್ಬರಿಸಿದ್ದಾರೆ. ‘ದಿ ನೆಕ್ಸ್ಟ್ ಬಿಗ್ ಥಿಂಗ್ ಇನ್ ಇಂಡಿಯನ್ ಸಿನಿಮಾ’ ಎಂದು ‘ಕಬ್ಜ’ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ.

ಇತಿಹಾಸ ಯಾವಾಗಲೂ ಉರುಳಿರುವ ತಲೆಗಳಿಗಿಂತ ಕತ್ತರಿಸಿರುವ ಕೈಗಳನ್ನೇ ಕೊಂಡಾಡೋದು. ಅಂತಹ ಕೈಯಿಂದ ಕೈಯಿಂದ ಸೃಷ್ಟಿಯಾಗಿರುವ ಚರಿತ್ರೆನೇ ಕಬ್ಜ” ಎನ್ನುವ ಕಿಚ್ಚನ ಖಡಕ್ ಡೈಲಾಗ್ ಜೊತೆಗೆ ಟ್ರೈಲರ್ ಪ್ರಾರಂಭವಾಗುತ್ತದೆ. ಟ್ರೈಲರ್‌ ನೋಡ ನೋಡುತ್ತಾ ನೋಡುಗರನ್ನು ತನ್ನೊಳಗೆ ಸೆಳೆದುಕೊಳ್ಳುತ್ತದೆ. ಡಿಫ್‌ರೆಂಟ್ ಶೇಡ್‌ಗಳಲ್ಲಿ ಉಪೇಂದ್ರ, ಸುದೀಪ್ ಗಮನ ಸೆಳೆಯುತ್ತಾರೆ. ಉಪ್ಪಿ ರಗಡ್ ಲುಕ್‌, ಆಕ್ಷನ್‌ನಿಂದ ಹುಬ್ಬೇರಿಸುತ್ತಾರೆ.

“ಒಂದು ಸಾಮ್ರಾಜ್ಯ ಕಟ್ಟೋದು ಕತ್ತಿಯಿಂದ ಅಲ್ಲ. ಅದನ್ನು ಹಡಿಯುವ ಬಲವಾದ ಕೈಯಿಂದ” ಎನ್ನುವ ಕಿಚ್ಚನ ಮತ್ತೊಂದು ಡೈಲಾಗ್‌ಗೂ ಕೂಡ ಸಿನಿಪ್ರೇಕ್ಷಕರಿಗೆ ಸಖತ್ ಕಿಕ್ ಕೊಡುತ್ತೆ. ಆಕ್ಷನ್, ಆರ್ಭಟದ ಜೊತೆಗೆ ಎಮೋಷನ್‌ನ ಕೂಡ ಸೇರಿಸಿ ಆರ್‌. ಚಂದ್ರು ‘ಕಬ್ಜ’ ಸಿನಿಮಾ ತೆರೆಗೆ ತರುತ್ತಿರೋದು ಟ್ರೈಲರ್‌ನಲ್ಲಿ ಗೊತ್ತಾಗುತ್ತಿದೆ. ಸುನಿಲ್ ಪುರಾಣಿಕ್ ಸಿನಿಮಾದಲ್ಲೊಂದು ಮುಖ್ಯ ಪಾತ್ರ ಮಾಡಿರೋದು ಗೊತ್ತಾಗುತ್ತಿದೆ. ಅರ್ಕೇಶ್ವರನ ಸಹೋದರ ಆತನೇ ಎನಿಸುತ್ತಿದೆ. ಎಲ್ಲಾ ವಿಭಾಗಗಳಲ್ಲೂ ಫಸ್ಟ್ ಕ್ಲಾಸ್ ಎನಿಸುತ್ತಿರುವ ಟ್ರೈಲರ್ ಸೂಪರ್ ಹಿಟ್ ಆಗಿದೆ.

ಇದನ್ನೂ ಓದಿ : ಕಬ್ಜ ಸಿನಿಮಾದ ಟ್ರೈಲರ್ ರಿಲೀಸ್ ಮಾಡೋದ್ಯಾರು ? ಕುತೂಹಲ ಹುಟ್ಟಿಸಿದ ಚಿತ್ರತಂಡ

ಇದನ್ನೂ ಓದಿ : ಸ್ಯಾಂಡಲ್‌ವುಡ್ ಅದ್ದೂರಿ ಎಂಟ್ರಿ ಕೊಟ್ಟ ಯುವರಾಜ್‌ ಕುಮಾರ್‌ : ದಾಖಲೆ ಸೃಷ್ಟಿಸಿದ “ಯುವ” ಟೈಟಲ್‌ ಟೀಸರ್‌

ಇದನ್ನೂ ಓದಿ : ಮತ್ತೇರಿಸೋ ಮೈಮಾಟ ತೋರಿದ ಕಣ್ಸನ್ನೆ ಬೆಡಗಿ: ಪ್ರಿಯಾ ವಾರಿಯರ್ ಪೋಟೋಶೂಟ್ ಹೇಗಿದೆ ಗೊತ್ತಾ

ಕನ್ನಡ ಟ್ರೈಲರ್ ರಿಲೀಸ್‌ಗೂ ಮುನ್ನ ಹಿಂದಿ ಟ್ರೈಲರ್ ಬಂದು ಸದ್ದು ಮಾಡಿದೆ. ಬಿಗ್‌ ಬಿ ಅಮಿತಾಬ್ ಬಚ್ಚನ್ ಟ್ರೈಲರ್ ನೋಡಿ ಮೆಚ್ಚಿಕೊಂಡಿದ್ದರು. ಸಿನಿಮಾತಂಡಕ್ಕೆ ಶುಭ ಕೋರಿದ್ದರು. ಆದರೆ ಟ್ರೈಲರ್‌ನಲ್ಲಿ ಶಿವಣ್ಣನನ್ನು ತೋರಿಸದೇ ಇರುವುದು ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿದೆ. ಮಾರ್ಚ್ 17ಕ್ಕೆ ‘ಕಬ್ಜ’ ಸಿನಿಮಾ ದೊಡ್ಡಮಟ್ಟದಲ್ಲಿ ರಿಲೀಸ್ ಆಗಲಿದೆ. ಅಂದಾಜು 5000 ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.

Kabza Movie Trailer: Real Star in Double Shade

Comments are closed.