ಕರಾವಳಿ ಪ್ರದೇಶದಲ್ಲಿ ತಾಪಮಾನ ಹೆಚ್ಚಳ: ಶಾಲೆಗಳಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಸೂಚನೆ

ಉಡುಪಿ: (Precautionary measures in schools) ಕರಾವಳಿ ಪ್ರದೇಶದಲ್ಲಿ ತಾಪಮಾನ ಹೆಚ್ಚಳವಾಗಿದ್ದು, ಗರಿಷ್ಠ ಪ್ರಮಾಣದ ಏರಿಕೆಯ ಸನ್ನಿವೇಶದಲ್ಲಿ ಶಾಲಾ ವಿದ್ಯಾರ್ಥಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಇವರು ಶಾಲೆಗಳಲ್ಲಿ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ. ಈ ಬಗ್ಗೆ ಕೆಲವು ಮಾರ್ಗ ಸೂಚಿಗಳನ್ನು ಸಹ ನೀಡಿ ಆದೇಶ ಹೊರಡಿಸಿದೆ.

ಹವಾಮಾನ ಇಲಾಖೆಯ ಮಾಹಿತಿಯಂತೆ, ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ(Precautionary measures in schools)ವು ಸಾಮಾನ್ಯಕ್ಕಿಂತ ತಾಪಮಾನಕ್ಕಿಂತ ಹೆಚ್ಚಿದ್ದು, ತಾಪಮಾನ ಏರುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಸುಡು ಬಿಸಿಲಿನಿಂದಾಗುವ ಗರಿಷ್ಠ ಉಷ್ಣಾಂಶದಿಂದ ರಕ್ಷಿಸಿಕೊಳ್ಳಲು ಶಾಲಾ ಅವಧಿಯಲ್ಲಿ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ನೀಡಿದ ಸೂಚನೆಗಳು ಈ ಕೆಳಗಿನಂತಿವೆ
*. ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 03:00 ಗಂಟೆಯವರೆಗೆ ಬಿಸಿಲಿನಲ್ಲಿ ಆಟವಾಡದಿರುವುದು
*. ನೇರ ಬಿಸಿಲಿನಿಂದ ತಪ್ಪಿಸಿಕೊಳ್ಳುವುದು
*. ಅಗತ್ಯ ಸಂದರ್ಭದಲ್ಲಿ ಹೊರಗೆ ಹೋಗಬೇಕಾದಾಗ ಸಂದರ್ಭದಲ್ಲಿ ಪಾದರಕ್ಷೆ, ಕೊಡೆ, ಟೊಪ್ಪಿ ಬಳಸುವುದು
*. ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರನ್ನು ಆಗಾಗ್ಗೆ ಕುಡಿಯುವುದು
*. ನಿಯಮಿತವಾಗಿ ಕೈ ತೊಳೆದು ಆಹಾರ ಸೇವಿಸುವುದು
*. ಅಡುಗೆ ತಯಾರಿ ಸಂದರ್ಭದಲ್ಲಿ ಕಿಟಕಿ ಬಾಗಿಲುಗಳನ್ನು ತೆರೆದಿಡುವುದು
*. ಸೊಪ್ಪು ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಬಳಕೆ ಮಾಡುವುದು

ಇದನ್ನೂ ಓದಿ : ಅಝಾನ್ ಬಗ್ಗೆ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

ಈ ಮೇಲಿನ ಅಂಶಗಳ ಬಗ್ಗೆ ಮುಖ್ಯ ಶಿಕ್ಷಕರು, ಅಡುಗೆ ಸಿಬ್ಬಂದಿಗಳು ಹಾಗೂ ಪೋಷಕರು ಕ್ರಮವಹಿಸುವಂತೆ ಮಾಹಿತಿ ನೀಡಲು ಹಾಗೂ ವಿದ್ಯಾರ್ಥಿಗಳಿಗೆ ಕುಡಿಯುವ ಶುದ್ದ ನೀರಿನ ವ್ಯವಸ್ಥೆ ಒದಗಿಸಲು ತಮ್ಮ ವಲಯದ ಮುಖ್ಯ ಶಿಕ್ಷಕರಿಗೆ ತಿಳಿಸಲಾಗಿದ್ದು, ಕೈಗೊಂಡ ಕ್ರಮದ ಬಗ್ಗೆ ಶಿಕ್ಷಣ ಇಲಾಖಾ ಕಚೇರಿಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ : Top Engineering and medical colleges: ಭಾರತದ ಉನ್ನತ ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳಿಗಾಗಿ ಇಲ್ಲಿ ಪರಿಶೀಲಿಸಿ

ಇದನ್ನೂ ಓದಿ : NEET PG 2023: BFUHS ಸ್ನಾತಕೋತ್ತರ ಪದವಿ/ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭ

Precautionary measures in schools: Increase in temperature in coastal areas: Notice to take precautionary measures in schools

Comments are closed.