ಉಡುಪಿ : ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣನನ್ನು ಕತ್ತಿಯಿಂದ ತಮ್ಮ ಭೀಕರವಾಗಿ ಹತ್ಯೆಗೈದಿರುವ (Murder) ಘಟನೆ ಉಡುಪಿ ಜಿಲ್ಲೆಯ ಮಣಿಪಾಲ ಸಮೀಪದ ೮೦ ಬಡಗಬೆಟ್ಟು ಗ್ರಾಮದ ಕಬ್ಯಾಡಿ ಕಂಬಳಕಟ್ಟ ಎಂಬಲ್ಲಿ ನಡೆದಿದೆ.

ಬಾಲಕೃಷ್ಣ ನಾಯ್ಕ್ ( 43 ವರ್ಷ) ಎಂಬಾತನೇ ಕೊಲೆಯಾದ ದುರ್ದೈವಿ. ದಯಾನಂದ ಎಂಬಾತನೇ ಅಣ್ಣನನ್ನು ಕೊಲೆಗೈದ ಆರೋಪಿ. ಕಬ್ಯಾಡಿ ಗ್ರಾಮದ ಕಂಬಳಕಟ್ಟ ಎಂಬಲ್ಲಿನ ಮನೆಯ ವಾಸ್ತವ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಕೃಷ್ಣ ಹಾಗೂ ದಯಾನಂದ ನಡುವೆ ಗಲಾಟೆ ನಡೆಯುತ್ತಿತ್ತು. ಇದೇ ವಿಚಾರಕ್ಕೆ ದಯಾನಂದ ಹಾಗೂ ಬಾಲಕೃಷ್ಣ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ವೇಳೆಯಲ್ಲಿ ಕೋಪಗೊಂಡ ದಯಾನಂದ ಮನೆಯಲ್ಲಿದ್ದ ಕತ್ತಿಯಿಂದ ಅಣ್ಣ ಬಾಲಕೃಷ್ಣನ ತಲೆ ಕಡಿದು ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಬಾಲಕೃಷ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಿತ್ಯಾನಂದ ನಾಯ್ಕ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮಣಿಪಾಲ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಮಣಿಪಾಲ ಸರ್ಕಲ್ ಇನ್‌ಸ್ಪೆಕ್ಟರ್ ಮಂಜುನಾಥ್, ಮಣಿಪಾಲ ಪೊಲೀಸ್ ಠಾಣಾಧಿಕಾರಿ ರಾಜಶೇಖರ್ ಹೊಂದಾಳೆ ಹಾಗೂ ಸುಧಾಕರ ತೋನ್ಸೆ ಅವರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.
ಇದನ್ನೂ ಓದಿ : ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಸ್ಯಾಂಡಲ್ ವುಡ್ ಖ್ಯಾತ ನಟಿ ಸಹೋದರ ಅರೆಸ್ಟ್
ಇದನ್ನೂ ಓದಿ : ಮದುವೆಯಾಗೋಣ ಎಂದು ಕರೆದು ಪೆಟ್ರೋಲ್ ಸುರಿದು ಬೆಂಕಿ ಇಟ್ಟ : ಪ್ರೇಮಿಯ ಹುಚ್ಚಾಟಕ್ಕೆ ತಹಶೀಲ್ದಾರ ಪುತ್ರಿ ಬಲಿ
( property dispute Murder his own brother in Udupi)