Ravi Katapadi : ಡಾರ್ಕ್ ಅಲೈಟ್ ವೇಷ ತೊಟ್ಟು 6 ಮಕ್ಕಳ ಜೀವ ಉಳಿಸಲು ಮುಂದಾದ ರವಿ ಕಟಪಾಡಿ

ಉಡುಪಿ : ಸಾಮಾಜಿಕ ಸೇವಾ ಕಾರ್ಯದ ಮೂಲಕ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವವರು ರವಿ ಕಟಪಾಡಿ. ವರ್ಷಂಪ್ರತಿ ಯಂತೆ ಈ ಬಾರಿ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಡಾರ್ಕ್ ಅಲೈಟ್ ವೇಷದಲ್ಲಿ ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಉಡುಪಿ ಜಿಲ್ಲೆಯ ಕಟಪಾಡಿಯ ರವಿ ಅವರು, ಬಡತನದಲ್ಲಿಯೇ ಬೆಂದವರು. ತನಗೆ ಕಷ್ಟವಿದ್ದರೂ ಕೂಡ ಇತರರ ಸಂಕಷ್ಟಕ್ಕೆ ನೆರವಾಗುವ ಕಾರ್ಯವನ್ನು ಹಲವು ವರ್ಷ ಗಳಿಂದಲೂ ಮಾಡಿಕೊಂಡೇ ಬಂದಿದ್ದಾರೆ. ಉದ್ಯೋಗದ ನಿಮಿತ್ತ ವಿದೇಶಕ್ಕೆ ತೆರಳಿದಾಗಲೂ ವರ್ಷಂಪ್ರತಿ ತನ್ನೂರಿಗೆ ಬಂದು ವಿವಿಧ ವೇಷತೊಟ್ಟು ಲಕ್ಷಾಂತರ ರೂಪಾಯಿ ಹಣ ಸಂಗ್ರಹ ಮಾಡಿ ಅಶಕ್ತರಿಗೆ ನೆರವಾಗುವ ಕಾರ್ಯವನ್ನು ಮಾಡಿದ್ದಾರೆ.

ಈ ಬಾರಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಫ್ರೆಂಡ್ಸ್ ಕಟಪಾಡಿ ಸಹಕಾರದೊಂದಿಗೆ ಆಗಸ್ಟ್‌ 30 ಮತ್ತು 31 ರಂದು ವಿಭಿನ್ನ ಶೈಲಿಯ ವೇಷತೊಟ್ಟು ಅನಾರೋಗ್ಯ ಪೀಡಿತರಿಗೆ ನೆರವಾಗಲು ಮುಂದಾಗಿದ್ದಾರೆ. ಈ ಬಾರಿ ರವಿ ಕಟಪಾಡಿ ಅವರು ಹಾಲಿವುಡ್ ಸಿನಿಮಾದ ಡಾರ್ಕ್ ಅಲೈಟ್ ವೇಷದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಆರು ವರ್ಷಗಳಿಂದ ಸುಮಾರು ರೂ 72 ಲಕ್ಷ ಹಣವನ್ನು ಸಂಗ್ರಹಿಸಿ ಸಾಮಾಜಿಕ ಸೇವೆಗೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಬಡವರು, ಅನಾರೋಗ್ಯ ಪೀಡಿತರು, ವಿಕಚೇತನರ ಬಾಳಿಗೆ ಬೆಳಕಾಗಿದ್ದಾರೆ. ರವಿ ಕಟಪಾಡಿ ಅವರ ಕಾರ್ಯಕ್ಕೆ ರವಿ ಫ್ರೆಂಡ್ಸ್ ಬಳಗ ಸಾಥ್‌ ಕೊಟ್ಟಿದೆ. ತಮಗೆ ಬಡತನವಿದ್ದರೂ ಕೂಡ ರವಿ ಕಟಪಾಡಿ ಸದಾ ಸಾಮಾಜಿಕ ತುಡಿತಕ್ಕೆ ಮಿಡಿಯುತ್ತಿದ್ದಾರೆ.

ಈ ಬಾರಿ ನಾಲ್ಕು ಬಡ ಮಕ್ಕಳ ಜೀವರಕ್ಷಣೆ ರವಿ ಕಟಪಾಡಿ ಡಾರ್ಕ್ ಅಲೈಟ್ ವೇಷ ತೊಡಲು ಸಿದ್ದರಾಗಿದ್ದಾರೆ. ರವಿ ಅವರ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಪ್ರಶಂಸೆ ವ್ಯಕ್ತವಾಗು ತ್ತಿದೆ. ಕಳೆದ ಬಾರಿ ಧನಸಹಾಯ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಮತ್ತೆ ಶ್ರೀಕೃಷ್ಣ ಜನ್ಮಾಷ್ಠಮಿ ಬಂದಿದ್ದು, ಅವಕಾಶ ನೀಡಿದ ಉಡುಪಿ ಜಿಲ್ಲಾಡಳಿತಕ್ಕೆ ರವಿ ಅವರು ಧನ್ಯವಾದ ಸಲ್ಲಿಸಿದ್ದಾರೆ. ಆಗಸ್ಟ್ 30 ಮತ್ತು 31 ರಂದು ಉಡುಪಿ, ಕಾಪು ಹಾಗೂ ಮಲ್ಪೆ ಭಾಗದಲ್ಲಿ ಧನಸಂಗ್ರಹ ಕಾರ್ಯ ನಡೆಯಲಿದೆ. ಸಂಗ್ರಹವಾಗುವ ಹಣವನ್ನು ಆರು ಮಕ್ಕಳ ಜೀವ ಉಳಿಸುವ ಕಾರ್ಯಕ್ಕೆ ವಿನಿಯೋಗವಾಗಲಿದೆ. ಹೀಗಾಗಿ ಸಾರ್ವಜನಿಕರು ಸಹಕಾರ ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಜ್ವರ, ಶೀತ, ಕೆಮ್ಮದ ಲಕ್ಷಣವಿದ್ರೆ ಕೊರೊನಾ ಟೆಸ್ಟ್‌ ಕಡ್ಡಾಯ : ಉಡುಪಿ ಡಿಸಿ

Comments are closed.