Spice Park : ಚಿಕ್ಕಮಗಳೂರಲ್ಲಿ ನಿರ್ಮಾಣವಾಗಲಿದೆ ಸಾಂಬಾರ್‌ ಪಾರ್ಕ್‌

ಚಿಕ್ಕಮಗಳೂರು: ಕಾಫಿನಾಡಿನ ಜನರ ದಶಕದ ಕನಸಾಗಿರುವ ಸಾಂಬಾರ್‌ ಪಾರ್ಕ್‌ (Spice Park ) ನನಸಾಗುವ ಕಾಲ ಸನ್ನಿಹಿತವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಹೊಸಕೋಟೆ ಸಮೀಪದ ಅಂಬಾಲಿ ಗ್ರಾಮದಲ್ಲಿ ಸುಮಾರು 10 ಎಕರೆ ಸಾಂಬಾರ್‌ ಪಾರ್ಕ್‌ ತಲೆ ಎತ್ತಲಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಪೈಸ್‌ ಪಾರ್ಕ್‌ ನಿರ್ಮಾಣದ ಕುರಿತು ಕೇಂದ್ರ ಕೃಷಿ ಸಚಿವೆಯಾಗಿರುವ ಶೋಭಾ ಕರಂದ್ಲಾಜೆ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಜೊತೆ ಸಭೆ ನಡೆಸಿದ್ದು, ಸಾಂಬಾರ ಪಾರ್ಕ್‌ ನಿರ್ಮಾಣದ ಕುರಿತು ಒಮ್ಮತದ ತೀರ್ಮಾನವನ್ನು ಕೈಗೊಂಡಿದ್ದಾರೆ.

ಸಾಂಬಾರ್‌ ಪಾರ್ಕ್‌ ನಿರ್ಮಾಣಕ್ಕೆ ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲೆಯ ಹೊಸಕೋಟೆ ಸಮೀಪದ ಅಂಬಾಲಿ ಗ್ರಾಮದಲ್ಲಿ ಸುಮಾರು 10 ಎಕರೆ ಜಮೀನನ್ನು ಗುರುತಿಸ ಲಾಗಿದ್ದು, ಮಂಜೂರು ಮಾಡಲಾಗಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮ(ಕೆಐಎಡಿಬಿ) ಸುಮಾರು 20.35 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಿದೆ.

ಈಗಾಗಲೇ ಕಾಫಿ ಉದ್ಯಮದ ಮೂಲಕ ದೇಶ, ವಿದೇಶಗಳಲ್ಲಿಯೂ ಪ್ರಖ್ಯಾತಿಯನ್ನು ಪಡೆದುಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯಲ್ಲ ಸಾಂಬಾರ್‌ ಪಾರ್ಕ್‌ ನಿರ್ಮಾಣವಾದ್ರೆ, ರೈತರ ಬೆಳೆದ ಬೆಳೆಗಳಿಗೆ ಇನ್ನಷ್ಟು ಉತ್ತೇಜನ ದೊರೆಯಲಿದೆ.

ಇದನ್ನೂ ಓದಿ : ಭರ್ಜರಿ ಏರಿಕೆ ಕಂಡ ಅಡಿಕೆ ಬೆಲೆ ! ಬೆಳೆಗಾರರು ಪುಲ್‌ ಖುಷ್‌

ಇದನ್ನೂ ಓದಿ : ಎರಡು ವರ್ಷ ಹಡಿಲುಬಿಟ್ಟ ಕೃಷಿ‌ಭೂಮಿ ಸರಕಾರದ ಸುಪರ್ದಿಗೆ : ಜಿಲ್ಲಾಧಿಕಾರಿ ಜಗದೀಶ್

(Spice Park will be built in chikkamagalore near Hosakote Ambali Village)

Comments are closed.