ಮಂಗಳೂರು : ದೂರು ನೀಡಲು ಬಂದಿದ್ದ ಬಾಲಕಿಯಿಂದ ಮೊಬೈಲ್ ನಂಬರ್ ಪಡೆದು ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಓರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.
ಮಂಗಳೂರು ನಗರ ಪೊಲೀಸ್ ಠಾಣೆಯ ಸುನಿಲ್ ಬಂಧನಕ್ಕೆ ಒಳಗಾದ ಪೊಲೀಸ್ ಹೆಡ್‌ಕಾನ್ಸ್‌ಸ್ಟೇಬಲ್. ಕಳೆದ ಜನವರಿ ತಿಂಗಳಿನಲ್ಲಿಆಟೋ ಚಾಲಕನೋರ್ವ ಚುಡಾಯಿಸಿದ ಹಿನ್ನೆಲೆಯಲ್ಲಿ ದೂರು ನೀಡಲು 17 ವರ್ಷದ ಬಾಲಕಿ ಠಾಣೆಗೆ ತೆರಳಿದ್ದರು. ಈ ವೇಳೆಯಲ್ಲಿ ಬಾಲಕಿಯ ಮೊಬೈಲ್ ನಂಬರ್ ಪಡೆದಿದ್ದ ಸುನಿಲ್ ನಂತರದಲ್ಲಿ ಬಾಲಕಿಗೆ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದ ಎಂದು ಬಾಲಕಿ ಆರೋಪಿಸಿದ್ದಾಳೆ.
ಇದನ್ನೂ ಓದಿ : ಸೊಸೆಯೊಂದಿಗೆ ಸೆಕ್ಸ್‌ಗೆ ಮಾವನ ಒತ್ತಡ, ಪತಿಯಿಂದಲೂ ಕಿರುಕುಳ
ಅಷ್ಟೇ ಅಲ್ಲದೇ ಒಬ್ಬಳೇ ಮನೆಗೆ ಬಾ ಎಂದು ಬಾಲಕಿಯನ್ನು ಕರೆಯುತ್ತಿದ್ದ ಎಂದು ಆರೋಪಿಸಲಾಗಿದ್ದು, ಬಾಲಕಿಯ ಹೇಳಿಕೆಯ ಆಧಾರದ ಮೇಲೆ ಪೋಷಕರು ಇದೀಗ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಕುಟುಂಬ ಸಮೇತರಾಗಿ ಬಂದು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುನಿಲ್ ವಿರುದ್ದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ಸುನಿಲ್‌ನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ : ಮಂಗಳೂರು : ಕಾರಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ : ಕೊಲೆ ಬೆದರಿಕೆಯೊಡ್ಡಿದ್ದ ವ್ಯಕ್ತಿಯ ಬಂಧನ