Terrorist activity of PFI: ದಕ್ಷಿಣ ಕನ್ನಡದ ಈ ಪ್ರದೇಶದಲ್ಲಿ ನಡೆಯುತ್ತಿತ್ತು ಪಿಎಫ್​ಐನ ಭಯೋತ್ಪಾದಕ ಚಟುವಟಿಕೆ:ತ ನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಮಂಗಳೂರು : Terrorist activity of PFI: :ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಬ್ಯಾನ್ ಏನೋ ಆಗಿದೆ. ಇದೀಗ ಪಿಎಫ್ಐ ಸಂಘಟನೆಯ ಟೆರರ್ ಆಕ್ಟಿವಿಟೀಸ್‌ನ ಒಂದೊಂದೆ ಸ್ಫೋಟಕ ಮಾಹಿತಿಗಳು ಹೊರ ಬರುತ್ತಿದೆ. ರಾಜ್ಯ ಕರಾವಳಿಯಲ್ಲಿ ಅತಿ ಹೆಚ್ಚು ಆ್ಯಕ್ಟೀವ್ ಆಗಿದ್ದ ಈ ಪಿಎಫ್ಐ ಸಂಘಟನೆ ಹಾಲ್ ಒಂದನ್ನು ದೇಶ ವಿರೋಧಿ ಕೃತ್ಯಕ್ಕೆ ಬಳಸಿಕೊಂಡಿತ್ತು ಎಂಬುದು ಗೊತ್ತಾಗಿದೆ.

ಹೌದು..ಕೇಂದ್ರ ಸರ್ಕಾರ ಬ್ಯಾನ್ ಮಾಡಿರುವ ಪಿ.ಎಫ್.ಐ ಸಂಘಟನೆ ರಾಜ್ಯದ ಕರಾವಳಿಯಲ್ಲಿ ಅತೀ ಹೆಚ್ಚು ಆ್ಯಕ್ಟೀವ್ ಆಗಿತ್ತು. ರಾಜ್ಯ ಪಿ.ಎಫ್.ಐ ನಾಯಕರಲ್ಲಿ ಹೆಚ್ಚಿನ ಮಂದಿ ಕರಾವಳಿಯವರೇ ಆಗಿದ್ದರು. ಇದೀಗ ಸಂಘಟನೆ ಬ್ಯಾನ್ ಆದ ಬಳಿಕ ಕರಾವಳಿಯಲ್ಲಿ ಪಿಎಫ್ಐ ಬೇರಿನ ಆಳ ಅಗಲ ಒಂದೊಂದೆ ಹೊರ ಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಕಡೆ ಪಿ.ಎಫ್.ಐನ ಉಗ್ರಚಟುವಟಿಕೆಗಳಿಗೆ ತರಬೇತಿ ನಡೆಯುತಿತ್ತು ಎಂದು ಗೊತ್ತಾಗಿದೆ. ಬಂಟ್ವಾಳ ತಾಲೂಕಿನ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯುನಿಟಿ ಹಾಲ್‌ನಲ್ಲಿಯೂ ಸಾಕಷ್ಟು ಯುವಕರಿಗೆ ಉಗ್ರ ತರಬೇತಿ ನೀಡಲಾಗುತಿತ್ತು ಎಂಬ ಮಾಹಿತಿ ಎನ್.ಐ.ಎ ತನಿಖೆಯಲ್ಲಿ ತಿಳಿದುಬಂದಿದೆ. ಟ್ರಸ್ಟ್ ಹೆಸರಿನಲ್ಲಿ 2007ರಲ್ಲಿ ಆರಂಭಗೊಂಡಿದ್ದ ಈ ಹಾಲ್‌ನಲ್ಲಿ ಈವರೆಗೂ ಸಾವಿರಾರು ಯುವಕರಿಗೆ ಟ್ರೈನಿಂಗ್ ನಡೆದಿದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರು ಕೂಡ ಇಲ್ಲೇ ತರಬೇತಿ ಆಗಿದ್ದು, ಹೀಗಾಗಿ ಎನ್ಐಎ ಈ ಹಾಲ್‌ಗೆ ದಾಳಿ ಮಾಡಿ ಟ್ರಸ್ಟಿ ಓರ್ವನನ್ನು ಬಂಧಿಸಿದೆ. ಮತ್ತಿಬ್ಬರು ಟ್ರಸ್ಟಿಗಳು ನಾಪತ್ತೆಯಾಗಿದ್ದು ಸ್ಥಳೀಯ ಪೊಲೀಸರ ಸಹಕಾರ ಪಡೆದು ತಲಾಷ್ ನಡೆಸಲಾಗುತ್ತಿದೆ.

ಇತ್ತಿಚೇಗೆ ಹತ್ಯೆಯಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಹಂತಕರು ಸಹ ಇದೇ ಹಾಲ್‌ನಲ್ಲಿ ತರಬೇತಿ ಪಡೆದಿದ್ದರು ಎಂಬ ಮಾಹಿತಿ ಎನ್.ಐ.ಎಗೆ ತನಿಖೆ ಸಂದರ್ಭ ಗೊತ್ತಾಗಿತ್ತು. ಹೀಗಾಗಿ ಈ ಹಿಂದೆಯೆ ಹಾಲ್‌ಗೆ ದಾಳಿ ನಡೆಸಿ ಮಾಹಿತಿ ಕಲೆ ಹಾಕುವ ಕಾರ್ಯ ಮಾಡಿತ್ತು. ಇನ್ನು ಆರ್​​ಎಸ್​ಎಸ್​ ಮುಖಂಡ ಶರತ್ ಮಡಿವಾಳ ಹಂತಕರು ಕೂಡ ಇಲ್ಲೇ ಟ್ರೈನಿಂಗ್ ಆಗಿದ್ದರು. ಇದೇ ಹಾಲ್‌ನಲ್ಲಿ ಮೀಟಿಂಗ್ ಮಾಡಿ ಹತ್ಯೆಗೆ ಪ್ಲಾನ್ ರೂಪಿಸಿದ್ದರು ಎಂಬ ಹಳೇ ಸತ್ಯ ಈಗ ಹೊರ ಬರುತ್ತಿದೆ. ಪಿಎಫ್ಐ ಈ ಹಾಲ್‌ನ್ನು ಸಮಾಜ ವಿರೋಧಿ ಕಾರ್ಯಗಳ ಅಡ್ಡೆಯಾಗಿ ಪರಿವರ್ತಿಸುದರ ಜೊತೆಗೆ ಸಮಾಜಮುಖಿ ಕಾರ್ಯದ ಮುಖವಾಡವನ್ನು ಹಾಕಿಕೊಳ್ಳುತಿತ್ತು. ಪಿಎಫ್ಐ, ಸಿಎಫ್ಐನ ಹಲವಾರು ಕಾರ್ಯಕ್ರಮಗಳಿಗೆ ಈ ಹಾಲ್ ವೇದಿಕೆಯಾಗಿತ್ತು. ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್, ವನಮಹೋತ್ಸವದಂಥ ಕಾರ್ಯಕ್ರಮ, ಮಕ್ಕಳ ಬೇಸಿಗೆ ಶಿಬಿರದ ಕಾರ್ಯಕ್ರಮವು ನಡೆಯುತಿತ್ತು.

ದೇಶ ವಿರೋಧಿ ಚಟುವಟಿಕೆಗಳ ಅಡ್ಡೆಯಾಗಿದ್ದ ಫ್ರೀಡಂ ಕಮ್ಯೂನಿಟಿ ಹಾಲ್‌ನಲ್ಲಿ ಗೌಪ್ಯ ಸಭೆಗಳು, ‌ತರಬೇತಿಗಳು ನಡೆಯುತಿತ್ತು. ಸ್ಥಳೀಯರು ಈ ಹಿಂದೆಯೇ ಹಾಲ್‌ನ ಕಾರ್ಯಚಟುವಟಿಕೆಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಇದೀಗ ಈ ಸಂಶಯಗಳೆಲ್ಲವೂ ರುಜುವಾತು ಆಗುತಿದ್ದು ಸದ್ಯದಲ್ಲೇ ಹಾಲ್‌ನ್ನು ಸೀಝ್ ಮಾಡುವ ಸಾಧ್ಯತೆ ಇದೆ.

ಇದನ್ನು ಓದಿ : Eshwarappa :‘ಸಾಯುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ,ಸಿದ್ದರಾಮಯ್ಯರಂತೆ ಪಕ್ಷಾಂತರಿ ನಾನಲ್ಲ’ : ಈಶ್ವರಪ್ಪ ಗುಡುಗು

ಇದನ್ನೂ ಓದಿ : Fans angry on Bumrah: “ಐಪಿಎಲ್’ಗೆ ಸದಾ ರೆಡಿ.. ವಿಶ್ವಕಪ್ ಬಂದ್ರೆ ಹೊರ ನಡಿ ; ಬುಮ್ರಾ ವಿರುದ್ಧ ಕ್ರಿಕೆಟ್ ಪ್ರಿಯರು ಫುಲ್ ಗರಂ

Terrorist activity of PFI was going on in this area of ​​Dakshina Kannada: Explosive information revealed in the investigation

Comments are closed.