Mysore Dussehra : ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ

ಮೈಸೂರು : Mysore Dussehra cultural events : ವಿಶ್ವ ವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಯುವ ದಸರಾ ಕಾರ್ಯಕ್ರಮ ನಡೆಯುತ್ತಿದೆ. ಇಂದು ಮಹಾರಾಜ ಕಾಲೇಜು ಮೈದಾನದಲ್ಲಿ ಸ್ಯಾಂಡಲ್ ವುಡ್ ನೈಟ್ ಕಾರ್ಯಕ್ರಮ ನಡೆಯಿತು. ಸುಮಾರು 20ಕ್ಕೂ ಹೆಚ್ಚು ನಟ ನಟಿಯರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಟ ಉಪೇಂದ್ರ, ಪ್ರಜ್ವಲ್ ದೇವರಾಜ್, ಧನ್ವೀರ್, ಧೀರೆನ್ ರಾಂಮ್, ಡಾರ್ಲಿಂಗ್ ಕೃಷ್ಣ ಸೇರಿದಂತೆ ಹಲವರು ಆಗಮಿಸಿದ್ದರು. ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಮುಕುಂದ ಮುರಾರಿ ಹಾಡು ಹಾಡುವ ಮೂಲಕ ಸಾಧು ಕಾರ್ಯಕ್ರಮ ಆರಂಭಿಸಿದರು. ಸಾಧು ಕೋಕಿಲ ಸಂಗೀತಕ್ಕೆ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಹೊಡೆದರು. ಸ್ಯಾಂಡಲ್ ವುಡ್ ನೈಟ್ ಕಿಕ್ಕಿರಿದು ಜನ ಸೇರಿದ್ದರು.

ಯುವ ದಸರಾ ಸ್ಯಾಂಡಲ್ ವುಡ್ ನೈಟ್ ಕಾರ್ಯಕ್ರಮದಲ್ಲಿ ಪುನೀತ್ ಸ್ಮರಣೆ ಮಾಡಲಾಯಿತು. ಈ ಸಂದರ್ಭ ಪುನೀತ್ ರಾಜ್ ಕುಮಾರ್ ನೆನೆದು ನಟ ಸಾಧುಕೋಕಿಲ ಭಾವುಕರಾದರು. ಅಪ್ಪು ನೆನಪು ಬಂದ್ರೆ ಅವರ ಚಿಕ್ಕವಯಸ್ಸಿನ ಫೋಟೊ ನೋಡ್ತಿನಿ. ಅವರು ಎಲ್ಲೂ ಹೋಗಿಲ್ಲ, ನಮ್ಮ ಜೊತೆಯಲ್ಲೇ ಇದಾರೆ‌ ಎಂದು ಪುನೀತ್ ಸ್ಮರಿಸಿ ಸಾಧುಕೋಕಿಲ ಹಾಡು ಹಾಡಿದರು. ಮೊಬೈಲ್ ಟಾರ್ಚ್ ಆನ್ ಮಾಡಿ ಜನಸಮೂಹ ಪುನೀತ್ ಗೆ ಗೌರವ ಸಲ್ಲಿಸಿದರು.

ಇನ್ನು ಇಂದು ಅರಮನೆಯ ಓಪನ್ ವೇದಿಕೆಯಲ್ಲಿ ನಡೆಯುತ್ತಿದ್ದ ಸಾಂಸ್ಕತಿಕ ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಯಿತು. ಕಾರ್ಯಕ್ರಮ ಆರಂಭವಾದ ಅರ್ಧಗಂಟೆಯಲ್ಲೆ ಮಳೆ ಆರಂಭವಾಯಿತು. ಮಳೆ ಬರ್ತಿದ್ದಂತೆ ಕಾರ್ಯಕ್ರಮದ ಸ್ಥಳದಿಂದ ಜನ ಎದ್ದು ಹೋದರು. ಮತ್ತೆ ಕೆಲವರು ಕೊಡೆ ಹಿಡಿದು ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡಿದರು. ಇನ್ನು ಕೆಲವರು ಮಳೆಯಿಂದ ರಕ್ಷಣೆಗೆ ತಲೆ ಮೇಲೆ ಚೇರ್ ಹೊತ್ತು ಕುಳಿತು ಕಾರ್ಯಕ್ರಮ ವೀಕ್ಷಿಸಿದರು. ಮಳೆ‌ ಹನಿ ನಡುವೆಯೇ ಒಡೆಯರ್ ಕೃತಿಗಳ ಗಾನ ವಾದ್ಯವನ್ನು ಡಾ.ಸುಕನ್ಯಾ ಪ್ರಭಾಕರ್ ತಂಡ ನಡೆಸಿಕೊಟ್ಟಿತು.

ಇದಕ್ಕೂ ಮುನ್ನ ಮೈಸೂರಿನ ಅರಮನೆ ಆವರಣದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ-2022 ಕಾರ್ಯಕ್ರಮ ನಡೆಯಿತು. ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು. ಇದೇ ಸಂದರ್ಭ 10 ಮಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರಧಾನ ಮಾಡಲಾಯಿತು. ವಿಶೇಷ ಅಂದ್ರೆ ಈ ಬಾರಿ ಮೈಸೂರಿನ ಶಕ್ತಿಧಾಮಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಗರಿ ಲಭಿಸಿದೆ. ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ರಿಂದ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಸಿಕೊಟ್ಟರು. ಶಕ್ತಿಧಾಮದ ಟ್ರಸ್ಟಿ ಸುಮನ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನು ಸ್ವೀಕಾರ ಮಾಡಿದರು.

ಇದನ್ನು ಓದಿ : Fans angry on Bumrah: “ಐಪಿಎಲ್’ಗೆ ಸದಾ ರೆಡಿ.. ವಿಶ್ವಕಪ್ ಬಂದ್ರೆ ಹೊರ ನಡಿ ; ಬುಮ್ರಾ ವಿರುದ್ಧ ಕ್ರಿಕೆಟ್ ಪ್ರಿಯರು ಫುಲ್ ಗರಂ

ಇದನ್ನೂ ಓದಿ : Terrorist activity of PFI:ದಕ್ಷಿಣ ಕನ್ನಡದ ಈ ಪ್ರದೇಶದಲ್ಲಿ ನಡೆಯುತ್ತಿತ್ತು ಪಿಎಫ್​ಐನ ಭಯೋತ್ಪಾದಕ ಚಟುವಟಿಕೆ:ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

A splendor of cultural events at the world famous Mysore Dussehra

Comments are closed.