CC camera Accident : ಉಕ್ಕಿ ಹರಿಯುತ್ತಿರುವ ನದಿಗೆ ಹಾರಿದ ಕಾರು : ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಮಂಗಳೂರು : ಉಕ್ಕಿ ಹರಿಯುತ್ತಿರುವ ಹೊಳೆ ( ನದಿ)ಗೆ ಕಾರೊಂದು ಹಾರಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಾಣಿಯೂರು ಸಮೀಪದ ಮಂಜೇಶ್ವರ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ವೇಗವಾಗಿ ಬಂದ ಕಾರು ಹೊಳೆಗೆ ಹಾರುತ್ತಿರುವ ದೃಶ್ಯ ಇದೀಗ ಸಿಸಿ ಕ್ಯಾಮರಾದಲ್ಲಿ (CC camera Accident) ಸರೆಯಾಗಿದೆ.

The car jumped into the overflowing river, a terrible scene was captured on the CC camera Accident

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದಲೂ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಹೊಳೆ, ನದಿಗಳೆಲ್ಲಾ ಉಕ್ಕಿ ಹರಿಯುತ್ತಿದೆ. ಭಾರೀ ಮಳೆಯ ನಡುವಲ್ಲೇ ವೇಗವಾಗಿ ಬರುತ್ತಿದ್ದ ಕಾರು ಕಾಣಿಯೂರು ಬಳಿಯಲ್ಲಿ ಹೊಳೆಗೆ ಹಾರಿದೆ. ಕಾರಿನಲ್ಲಿದ್ದವರು ನೀರು ಪಾಲಾಗಿರುವ ಸಾಧ್ಯತೆಯಿದೆ.

The car jumped into the overflowing river, a terrible scene was captured on the CC camera Accident

ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ. ಅಪಘಾತದ ವೇಗಕ್ಕೆ ಸೇತುವೆಯ ತಡೆಬೇಲಿ ಸಂಪೂರ್ಣ ಜಖಂ ಆಗಿದೆ. ರಸ್ತೆಯ ಪಕ್ಕದಲ್ಲಿ ಅಳವಡಿಸಲಾಗಿದ್ದ ಮೂರು ಕಂಬಗಳು ಮುರಿದು ಹೋಗಿದೆ. ಕಾರಿನಲ್ಲಿದ್ದವರು ಸದ್ಯ ನಾಪತ್ತೆಯಾಗಿದ್ದಾರೆ. ಕಾರಿನ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಸಿಸಿ ಕ್ಯಾಮರಾ ದೃಶ್ಯಾವಳಿಗಳು ಜನರನ್ನು ಬೆಚ್ಚಿ ಬೀಳಿಸಿದೆ. ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌.

ಇದನ್ನೂ ಓದಿ : Vishala Ganiga murder case : ವಿಶಾಲ ಗಾಣಿಗ ಕೊಲೆ ಪ್ರಕರಣ : ಸುಪಾರಿ ಕಿಲ್ಲರ್‌ ಕೊನೆಗೂ ಅರೆಸ್ಟ್‌, ಆರೋಪಿ ಬಂಧನದ ಹಿಂದಿದೆ ರೋಚಕ ಸ್ಟೋರಿ

ಇದನ್ನೂ ಓದಿ : Sri Lanka crisis : ಶ್ರೀಲಂಕಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನಿರ್ಣಯ ಘೋಷಿಸಿದ ರನಿಲ್​ ವಿಕ್ರಮ್​ಸಿಂಘೆ

The car jumped into the overflowing river, a terrible scene was captured on the CC camera Accident

Comments are closed.