Three from Mangalore died: ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ: ಮಂಗಳೂರು ಮೂಲದ ಮೂವರು ಸಾವು

ಸೌದಿ ಅರೇಬಿಯಾ: (Three from Mangalore died) ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸಾವನ್ನಪ್ಪಿರುವ ಘಟನೆ ಸೌದಿ ಅರೇಬಿಯಾದ ರಿಯಾದಿನ ಖುರೈಸ್‌ ರಸ್ತೆಯ ಬಳಿ ನಡೆದಿದೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಾಂಗ್ಲಾದೇಶ ಮೂಲದ ಇನ್ನೋರ್ವ ಯುವಕ ಕೂಡ ಘಟನೆಯಲ್ಲಿ ಮೃತಪಟ್ಟಿದ್ದಾನೆ.

ಹಳೆಯಂಗಡಿಯ ಕದಿಕೆ ನಿವಾಸಿ ರಿಝ್ವಾನ್‌, ಅಕೀಲ್‌, ನಾಸಿರ್‌ ಹಾಗೂ ಶಿಹಾಬ್‌ ನಾಲ್ವರು ಮೃತಪಟ್ಟವರು. ನಾಲ್ವರು ಕಾರಿನಲ್ಲಿ ತೆರಳುತ್ತಿದ್ದಾಗ ಖುರೈಸ್‌ ರಸ್ತೆಯ ಬಳಿ ಒಂಟೆಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಯುವಕರು ಎಸ್‌ಎಕ್ಯೂಸಿಒ ಕಂಪನಿಯಲ್ಲಿ ನೌಕರರಾಗಿದ್ದರು ಎನ್ನಲಾಗಿದೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ಓರ್ವ ಬಾಂಗ್ಲಾದೇಶದ ಯುವಕ ಕೂಡ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಅಕೀಲ್‌ ಮಂಗಳೂರಿನ ಬೋಳಾರ್‌ ನಿವಾಸಿಯಾಗಿದ್ದು, ರಿಝ್ವಾನ್‌ ಹಳೆಯಂಗಡಿಯ ಕದಿಕೆ ನಿವಾಸಿ ಎಂದು ತಿಳಿದುಬಂದಿದೆ. ಮೃತದೇಹಗಳನ್ನು ಅಲ್‌ ಹಸ್ಸಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸಂತ್ರಸ್ತ ಕುಟುಂಬವನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ. ಇನ್ನೂ ಕದಿಕೆ ನಿವಾಸಿ ರಿಝ್ವಾನ್‌ ನಾಲ್ಕು ತಿಂಗಳ ಹಿಂದೆಯಷ್ಟೇ ಉದ್ಯೋಗದ ನಿಮಿತ್ತ ಸೌದಿ ಅರೆಬಿಯಾಕ್ಕೆ ತೆರಳಿದ್ದರು.

ಇದನ್ನೂ ಓದಿ : Mangalore car accident case: ಮಂಗಳೂರು ಕಾರು ಅಪಘಾತ ಪ್ರಕರಣ: ತುಳು ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಅರೆಸ್ಟ್‌

ಮಂಗಳೂರು ಕಾರು ಅಪಘಾತ ಪ್ರಕರಣ: ತುಳು ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಅರೆಸ್ಟ್‌

ಮುಲ್ಕಿ: ಪಡುಪಣಂಬೂರು ಪೆಟ್ರೋಲ್‌ ಬಂಕ್‌ ಬಳಿ ಮಂಗಳವಾರ ಮಧ್ಯರಾತ್ರಿ ನಡೆದ ಕಾರು ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಟ್ರಾಫಿಕ್‌ ಪೊಲೀಸರು ಕಾರು ಸಮೇತ ಚಾಲಕನನ್ನು ಬಂಧಿಸಿದ್ದಾರೆ.

ಆರೋಪಿ ಕಾರು ಚಾಲಕನನ್ನು ಹಳೆಯಂಗಡಿ ಇಂದ್ರನಗರದ ನಿವಾಸಿ ಅರ್ಪಿತ್‌ ಎಂದು ಗುರುತಿಸಲಾಗಿದ್ದು, ಈತನನ್ನು ತುಳು ಸ್ಟ್ಯಾಂಡ್‌ ಅಪ್‌ ಕಾಮಿಡಿ ಯೂಟ್ಯೂಬರ್‌ ಎಂದು ತಿಳಿದು ಬಂದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗದಿಂದ ಕಾರನ್ನು ಚಲಾಯಿಸಿ ಟಯರ್‌ ದುರಸ್ತಿ ಮಾಡುತ್ತಿದ್ದ ಮೂವರಿಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದರು. ಇದೀಗ ಘಟನೆಗೆ ಸಂಬಂಧಿಸಿದ ಆರೋಪಿಯನ್ನು ತುಳುವಿನ ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಅರ್ಪಿತ್‌ ಎನ್ನುವವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ : Bank fraud case: ಬ್ಯಾಂಕ್‌ ಅಧಿಕಾರಿ ಎಂದು ನಂಬಿಸಿ ಹಣ ವಂಚನೆ: ಪ್ರಕರಣ ದಾಖಲು

Three from Mangalore died: Terrible accident in Saudi Arabia: Three from Mangalore died

Comments are closed.