tollgate virodhi horata :ಸುರತ್ಕಲ್​ ಟೋಲ್​ ತೆರವು ವಿವಾದ : ಪ್ರತಿಭಟನಾಕಾರರು ಖಾಕಿ ವಶಕ್ಕೆ

ಮಂಗಳೂರು (kannada.newsnext.live/) : tollgate virodhi horata : ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್​ನಲ್ಲಿ ಟೋಲ್​ ಗೇಟ್​ ವಿವಾದ ತಾರಕಕ್ಕೇರಿದೆ. ಟೋಲ್​ ಗೇಟ್​ ತೆರವು ಕಾರ್ಯಾಚರಣೆ ಮಾಡಲು ಮುಂದಾದ ಟೋಲ್​ ವಿರೋಧಿ ಹೋರಾಟ ಸಮಿತಿ ಸದಸ್ಯರನ್ನು ಸುರತ್ಕಲ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಪೊಲೀಸರ ಅನುಮತಿ ಪಡೆದು ಶಾಂತಿಯುತ ಹೋರಾಟ ನಡೆಸುತ್ತಿದ್ದ ಟೋಲ್​ ವಿರೋಧಿ ಹೋರಾಟ ಸಮಿತಿ ಸದಸ್ಯರು ಏಕಾಏಕಿ ಸುರತ್ಕಲ್ ಎನ್‌ಐಟಿಕೆ ಟೋಲ್ ಪ್ಲಾಝಾದಲ್ಲಿ ಟೋಲ್​ ಸಿಬ್ಬಂದಿ ಕೂತಿದ್ದ ಜಾಗಕ್ಕೆ ಮುತ್ತಿಗೆ ಹಾಕಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.

ಏನಿದು ಸುರತ್ಕಲ್ ಟೋಲ್​ ವಿವಾದ..?
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದ ಪ್ರಕಾರ ಅರವತ್ತು ಕಿಲೋಮೀಟರ್​ ಅಂತರದಲ್ಲಿ ಒಂದಕ್ಕಿಂತ ಹೆಚ್ಚು ಟೋಲ್​ ನಿರ್ಮಿಸಬಾರದು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಈ ನಿಯಮವನ್ನು ಗಾಳಿಗೆ ತೂರಲಾಗಿದೆ. ಇಲ್ಲಿ 48 ಕಿಲೋಮೀಟರ್​ ಅಂತರದಲ್ಲಿ ನಾಲ್ಕು ಟೋಲ್​ಗೇಟ್​ಗಳ ನಿರ್ಮಾಣವಾಗಿದೆ. ಹೀಗಾಗಿ ಸುರತ್ಕಲ್​ ಟೋಲ್ ಗೇಟ್​​ನ್ನು ತೆರವುಗೊಳಿಸುವ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮವನ್ನು ಪಾಲಿಸಬೇಕು ಎನ್ನವುದು ದಕ್ಷಿಣ ಕನ್ನಡ ಜಿಲ್ಲಾ ಜನತೆಯ ಒತ್ತಾಯವಾಗಿದೆ.

ಆರು ವರ್ಷದ ಹಿಂದೆ ಸುರತ್ಕಲ್​ ಟೋಲ್​ ಪ್ಲಾಝಾವನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿತ್ತು. ಹೆಜಮಾಡಿ ಟೋಲ್‌ಗೇಟ್‌ ಕಾರ್ಯನಿರ್ವಹಿಸಲು ಆರಂಭಿಸಿದ ಬಳಿಕ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಸುರತ್ಕಲ್​ ಟೋಲ್​ ಪ್ಲಾಝಾವನ್ನು ಬಂದ್​ ಮಾಡಬೇಕಿತ್ತು. ಆದರೆ ತಾತ್ಕಾಲಿಕ ಎಂದು ಹೇಳಲಾದ ಸುರತ್ಕಲ್​ನ ಟೋಲ್​ ಪ್ಲಾಝಾವನ್ನು ಬಂದ್​ ಮಾಡಿಸಿಲ್ಲ. ಇದು ಇಲ್ಲಿನ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

https://www.youtube.com/watch?v=ElTgZxu71hg&t=10s


ಸುರತ್ಕಲ್​​ ಟೋಲ್​ ಪ್ಲಾಜಾವನ್ನು ಬಂದ್​ ಮಾಡಬೇಕೆಂದು ಸ್ಥಳೀಯ ಶಾಸಕರು ಹಾಗೂ ಸಂಸದರಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿತ್ತು. ಈ ವೇಳೆ ಶಾಸಕರು ಹಾಗೂ ಸಂಸದರೂ ಕೂಡ ಟೋಲ್​ ಬಂದ್​ ಮಾಡುವ ಭರವಸೆ ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇಂದು ಸ್ವಯಂಪ್ರೇರಿತ ಟೋಲ್​ ತೆರವು ಕಾರ್ಯಕ್ಕೆ ಇಲ್ಲಿನ ಜನತೆ ಮುಂದಾಗಿದ್ದಾರೆ.

ಇದನ್ನು ಓದಿ : Diwali Bonus For Central Govt Employees : ದೀಪಾವಳಿಯ ಗಿಫ್ಟ್ : ಸರಕಾರಿ ನೌಕರರ ತುಟ್ಟಿಭತ್ಯೆ ಶೇ.38ಕ್ಕೆ ಏರಿಕೆ

ಇದನ್ನೂ ಓದಿ : Jayalalitha Death Case : ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸಾವಿನಗೆ ಶಶಿಕಲಾ ಕಾರಣ : 4 ಮಂದಿ ವಿರುದ್ದ ತನಿಖೆಗೆ ಆದೇಶ

tollgate virodhi horata samithi members were taken into custody by the police

Comments are closed.