Virat Kohli Pakistan Players : ಪಾಕಿಸ್ತಾನ ಆಟಗಾರರೊಂದಿಗೆ ವಿರಾಟ್ ಕೊಹ್ಲಿ ನೆಟ್ ಪ್ರಾಕ್ಟೀಸ್

ಬ್ರಿಸ್ಬೇನ್: ಟಿ20 ವಿಶ್ವಕಪ್’ಗೆ ಸಜ್ಜಾಗುತ್ತಿರುವ (T20 World Cup 2022) ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli), ಆಸ್ಟ್ರೇಲಿಯಾದ ಬ್ರಿಸ್ಬೇನ್ ’ನಲ್ಲಿರುವ ಗಾಬಾ ಮೈದಾನದಲ್ಲಿ ಪಾಕಿಸ್ತಾನ ತಂಡದ ಆಟಗಾರರ ಜೊತೆ ನೆಟ್ ಪ್ರಾಕ್ಟೀಸ್ ನಡೆಸಿ (Virat Kohli Pakistan Players) ಸುದ್ದಿಯಾಗಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಗಾಬಾ ಮೈದಾನದಲ್ಲಿ ಸೋಮವಾರ ನಡೆದ ಮೊದಲ ಅಭ್ಯಾಸ ಪಂದ್ಯ ಮುಗಿದ ಬೆನ್ನಲ್ಲೇ ಕಿಂಗ್ ಕೊಹ್ಲಿ ನೆಟ್ ಪ್ರಾಕ್ಟೀಸ್’ಗೆ ಆಗಮಿಸಿದರು. ಈ ವೇಳೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಮತ್ತು ಉಪನಾಯಕ ಮೊಹಮ್ಮದ್ ರಿಜ್ವಾನ್ ಅದೇ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದರು. ಬಾಬರ್ ಮತ್ತು ರಿಜ್ವಾನ್ ಅಭ್ಯಾಸ ನಡೆಸುತ್ತಿದ್ದ ಪಕ್ಕದ ನೆಟ್ಸ್’ನಲ್ಲೇ ವಿರಾಟ್ ಕೊಹ್ಲಿ ಕೂಡ 40 ನಿಮಿಷಗಳ ಕಾಲ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಮುಖ್ಯವಾಗಿ ಶಾರ್ಟ್ ಪಿಚ್ ಎಸೆತಗಳ ಮುಂದೆ ಕೊಹ್ಲಿ ತಾಲೀಮು ನಡೆಸಿದರು. ಕಿಂಗ್ ಕೊಹ್ಲಿ, ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಒಟ್ಟೊಟ್ಟಿಗೇ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ಅಪರೂಪದ ವೀಡಿಯೊ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://twitter.com/Babar4life/status/1582001620346626048?s=20&t=RsOuZvTwr_OF7qxH7JrAaQ

ಸೋಮವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ 6 ರನ್’ಗಳ ರೋಚಕ ಗೆಲುವು ಸಾಧಿಸಿತ್ತು. ಬ್ಯಾಟಿಂಗ್’ನಲ್ಲಿ ವಿಫಲರಾಗಿದ್ದ ಕೊಹ್ಲಿ 13 ಎಸೆತಗಳಲ್ಲಿ 19 ರನ್ ಗಳಿಸಿ ಔಟಾಗಿದ್ದರು. ಆದರೆ ಫೀಲ್ಡಿಂಗ್’ನಲ್ಲಿ ಮಿಂಚಿದ್ದ ವಿರಾಟ್ ಒಂದು ರನೌಟ್ ಹಾಗೂ ಒಂದು ಅದ್ಭುತ ಕ್ಯಾಚ್ ಮೂಲಕ ಭಾರತದ ಗೆಲುವಿಗೆ ಕಾರಣರಾಗಿದ್ದರು. 19ನೇ ಓವರ್’ನಲ್ಲಿ ಟಿಮ್ ಡೇವಿಡ್’ರನ್ನು ಡೈರೆಕ್ಟ್ ಹಿಟ್ ಮೂಲಕ ರನೌಟ್ ಮಾಡಿದ್ದ ಕೊಹ್ಲಿ, ಅಂತಿಮ ಓವರ್’ನಲ್ಲಿ ಆಸೀಸ್ ಗೆಲುವಿಗೆ 3 ಎಸೆತಗಳಲ್ಲಿ 7 ರನ್ ಬೇಕಿದ್ದಾಗ ಪ್ಯಾಟ್ ಕಮಿನ್ಸ್ ಕ್ಯಾಚನ್ನು ಲಾಂಗ್ ಆನ್’ನಲ್ಲಿ ಒಂದೇ ಕೈನಲ್ಲಿ ಹಿಡಿದು ಗಮನ ಸೆಳೆದಿದ್ದರು.

https://twitter.com/ABDfanatic17/status/1582022541950210048?s=20&t=JOVnwyDbBzQtUSvgRbmiMw

ವಿಶ್ವಕಪ್’ಗೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾ ಬುಧವಾರ ನಡೆಯುವ ತನ್ನ 2ನೇ ಹಾಗೂ ಕೊನೆ ಅಭ್ಯಾಸ ಪಂದ್ಯದಲ್ಲಿ 2021ರ ರನ್ನರ್ಸ್ ಅಪ್ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಬ್ರಿಸ್ಬೇನ್’ನ ಗಾಬಾ ಮೈದಾನದಲ್ಲಿ ನಡೆಯಲಿದೆ. ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯುವ ತನ್ನ ಆರಂಭಿಕ ಪಂದ್ಯದಲ್ಲಿ ರೋಹಿತ್ ಶರ್ಮಾ ಸಾರಥ್ಯದ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : Tamil Thalaivas : ಪಾಟ್ನಾ ವಿರುದ್ಧ ರೋಚಕವಾಗಿ ಗೆದ್ದ ತಮಿಳ್ ತಲೈವಾಸ್, ದಬಾಂಗ್ ಡೆಲ್ಲಿಗೆ ಸತತ 5ನೇ ಜಯ

ಇದನ್ನೂ ಓದಿ : Roger Binny BCCI president : ಬಿಸಿಸಿಐನ 36ನೇ ಅಧ್ಯಕ್ಷರಾಗಿ ಕರ್ನಾಟಕದ ರೋಜರ್ ಬಿನ್ನಿ ಅವಿರೋಧ ಆಯ್ಕೆ

Virat Kohli joins Babar Azam net practices with Pakistan Players

Comments are closed.