ಉಡುಪಿ : ಜೂನ್‌ 9 ರಿಂದ 5 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ

ಉಡುಪಿ : Udupi Drinking water Shortage: ಮಳೆಯ ಕೊರತೆಯ ನಡುವಲ್ಲೇ ಉಡುಪಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸದ್ಯ ಉಡುಪಿ ನಗರದಲ್ಲಿ ಮೂರು ದಿನಗಳಿಗೊಮ್ಮೆ ಕುಡಿಯುವ ನೀರನ್ನು ಪೂರೈಕೆ ಮಾಡಲು ರೇಷನಿಂಗ್‌ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿತ್ತು. ಆದ್ರೆ ಬಜೆ ಡ್ಯಾಮ್‌ನಲ್ಲಿ ಕುಡಿಯುವ ನೀರಿನ ಶೇಖರ ತೀರಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜೂನ್‌ 9 ರಿಂದ 5 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ಉಡುಪಿ ನಗರ ಸಭೆ ತಿಳಿಸಿದೆ.

ಬಜೆ ಡ್ಯಾಮ್‌ನಲ್ಲಿ ಈಗಾಗಲೇ ನೀರು ತಳಮಟ್ಟದಲ್ಲಿದೆ. ಇದೇ ಮೊದಲ ಬಾರಿಗೆ ಡ್ಯಾಮ್‌ನಲ್ಲಿ ದಾಖಲೆಯ ಪ್ರಮಾಣದಲ್ಲಿ ನೀರಿನ ಕೊರತೆ ಕಂಡು ಬಂದಿದೆ. ಹೀಗಾಗಿ ಉಡುಪಿ ನಗರದ ಪರ್ಕಳ, ಸರಳೇಬೆಟ್ಟು, ಅನಂತನಗರ, ಈಶ್ವರನಗರ, ವಿದ್ಯಾರತ್ನ ನಗರ, ಶೀಂಬ್ರ ಭಾಗಗಳಿಗೆ ಜೂನ್‌ 8 ರ ಬದಲು ಜೂನ್‌ 9 ರಂದು ಕೊಳವೆಯ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತದೆ.

ಅಲ್ಲದೇ ಜೂನ್‌ 14 ರಂದು ಕಲ್ಮಾಡಿ, ಕೊಡವೂರು, ದೊಡ್ಡಣಗುಡ್ಡೆ, ಪುತ್ತೂರು ಭಾಗಗಳಿಗೆ ಟ್ಯಾಂಕ್‌, ಸಂತೆಕಟ್ಟೆ, ಸುಬ್ರಹ್ಮಣ್ಯ ನಗರ, ಕೊಡಂಕೂರು ವಾರ್ಡುಗಳಿಗೆ ನೀರು ಪೂರೈಕೆಯಾಗಲಿದೆ. ಜೂನ್‌ 19 ರಂದು ಇಂದಿರಾನಗರ, ಅಜ್ಜರಕಾಡು, ಎಸ್‌ಪಿ ಟ್ಯಾಂಕ್‌, ಪುತ್ತೂರು ಟ್ಯಾಂಕ್‌, ಗೋಪಾಲಪುರ, ಮೂಡುಬೆಟ್ಟು, ಹನುಮಂತನಗರ ಟ್ಯಾಂಕ್‌ನಿಂದ ಹನುಮಂತನಗರಕ್ಕೆ ನೀರು ಪೂರೈಕೆ ಮಾಡುವುದಾಗಿ ನಗರಸಭೆ ತಿಳಿಸಿದೆ. ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಹೊಂಡಗಳಿಂದ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದ್ದು, ಸಾರ್ವಜನಿಕರು ನೀರನ್ನು ಕುದಿಸಿ ಕುಡಿಯುವಂತೆ ನಗರಸಭಾ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ನಗರ ಪ್ರದೇಶ ಮಾತ್ರವಲ್ಲದೇ ಗ್ರಾಮೀಣ ಭಾಗಗಳಲ್ಲಿಯೂ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಬಹುತೇಕ ಬಾವಿಗಳಲ್ಲಿ ನೀರು ಬತ್ತಿ ಹೋಗಿದ್ದು, ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಚಂಡಮಾರುತದಿಂದಾಗಿ ಮಳೆ ಸುರಿಯುವ ಕುರಿತು ಉಡುಪಿ ಜಿಲ್ಲಾಡಳಿತ ಮುನ್ಸೂಚನೆಯನ್ನು ನೀಡಿದೆ. ಆದರೆ ಜಿಲ್ಲೆಯಾದ್ಯಂತ ಮಳೆ ಸುರಿಯುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.

ಇದನ್ನೂ ಓದಿ : Lust Stories 2 : ವಿಜಯ್‌ ವರ್ಮಾ ತಮನ್ನಾ ರೋಮ್ಯಾಂಟಿಕ್‌ ಕಿಸ್ಸಿಂಗ್‌

ಇದನ್ನೂ ಓದಿ : ಬೈಪಾರ್ಜೋಯ್ ಚಂಡಮಾರುತ : ಕರಾವಳಿ ಕರ್ನಾಟಕಕ್ಕೆ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

Udupi Drinking water Shortage water supply every 5 days from June 9

Comments are closed.