ಉಡುಪಿ : ಕೋಟ ಸಮೀಪದ ಮಣೂರಿನಲ್ಲಿರುವ ಉದ್ಯಮಿ ಓರ್ವರ ಮನೆಗೆ ಆತಂತುಕರ ತಂಡ ಭೇಟಿ ನೀಡಿದೆ. ಐಟಿ ಅಧಿಕಾರಿಗಳು, ಪೊಲೀಸರ ಸೋಗಿನಲ್ಲಿ ಬಂದ ತಂದ ಸದ್ಯ ಕೋಟ ಪರಿಸರದಲ್ಲಿ ಆತಂಕದ ಪರಿಸ್ಥಿತಿ ಸಷ್ಟಿಸಿದೆ. ಘಟನೆಯ ಬೆನ್ನಲ್ಲೇ ಪೊಲೀಸರು ತನಿಖೆಗೆ ಎರಡು ತಂಡಗಳನ್ನು ರಚಿಸಿದ್ದಾರೆ.

ನಾಲ್ಕರಿಂದ ಐದು ಮಂದಿಯ ತಂಡ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣೂರಿನಲ್ಲಿರುವ ಮನೆಯ ಬಾಗಿಲು ಬಡಿದಿತ್ತು. ಆದರೆ ಮನೆಯ ಮಾಲಕಿ ಬಾಗಿಲು ತೆರೆದಿರಲಿಲ್ಲ. ಆದರೆ ಸೆಕ್ಯೂರಿಟಿ ಸಂಸ್ಥೆಯ ಸಿಬ್ಬಂದಿ ಕರೆ ಮಾಡಿ ನಾಲ್ಕೈದು ಮಂದಿ ನಿಮ್ಮ ಮನೆಗೆ ಬಂದು ಬಲವಂತವಾಗಿ ಬಾಗಿಲು ತೆರೆಯಲು ಯತ್ನಿಸಿದ್ದಾರೆ ಎಂಬ ಸುದ್ದಿ ಮುಟ್ಟಿಸುತ್ತಲೇ ಆತಂಕ ಶುರುವಾಗಿದೆ.
ಮನೆಯ ಮಾಲಕಿ ಕವಿತಾ ಎಂಬವರು ಇದೀಗ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ದೂರಿನಲ್ಲಿ ಜುಲೈ 25 ರಂದು ಬೆಳಗ್ಗೆ 8.30 ರ ಸುಮಾರಿಗೆ ತನ್ನ ಮನೆಯ ಬಾಗಿಲನ್ನು ಯಾರೋ ಬಡಿದ ಸದ್ದು ಕೇಳಿಸಿತ್ತು. ಆದರೆ ತಾನು ಮನೆಯ ಬಾಗಿಲನ್ನು ತೆಗೆದಿರಲಿಲ್ಲ. ಆದರೆ 9 ಗಂಟೆಗೆ ಬಂದು ನೋಡಿದಾಗ ಅಲ್ಲಿ ಯಾರೂ ಇಲ್ಲರಲಿಲ್ಲ. ಆದರೆ ಸನ್ ಇನ್ ಸೆಕ್ಯೂರಿಟಿ ಸಂಸ್ಥೆಯವರು ಕರೆ ಮಾಡಿದ ಬೆನ್ನಲ್ಲೇ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ : ಬ್ರಹ್ಮಾವರ : ಗುಂಡಿಕ್ಕಿ ಯುವಕ ಹತ್ಯೆ, ಆರೋಪಿಗಳು ಪರಾರಿ
ಪೊಲೀಸ್ ಸಮವಸ್ತ್ರ ಧರಿಸಿದವರ ಜೊತೆಗೆ ಸಫಾರಿ ಧರಿಸಿದ್ದ ಆಧಿಕಾರಿಯಂತೆ ಕಾಣುವ ವ್ಯಕ್ತಿ ಹಾಗೂ ನಾಲ್ವರು ಸಿಬ್ಬಂಧಿಗಳು ಜೊತೆಗೆ ಇದ್ದರು. ಈ ತಂಡ ಒಟ್ಟು ಎರಡು ಕಾರಿನಲ್ಲಿ ಮನೆಗೆ ಬಂದಿತ್ತು. ಗೇಟ್ ಲಾಕ್ ಆಗಿರುವ ಕಾರಣಕ್ಕೆ ಮನೆಯ ಕಾಂಪೌಂಡ್‌ನಿಂದ ಜಿಗಿದು ಮನೆಯ ಮುಂಭಾಗಕ್ಕೆ ಬಂದು ಬಾಗಿಲು ಬಡಿದಿತ್ತು. ಅಲ್ಲದೇ ಬಾಗಿಲನ್ನು ಬಲವಂತವಾಗಿ ಓಪನ್ ಮಾಡಲು ಯತ್ನಿಸಿತ್ತು. ಅನ್ನೋ ಮಾಹಿತಿ ಇದೀಗ ಲಭ್ಯವಾಗಿದೆ.
ಆರಂಭದಲ್ಲಿ ಐಟಿ ಅಥವಾ ಇಡಿ ಅಧಿಕಾರಿಗಳು ಪೊಲೀಸರ ಜೊತೆಗೆ ಮನೆಗೆ ಬಂದಿದ್ದರು ಎಂದು ಭಾವಿಸಲಾಗಿತ್ತು. ಆದರೆ ಸೆಕ್ಯೂರಿಟಿ ಏಜೆನ್ಸಿ ಅವರು ನೀಡಿದ ಮಾಹಿತಿಯನ್ನು ತಿಳಿದ ನಂತರದಲ್ಲಿ ಅಪರಿಚಿತರು ಮನೆಯನ್ನು ದರೋಡೆ ಮಾಡುವ ಸಲುವಾಗಿ ಬಂದಿದ್ರಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಪೊಲೀಸರಿಗೆ ದೂರು ನೀಡಲಾಗಿದೆ.
ಇದನ್ನೂ ಓದಿ : ಉಡುಪಿ : ಕ್ರಿಪ್ಟೋ ಕರೆನ್ಸಿ ಹೂಡಿಕೆ ಆಸೆ ತೋರಿಸಿ 67 ಲಕ್ಷ ರೂಪಾಯಿ ವಂಚನೆ
ಕುಂದಾಪುರದ ಸೈನ್‌ಇನ್ ಸೆಕ್ಯೂರಿಟಿ ಸಂಸ್ಥೆಯ ಸಮಯಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದೆ. ಈ ಸಂಸ್ಥೆ ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ ನಡೆದಿದ್ದ ಹಲವು ಪ್ರಕರಣಗಳನ್ನು ತಪ್ಪಿಸಿತ್ತು. ಇದೀಗ ಮಣೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಅಗತ್ಯ ಮಾಹಿತಿಯನ್ನು ಒದಗಿಸಿದೆ. ಆದರೆ ಕಾರಿನಲ್ಲಿ ಬಂದಿರುವ ತಂಡ ಗುಂಡ್ಮಿ ಟೋಲ್ ತಪ್ಪಿಸಿ ಬೇರೆ ಮಾರ್ಗದಲ್ಲಿ ಸಂಚಾರ ನಡೆಸಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : Shirur Hill Collapse : ಶಿರೂರು ಗುಡ್ಡ ಕುಸಿತ ದುರಂತ – ಡ್ರೋನ್ ಕಾರ್ಯಾಚರಣೆ, ಅರ್ಜುನ್ ಓಡಾಡಿದ ವಿಡಿಯೋ ವೈರಲ್
ಸದ್ಯ ಮಣೂರಿನಲ್ಲಿ ನಡೆದಿರುವ ಘಟನೆ ಸ್ಥಳೀಯವಾಗಿ ಆತಂಕವನ್ನು ಸೃಷ್ಟಿಸಿದೆ. ಇಡಿ ಐಟಿ ಅಧಿಕಾರಿಗಳು ಬಂದಿದ್ರೆ ಸ್ಥಳೀಯ ಪೊಲೀಸರ ಸಹಕಾರವನ್ನು ಪಡೆಯುವ ಸಾಧ್ಯತೆಯಿತ್ತು. ಆದರೆ ಇಲ್ಲಿ ಹಾಗಾಗಿಲ್ಲ. ಇದೇ ಕಾರಣದಿಂದಲೇ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖಾ ತಂಡವನ್ನು ರಚಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
Udupi News Kota Manoor businessman came Suspected Persons An investigation has been started by the police