ವೇಣೂರು : ಅರಂಬೋಡಿ ಹಾಗೂ ವೇಣೂರು ಗ್ರಾಮ ಪಂಚಾಯಿತಿಗಳಿಗೆ ಮಾರ್ಚ್ 19ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಮತಯಾಚನೆಯನ್ನು ಮಾಡುತ್ತಿದೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ವೇಣೂರು, ಹೊಕ್ಕಾಡಿಗೋಳಿ ಹಾಗೂ ಅರಂಬೋಡಿ ಪ್ರದೇಶಗಳಲ್ಲಿ ಮತಯಾಚನೆ ಮಾಡಿದ್ದಾರೆ.

ಇಡೀ ದಿನ ಮತ ಯಾಚನೆ ನಡೆಸಿದ ಹರೀಶ್ ಕುಮಾರ್ ಪ್ರತಿ ಮನೆಮನೆಗೆ ತೆರಳಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಸಾಧನೆಗಳನ್ನು ಮತದಾರರಿಗೆ ಸೂಕ್ಷ್ಮವಾಗಿ ವಿವರಿಸಿದರು. ಮತಯಾಚನೆ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶೈಲೇಶ್ ಕುರ್ತುಕೋಡಿ ಉಪಸ್ಥಿತರಿದ್ದರು.